Advertisement

Rain ಮಾ. 20 – 24 ಕೆಲವೆಡೆ ಸಾಮಾನ್ಯ ಮಳೆ ಸಾಧ್ಯತೆ

01:39 AM Mar 19, 2024 | Team Udayavani |

ಮಂಗಳೂರು: ಕರಾವಳಿಯಲ್ಲಿ ಈ ಬಾರಿ ಬಿಸಿಲಿನ ಝಳದಿಂದ ಬೇಸಗೆಯ ಆರಂಭಿಕ ದಿನಗಳಲ್ಲೇ ಭಾರೀ ಸೆಕೆಯ ಅನುಭವವಾಗುತ್ತಿದೆ. ಸದ್ಯದ ವಾತಾವರಣದ ಸ್ಥಿತಿಗತಿ ಪ್ರಕಾರ ಕರಾವಳಿ ಮತ್ತು ಮಲೆನಾಡಿದ ಕೆಲವು ಕಡೆಗಳಲ್ಲಿ ಮಾ. 20-24ರ ವರೆಗೆ ಚದುರಿದಂತೆ, ಹಗುರದಿಂದ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ದ.ಕ. ಜಿಲ್ಲೆಯಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ಒಟ್ಟು 60 ಮಿ.ಮೀ. ಮಳೆಯಾಗಿದ್ದು, ಉಡುಪಿಯಲ್ಲಿ 46 ಮಿ.ಮೀ. ಮಳೆಯಾಗಿದೆ. ಮಾರ್ಚ್‌ ತಿಂಗಳಿನಲ್ಲಿ ಇಲ್ಲಿಯ ವರೆಗೆ ಮಳೆಯಾಗಿಲ್ಲ. ದ.ಕ.ದಲ್ಲಿ ಸರಾಸರಿ ಮಾ. 1ರಿಂದ 18ರ ವರೆಗೆ 7 ಮಿ.ಮೀ., ಉಡುಪಿಯಲ್ಲಿ 3 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ ಒಂದು ಹನಿ ಮಳೆಯೂ ಸುರಿದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ದ.ಕ. ಜಿಲ್ಲೆಯಲ್ಲಿ 09 ಮಿ.ಮೀ. ಮತ್ತು ಉಡುಪಿ ಜಿಲ್ಲೆಯಲ್ಲಿ 2.8 ಮಿ.ಮೀ. ಮಳೆಯಾಗಿತ್ತು. ಜನವರಿ ಮತ್ತು ಫೆಬ್ರವರಿಯಲ್ಲಿ ಮಳೆಯಾಗಿರಲಿಲ್ಲ.ಮಂಗಳೂರಿನಲ್ಲಿ ಸೋಮವಾರ ದಿನದ ಗರಿಷ್ಠ ತಾಪಮಾನ 33.2 ಡಿ.ಸೆ. ಮತ್ತು ಕನಿಷ್ಠ 24.5 ಡಿ.ಸೆ. ತಾಪಮಾನ ದಾಖಲಾಗಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಗರಿಷ್ಠ ತಾಪಮಾನ 2 ಡಿ.ಸೆ. ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next