ಇಲ್ಲಿನ ಫ್ರಾಂಕ್‌ಫರ್ಟ್‌ನ ಸಾಲ್ಟಾವು ನಿದ್ದಾದಲ್ಲಿ ರೈನ್‌ಮೈನ್ ಕನ್ನಡ ಸಂಘದ (ಆರ್‌ಎಂಕೆಎಸ್) ನೂತನ ಕಾರ್ಯಕಾರಿ ಸಮಿತಿ ರಚನೆಯ ಸಭೆಯನ್ನು ಜು.15 ರಂದು ಆಯೋಜಿಸಲಾಗಿತ್ತು. ಪ್ರತೀ 2 ವರ್ಷಕೊಮ್ಮೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಗುತ್ತದೆ.
2015-16 ರಿಂದಲೂ ಜರ್ಮನಿಯ ಫ್ರಾಂಕ್‌ಫರ್ಟ್ ನ ರೈನ್ ಮೈನ್ ಕನ್ನಡ ಸಂಘವು ರೈನ್ ಮೈನ್ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಹಲವಾರು ಕನ್ನಡಿಗರನ್ನು ಒಂದು ಗೂಡಿಸಿದೆ. ಅಲ್ಲದೆ ಕರುನಾಡ ಸಂಸ್ಕೃತಿ, ಭಾಷೆ, ಸಾಹಿತ್ಯ ಇಲ್ಲಿಯೂ ಜೀವಂತವಾಗಿರಿಸುವಲ್ಲಿ ಶ್ರಮಿಸುತ್ತಿದೆ.
ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ವೇದಮೂರ್ತಿ, ಉಪಾಧ್ಯಕ್ಷರಾಗಿ ರಿಯಾಜ್ ಶಿರಸಂಗಿ, ಕಾರ್ಯದರ್ಶಿಯಾಗಿ ಅಪೂರ್ವ ಬೆಳೆಯೂರು, ಸಹಕಾರ್ಯದರ್ಶಿಯಾಗಿ ಲೋಕನಾಥ ರಾವ್ ಚೌವ್ಹಾಣ್, ಖಜಾಂಚಿಯಾಗಿ ಅಕ್ಷಯ್ ಕಬಾಡಿ, ಸಹಖಜಾಂಚಿಯಾಗಿ ಪ್ರದೀಪ್ ಶೆಟ್ಟಿ, ಸಾರ್ವಜನಿಕ ಸಂಪರ್ಕ ಮೇಲುಸ್ತುವಾರಿಯಾಗಿ ವಿಶ್ವನಾಥ ಬಾಳೆಕಾಯಿ ಅವರು ಆಯ್ಕೆಯಾಗಿದ್ದಾರೆ.
ಕಳೆದೆರಡು ವರ್ಷಗಳಿಂದ ಸಂಘದ ಜವಾಬ್ದಾರಿಯನ್ನು ನಿರ್ವಹಿಸಿದ ಶಶಿಕಿರಣ್ ಮತ್ತು ಅವರ ತಂಡದವರು 6ನೇ ವಾರ್ಷಿಕ ಸಭೆಯನ್ನು ನಡೆಸಿ ಕಳೆದ ಎರಡು ವರ್ಷಗಳ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಿದರು. ಅನಂತರ ನೂತನ ಆಡಳಿತ ಮಂಡಳಿಯ ಸದಸ್ಯರಿಗೆ ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿದರು.
ವರದಿ: ಶೋಭಾ ಚೌಹ್ವಾಣ್ ಫ್ರಾಂಕ್‌ಫರ್ಟ್