Advertisement
ಕಾಸರ ಗೋಡು ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿದಿದೆ.ದ.ಕ. ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಉಪ್ಪಿನಂಗಡಿ ಸಹಿತ ವಿವಿಧೆಡೆ ಗುಡುಗು, ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗಿದೆ. ಬಂದಾರು ಗ್ರಾಮದ ಅಂಡಕೇರಿಯಲ್ಲಿ ರಿಕ್ಷಾದ ಮೇಲೆ ಮರ ಬಿದ್ದು ಹಾನಿಯಾಗಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಕಲ್ಮಂಜ, ದಿಡುಪೆ, ಮುಂಡಾಜೆ, ಕನ್ಯಾಡಿ, ಗುರಿಪ್ಪಳ್ಳ, ಚಿಬಿದ್ರೆ, ತೋಟತ್ತಾಡಿ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸಂಜೆ ವೇಳೆ ಮೋಡ ಕವಿದ ವಾತಾವರಣ ಇತ್ತು. ಮೂಡುಬಿದಿರೆ ಪರಿಸರದಲ್ಲಿ ಸಂಜೆ ಮಳೆಯಾಗಿದೆ.
ಉಡುಪಿ ಜಿಲ್ಲೆಯ ವಿವಿಧೆಡೆ ರವಿವಾರ ಸಂಜೆ ಮಳೆ ಯಾಗಿದೆ. ಉಡುಪಿ ನಗರ, ಸುತ್ತಮುತ್ತ ಸಂಜೆ ತನಕವೂ ಮೋಡದ ವಾತಾವರಣವಿತ್ತು. ಸಂಜೆ 7ರ ಬಳಿಕ ತಣ್ಣನೆಯ ಗಾಳಿ ಬೀಸಿ ಹನಿಹನಿ ಮಳೆಯಾಗಿದೆ. ಕಾರ್ಕಳ ತಾಲೂಕಿನ ವಿವಿಧೆಡೆಗಳಲ್ಲಿ ಗಾಳಿ ಮಳೆ ಸುರಿದಿದ್ದು, ಹಲವೆಡೆ ಹಾನಿ ಸಂಭವಿಸಿದೆ. ಕುಂದಾಪುರದ ವಿವಿಧೆಡೆ ರಾತ್ರಿ ಗುಡುಗು ಸಹಿತ ಮಳೆಯಾಗಿದೆ. ಕಾಸರಗೋಡು ಜಿಲ್ಲೆಯಾದ್ಯಂತ ಗುಡುಗು, ಸಿಡಿಲು, ಗಾಳಿಯೊಂದಿಗೆ ಉತ್ತಮ ಮಳೆ ಸುರಿದಿದೆ. ಕಡಬ: ಭಾರೀ ಮಳೆಗೆ ವಿವಿಧೆಡೆ ಹಾನಿ
ಕಡಬ: ರವಿವಾರ ಸಂಜೆ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಕಡಬ ತಾಲೂಕಿನ ವಿವಿಧೆಡೆ ಹಲವು ಮನೆಗಳಿಗೆ, ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
Related Articles
Advertisement