Advertisement

Rain ; ಮುಂಗಾರು ಮುನ್ನೆಚ್ಚರ: ಮೆಸ್ಕಾಂ ಸೂಚನೆ

12:30 AM May 24, 2024 | Team Udayavani |

ಮಂಗಳೂರು: ಜನರು ಸ್ವತಃ ವಿದ್ಯುತ್‌ ಸಂಪರ್ಕದ ದುರಸ್ತಿ ಕಾರ್ಯ ನಡೆಸುವುದು, ವಿದ್ಯುತ್‌ ಕಂಬಗಳಿಗೆ ಹತ್ತಿ ದುರಸ್ತಿ ನಡೆಸುವುದು, ಬಳಕೆ ಸಂದರ್ಭದಲ್ಲಿ ನಿರ್ಲಕ್ಷé ಮುಂತಾದವುಗಳಿಂದ ಅವಘಡ ಗಳಾಗುತ್ತಿವೆ. ಆದ್ದರಿಂದ ಬಳಕೆದಾರರು ವಿದ್ಯುತ್‌ ಬಗ್ಗೆ ನಿರ್ಲಕ್ಷé ತೋರದೆ ಮುನ್ನಚ್ಚರಿಕೆ ಹಾಗೂ ಸುರಕ್ಷಾ ಕ್ರಮಗಳನ್ನು ಪಾಲಿಸುವಂತೆ ಮೆಸ್ಕಾಂ ತಿಳಿಸಿದೆ.

Advertisement

ತುಂಡಾದ ಅಥವಾ ಇನ್ಸುಲೇಷನ್‌ ಇಲ್ಲದ ವಿದ್ಯುತ್‌ ತಂತಿಗಳನ್ನು ಮುಟ್ಟ ಬಾರದು. ವಿದ್ಯುತ್‌ ಕಂಬಗಳನ್ನು ಹತ್ತ ಬಾರದು ಮತ್ತು ದುರಸ್ತಿ ಮಾಡುವುದು ಅಪಾಯಕಾರಿ. ವಿದ್ಯುತ್‌ ಉಪಕರಣಗಳನ್ನು ಪರಿಣಿತರಿಂದ ದುರಸ್ತಿಗೊಳಿಸಬೇಕು. ಸ್ವಿಚ್‌ ಹಾಗೂ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬಾರದು. ವಿದ್ಯುತ್‌ ತಂತಿಗಳ ಮೇಲೆ ಬಿದ್ದಿರುವ ಮರದ ರೆಂಬೆಗಳನ್ನು ತೆಗೆಯಲು ಪ್ರಯತ್ನಿಸಬಾರದು. ಇಂತಹ ಸಂದರ್ಭದಲ್ಲಿ ಕೂಡಲೇ ಸ್ಥಳೀಯ ಮೆಸ್ಕಾಂ ಕಚೇರಿಗೆ ಅಥವಾ ಮೆಸ್ಕಾಂ ಲೈನ್‌ಮ್ಯಾನ್‌ಗಳಿಗೆ ತಿಳಿಸಬೇಕು.

ವಿದ್ಯುತ್‌ ತಂತಿಗಳ ಸಮೀಪ ಆಟ ಆಡಬಾರದು. ವಿದ್ಯುತ್‌ ತಂತಿಗಳ ಸನಿಹದಲ್ಲಿ ಬಟ್ಟೆಗಳನ್ನು ಒಣಗಲು ಹಾಕಬಾರದು ಮತ್ತು ಟ್ರಾನ್ಸ್‌ಫಾರ್ಮರ್‌ಗಳ ಸುತ್ತಲಿನ ತಂತಿ ಬೇಲಿ ಮುಟ್ಟಬಾರದು. ಒಂದೇ ಸಕೀìಟ್‌ಗೆ ಹಲವಾರು ಉಪಕರಣಗಳನ್ನು ಜೋಡಿಸ ಬಾರದು. ಸ್ವಿಚ್‌ ಬೋರ್ಡ್‌ ಗಳು ಮಕ್ಕಳ ಕೈಗೆ ಸಿಗದಂತೆ ಎಚ್ಚರ ವಹಿಸಬೇಕು. ಎಲೆಕ್ಟ್ರಿಕಲ್‌ ಉಪಕರಣಗಳ/ಸಾಕೆಟ್‌ಗಳ ಹತ್ತಿರ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವಂತಹ ಸಾಮಗ್ರಿಗಳನ್ನು ಇಡಬಾರದು. ನೀರು ಕಾಯಿಸಲು ತೆರೆದ ಕಾಯ್ಲ ಬಳಸಬಾರದು.

ವಿದ್ಯುತ್‌ ಲೈನ್‌ಗಳ ಕೆಳಗೆ ಸರಕು ಸಾಗಾಣಿಕೆ ಸಮಯದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಕಟ್ಟಡ ಕಾಮಗಾರಿಯ ವೇಳೆಯಲ್ಲಿ ಕಬ್ಬಿಣದ ಸರಳುಗಳನ್ನು ಸಾಗಿಸುವಾಗ ವಿದ್ಯುತ್‌ ಲೈನ್‌ಗೆ ತಾಗದಂತೆ ಎಚ್ಚರ ವಹಿಸಬೇಕು. ತಂತಿ ಬೇಲಿಗಳಿಗೆ ವಿದ್ಯುತ್‌ ಹಾಯಿಸಬಾರದು.

ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆಯಬಾರದು. ವಿದ್ಯುತ್‌ ಮಾರ್ಗದ ಕೆಳಗೆ ಅಥವಾ ಪಕ್ಕದಲ್ಲಿರುವ ಕೊಳವೆ ಬಾವಿ ದುರಸ್ತಿ ಕೆಲಸವನ್ನು ಮಾಡುವ ಮುನ್ನ ಮಸ್ಕಾಂ ಕಚೇರಿಗೆ ತಿಳಿಸಬೇಕು. ಐಎಸ್‌ಐ ಗುರುತನ್ನು ಹೊಂದಿರುವ ವಿದ್ಯುತ್‌ ಉಪಕರಣಗಳನ್ನು ಬಳಸಬೇಕು. ಕಟ್ಟಡ ನಿರ್ಮಾಣ ಮಾಡುವ ನಿಯಮಗಳ ಪ್ರಕಾರ ವಿದ್ಯುತ್‌ ಮಾರ್ಗ ಹಾಗೂ ಕಟ್ಟಡದ ನಡುವೆ ಅಂತರವನ್ನು ಕಾಯ್ದುಕೊಳ್ಳಬೇಕು. 3ನೇ ಪಿನ್‌ ಅರ್ಥಿಂಗ್‌ ಆಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಅಲ್ಯುಮಿನಿಯಂ ಏಣಿಗಳನ್ನು ಹಾಗೂ ಕೋಲುಗಳನ್ನು ಬಳಸುವಾಗ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು.

Advertisement

ವಿದ್ಯುತ್‌ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಉಚಿತ ದೂರವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಬಹುದು ಎಂದು ಮೆಸ್ಕಾಂ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next