Advertisement

ಗುಡುಗು ಸಹಿತ ಅಕಾಲಿಕ ಮಳೆ: ಭತ್ತ ಕಟಾವಿಗೆ ಅಡ್ಡಿ

10:21 PM Nov 16, 2019 | Sriram |

ಕುಂದಾಪುರ: ಬೈಂದೂರು, ಕುಂದಾಪುರ ತಾಲೂಕಿನ ಎಲ್ಲೆಡೆ ಶನಿವಾರ ಮಧ್ಯಾಹ್ನದ ಅನಂತರ ಗುಡುಗು ಸಹಿತ ಅಕಾಲಿಕ ಮಳೆಯಾಗಿದೆ. ಮತ್ತೆ ಮಳೆ ಸುರಿದಿರುವುದರಿಂದ ಭತ್ತದ ಕಟಾವಿಗೆ ಅಡ್ಡಿಯಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

Advertisement

ಶನಿವಾರ ಕುಂದಾಪುರ, ಸಿದ್ದಾಪುರ, ಶಂಕರ ನಾರಾಯಣ, ಹಾಲಾಡಿ, ಬೆಳ್ವೆ, ಗೋಳಿ ಯಂಗಡಿ, ಅಲಾºಡಿ, ಕೊಲ್ಲೂರು, ಸೆಲ್ಕೊಡು, ಜಡ್ಕಲ್‌, ವಂಡ್ಸೆ, ಕುಂಭಾಸಿ, ತೆಕ್ಕಟ್ಟೆ, ಬಿದ್ಕಲ್‌ಕಟ್ಟೆ, ಬಿಜೂರು, ಉಪ್ಪುಂದ, ಮರವಂತೆ, ಬೈಂದೂರು, ಶಿರೂರು, ಗಂಗೊಳ್ಳಿ, ಹೆಮ್ಮಾಡಿ, ತಲ್ಲೂರು ಭಾಗದಲ್ಲಿ ಮಳೆಯಾಗಿದೆ.

ಕೆಲವು ದಿನಗಳ ಎರಡೆರಡು ಚಂಡ ಮಾರುತಗಳ ಹಿನ್ನೆಲೆಯಲ್ಲಿ ಗದ್ದೆಯಲ್ಲಿ ಭಾರೀ ನೀರು ನಿಂತಿದ್ದರಿಂದ ಕಟಾವು ವಿಳಂಬಗೊಂಡಿತ್ತು. ಈಗ ಮಳೆ ಕಡಿಮೆ ಹಾಗೂ ಕಟಾವು ಯಂತ್ರ ಸಿಕ್ಕಿರುವುದರಿಂದ ಕಟಾವು ಕಾರ್ಯ ನಿಧಾನಕ್ಕೆ ಅಲ್ಲಲ್ಲಿ ನಡೆಯುತ್ತಿತ್ತು. ಆದರೂ ಕೆಲವೆಡೆಗಳಲ್ಲಿ ಇನ್ನೂ ಕೂಡ ಕಟಾವು ಯಂತ್ರ ಬಾರದ ಕಾರಣ ಭತ್ತದ ಕಟಾವು ಕಾರ್ಯ ಆರಂಭವೇ ಆಗಿಲ್ಲ. ಇನ್ನು ಅಂಗಳದಲ್ಲಿ ಒಣಗಲು ಹಾಕಿದ ಬೈಹುಲ್ಲು ಕೂಡ ಮಳೆಗೆ ಒದ್ದೆಯಾಗಿದೆ. ಈ ಮಳೆಯಿಂದಾಗಿ ಮತ್ತೆ ರೈತರು ಚಿಂತಾಕ್ರಾಂತರಾಗಿದ್ದಾರೆ.

ಕೊಲ್ಲೂರು ಪರಿಸರ: ಉತ್ತಮ ಮಳೆ
ಕೊಲ್ಲೂರು: ಕಳೆದ ಎರಡು ದಿನಗಳಿಂದ ದೂರವಾಗಿದ್ದ ಮಳೆ ನ. 16ರಂದು ಕೊಲ್ಲೂರು ಪರಿಸರದಲ್ಲಿ ಧಾರಾಕಾರವಾಗಿ ಸುರಿದು ತಂಪೆರಚಿತು.

ಹಾಲ್ಕಲ್‌, ಸೆಳ್ಕೊàಡು, ಜಡ್ಕಲ್‌, ಮುದೂರು ಪರಿಸರದಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

Advertisement

ಸಿದ್ದಾಪುರ: ಮಳೆಯಿಂದ ರೈತರು ಕಂಗಾಲು
ಸಿದ್ದಾಪುರ: ಕಳೆದ ಹಲವು ದಿನಗಳಿಂದ ದೂರವಾಗಿದ್ದ ಮಳೆಯು ಶನಿವಾರ ಗುಡುಗು ಸಹಿತ ಭಾರೀ ಮಳೆಯಾಗಿದೆ. ಅಕಾಲಿಕ ಮಳೆ ಸುರಿದಿರುವುದರಿಂದ ರೈತರು ಹಾಗೂ ಕೃಷಿಕರು ಕಂಗಾಲಾಗಿದ್ದಾರೆ. ಕಟಾವು ಮಾಡಿ ಗದ್ದೆಯಲ್ಲಿ ಹಾಗೆಯೇ ಉಳಿದ ಭತ್ತದ ಪೈರು, ಓಣಗಿಸಲು ಅಂಗಳಕ್ಕೆ ಹಾಕಿದ ಅಡಿಕೆ ಮಳೆ ನೀರಿನಿಂದಾಗಿ ಒದ್ದೆಯಾಗಿವೆ.

ಸುರಿದ ಭಾರೀ ಮಳೆಯಿಂದಾಗಿ ಸಿದ್ದಾಪುರ ಪರಿಸರದ ಜನಜೀವನ ಅಸ್ತವ್ಯಸ್ತಗೊಂಡಿತು. ಶಂಕರನಾರಾಯಣ, ಹಾಲಾಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಅಮಾಸೆಬೈಲು, ಹೊಸಂಗಡಿ, ಹಳ್ಳಿಹೊಳೆ, ಆಜ್ರಿ, ಅಂಪಾರು ಮುಂತಾದ ಪ್ರದೇಶಗಳಲ್ಲೂ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next