Advertisement

ಮಳೆಹಾನಿ: ಶಾಸಕ ಭರತ್‌ ಶೆಟ್ಟಿ  ಭೇಟಿ, ನೆರವು

10:57 AM May 31, 2018 | Team Udayavani |

ಸುರತ್ಕಲ್‌: ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಸುರತ್ಕಲ್‌ ಹೊಸ ಮಾರುಕಟ್ಟೆ ಕಾಮಗಾರಿ ನಡೆಯುವ ಸ್ಥಳ ಕೆರೆಯಂತಾದರೆ, ಸುರತ್ಕಲ್‌ ಬಂಟರ ಭವನದ ಹಿಂದಿನ ತೋಡು ತುಂಬಿ ಹರಿದು ಸುತ್ತಮುತ್ತಲಿನ ಮನೆಗಳು ಮುಳುಗಡೆಯಾಗಿದ್ದವು. ಅಗರಮೇಲು, ಚೊಕ್ಕಬೆಟ್ಟು, 7ನೇ ಬ್ಲಾಕ್‌ ಕೃಷ್ಣಾಪುರದಲ್ಲಿ ವರುಣಾಭರದಿಂದ ವಸತಿ ಬಡಾವಣೆಗಳು ಭಾಗಶಃ ಮುಳುಗಡೆಯಾಗಿ ಜನತೆ ತೀವ್ರ ಸಂಕಷ್ಟ ಅನುಭವಿಸಬೇಕಾಯಿತು.

Advertisement

ಮಂಗಳವಾರ ಮುಂಜಾನೆಯೇ ಕೃತಕ ನೆರೆಯ ಮುನ್ಸೂಚನೆ ಪಡೆದ ಡಾ| ವೈ. ಭರತ್‌ ಶೆಟ್ಟಿ ಅವರು ಭೇಟಿ ನೀಡಿ ಅಧಿಕಾರಿಗಳು, ಸ್ಥಳೀಯರೊಂದಿಗೆ ಪರಿಶೀಲನೆ ನಡೆಸಿದ್ದರು. ನಾರಾಯಣ ಗುರು ಶಾಲೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಮಾಹಿತಿ ಪಡೆದರು. ಶಾಲೆಯ ಪುನರ್‌ ನಿರ್ಮಾಣ, ಮನೆ ಕುಸಿತ ಸಹಿತ ವಿವಿಧ ಪ್ರಕೃತಿ ವಿಕೋಪದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ಮರು ನಿರ್ಮಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ದೂರವಾಣಿ ಮೂಲಕ ಸಹಾಯ ಅರಸಿ ಬಂದ ಕಡೆಗೆ ಧಾವಿಸಿ ನೆರವು ನೀಡಿದರು. 

ಕಾರ್ಯಕರ್ತರು, ಸ್ಥಳೀಯರೊಂದಿಗೆ ಜಡಿ ಮಳೆಯನ್ನೂ ಲೆಕ್ಕಿಸದೆ ಸಂತ್ರಸ್ತರ ರಕ್ಷಣೆಯಲ್ಲಿ ತಾನೂ ಕೈಜೋಡಿಸಿ ಶ್ಲಾಘನೆಗೆ ಪಾತ್ರರಾದರು. ಬಿಜೆಪಿಯ ಕಾರ್ಪೊರೇಟರ್‌, ಪದಾಧಿಕಾರಿಗಳು, ಕಾರ್ಯಕರ್ತರು ಜತೆಗಿದ್ದರು.

ಪಂಜಿಮೊಗರು:  ಮನೆ ಕುಸಿದ ಸ್ಥಳಕ್ಕೆ ಭೇಟಿ 
ಪಣಂಬೂರು: ಪಂಜಿಮೊಗರುವಿನಲ್ಲಿ ಮಂಗಳವಾರ ಮನೆ ಕುಸಿದು ಮೂವರಿಗೆ ಗಾಯವಾಗಿದ್ದು, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಡಾ| ವೈ. ಭರತ್‌ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆಯವರೊಂದಿಗೆ ಮಾತುಕತೆ ನಡೆಸಿದ ಅವರು ಪರಿಹಾರ ಒದಗಿಸುವ ಭರವಸೆ ನೀಡಿದರು. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡರೂ ಪಾಲಿಕೆಯ ಎಡವಟ್ಟಿನಿಂದ ಕೃತಕ ನೆರೆ ಹಾವಳಿ ಉಂಟಾಗಿದೆ. ಇದನ್ನು ಅಧಿ ಕಾರಿಗಳೇ ಸರಿಪಡಿಸಬೇಕು ಎಂದು ತಾಕೀತು ಮಾಡಿದರು.

Advertisement

ಶಾಸಕ ಭರತ್‌ ಶೆಟ್ಟಿ ಮಾತನಾಡಿ, ಪಾಲಿಕೆ ವೈಫಲ್ಯದಿಂದ ಸಮಸ್ಯೆ ಗಂಭೀರವಾಯಿತು. ರಾಜ್ಯ ಸರಕಾರ ವಿಶೇಷ ತಂಡ ಕಳಿಸಿ ನಷ್ಟವನ್ನು ಕೂಡಲೇ ಬಿಡುಗಡೆ ಮಾಡಬೇಕು. ರಸ್ತೆ, ಸೇತುವೆ, ಮನೆ, ಶಾಲೆಗಳಿಗೆ ಹಾನಿಯಾಗಿದೆ. ಮಂಗಳೂರು ಉತ್ತರ ಕ್ಷೇತ್ರದ ಪ್ರತೀ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಪರಿಹಾರ ನೀಡುವ ಕುರಿತಂತೆ ಅಧಿಕಾರಿಗಳಲ್ಲಿ ಮಾತುಕತೆ ನಡೆಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.