Advertisement
ಮಂಗಳೂರು ನಗರದಲ್ಲಿ ದಿನವಿಡೀ ಆಗಾಗ್ಗೆ ಸಾಧಾರಣ ಮಳೆಯಾಗಿದೆ. ಮಳೆಯ ಜತೆ ಗಾಳಿಯ ಅಬ್ಬರ ಹೆಚ್ಚಿತ್ತು. ಪುತ್ತೂರು, ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯ, ಸುಳ್ಯ, ಕಲ್ಮಕಾರು, ಬೆಳ್ತಂಗಡಿ, ಧರ್ಮಸ್ಥಳ, ನಾರಾವಿ, ಮಡಂತ್ಯಾರು, ಬಂಟ್ವಾಳ, ಕನ್ಯಾನ, ಸುರತ್ಕಲ್, ಉಳ್ಳಾಲ, ಮೂಡುಬಿದಿರೆ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ.
ಬೆಳ್ತಂಗಡಿ: ಶಿರಾಡಿ ಘಾಟಿಯಲ್ಲಿ ಸಂಚಾರ ತಡೆಹಿಡಿದಿದ್ದರಿಂದ ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಹೆಚ್ಚಿವೆ. ಕಳೆದ ಎರಡು ದಿನಗಳಲ್ಲಿ ಅಪಘಾತಗಳೂ ಹೆಚ್ಚಾಗಿವೆ. ನಿರಂತರ ಮಳೆಯಿಂದ ಚಾರ್ಮಾಡಿ ತಿರುವು ರಸ್ತೆಗಳು ಬಹಳಷ್ಟು ನಯವಾದ ಪರಿಣಾಮ ಬ್ರೇಕ್ ಸಿಗದೆ ಅಪಘಾತ ಸಂಭವಿಸುತ್ತಿವೆ. ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜು. 18 ಮತ್ತು 19ರಂದು ಕರಾವಳಿ ಭಾಗದಲ್ಲಿ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದ್ದು, ಎಲ್ಲೋ ಅಲರ್ಟ್ ಘೋಷಿಸಿದೆ. ಈ ವೇಳೆ ಗಾಳಿ-ಮಳೆ ಇರಲಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರವೂ ಹೆಚ್ಚು ಇರುವ ನಿರೀಕ್ಷೆ ಇದೆ.
Related Articles
ಉಡುಪಿ: ಜಿಲ್ಲೆಯಲ್ಲಿ ಮಳೆ ಮತ್ತೆ ಚುರುಕು ಪಡೆದಿದ್ದು, ಶನಿವಾರ ತಡರಾತ್ರಿ ಹಾಗೂ ರವಿವಾರ ಬಿಟ್ಟುಬಿಟ್ಟು ಉತ್ತಮ ಮಳೆ ಸುರಿದಿದೆ. ಗಾಳಿ, ಮಳೆಯಿಂದಾಗಿ ಒಟ್ಟು 39 ಮನೆಗಳಿಗೆ ಹಾನಿ ಸಂಭವಿಸಿದೆ. ಕುಂದಾಪುರ ಭಾಗದಲ್ಲಿ ಅತೀ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
Advertisement
ಬೈಂದೂರು, ಸಿದ್ದಾಪುರ, ಬ್ರಹ್ಮಾವರ, ಕಾಪು, ಉಡುಪಿ, ಹೆಬ್ರಿ, ಅಜೆಕಾರು, ಕಾರ್ಕಳ, ಪಡುಬಿದ್ರಿ, ಪೆರ್ಡೂರು ಸುತ್ತಮುತ್ತ ಬಿಟ್ಟುಬಿಟ್ಟು ವ್ಯಾಪಕ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಮಳೆ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ತಗ್ಗು ಮತ್ತು ಕೃಷಿ ಭೂಮಿಯಲ್ಲಿ ತಗ್ಗಿದ್ದ ನೆರೆ ನೀರಿನ ಪ್ರಮಾಣ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ನಿರ್ಮಾಣವಾಗದ ಪರಿಣಾಮ ಮಳೆ ನೀರಿನ ಅವಾಂತರ ಮುಂದುವರಿದಿದ್ದು, ಬ್ರಹ್ಮಾವರ, ಕಾಪು, ಉಡುಪಿ ಕರಾವಳಿ ಬೈಪಾಸ್ ಬಳಿ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಬ್ರಹ್ಮಾವರ ತಾಲೂಕಿನಲ್ಲಿ 3, ಕಾಪು 4, ಬೈಂದೂರು 5, ಕಾರ್ಕಳ 1, ಕುಂದಾಪುರ 26 ಮನೆಗಳಿಗೆ ಹಾನಿ ಸಂಭವಿಸಿದೆ.
ಉಡುಪಿ 66.3, ಬ್ರಹ್ಮಾವರ 57.4, ಕಾಪು 116.8, ಕುಂದಾಪುರ 70.8, ಬೈಂದೂರು 109.2, ಕಾರ್ಕಳ 119.7, ಹೆಬ್ರಿ 116.8 ಮಿ. ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 96.14 ಮಿ. ಮೀ. ಸರಾಸರಿ ಮಳೆ ಸಂಭವಿಸಿದೆ.