Advertisement

ರೋಹಿಣಿ ಮಳೆಗೆ-ಕೆರೆಗೆ ನೀರು; ಧರೆ ತಂಪು

01:30 PM Jun 05, 2021 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆ ಆಗುತ್ತಿದ್ದು, ರೈತರು ಲಾಕ್‌ಡೌನ್‌ ಸಂಕಷ್ಟದ ನಡುವೆಯೂ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.

Advertisement

ಗುರುವಾರ ರಾತ್ರಿ ಹಾಗೂ ಶುಕ್ರವಾರ ಸುರಿದ ಮಳೆಯಿಂದಾಗಿ ನಗರದ ಹೊಂಡಗಳಿಗೆ ಉತ್ತಮನೀರು ಬಂದಿದ್ದು, ದೊಡ್ಡ ಹೊಡ್ಡು ಭರ್ತಿಯಾಗಿದೆ. ಶುಕ್ರವಾರ ಬೆಳಗ್ಗೆಯಿಂದಲೇ ವಿವಿಧೆಡೆ ಬಿಸಿಲಿನತಾಪಮಾನ ಹೆಚ್ಚಿತ್ತು. ಮಧ್ಯಾಹ್ನ 1.30ರ ನಂತರ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು.ಚಿತ್ರದುರ್ಗದಲ್ಲಿ 2.30ಕ್ಕೆ ಆರಂಭವಾದ ಮಳೆಸುಮಾರು 1 ಗಂಟೆಗೂ ಹೆಚ್ಚು ಕಾಲ ಸುರಿಯಿತು. ಮಧ್ಯಾಹ್ನ 3ರ ಬಳಿಕ ಮಳೆಯ ರಭಸ ಹೆಚ್ಚಾಯಿತು. ತಾಲೂಕಿನ ಕೆಲ ಭಾಗಗಳಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ.

ಭಾರೀ ಗುಡುಗು, ಮಿಂಚು, ಗಾಳಿ ಸಹಿತ ಸುರಿದ ಮಳೆಯಿಂದಾಗಿ ನಗರದ ಹಲವೆಡೆ ಮನೆಗಳ ಮುಂದೆಇದ್ದ ತೆಂಗಿನ ಕಾಯಿ, ಗರಿಗಳು ಕೆಳಗೆ ಸುರಿದಿದ್ದವು. ಒಂದು ಹಂತದಲ್ಲಿ ಮರವೇ ನೆಲಕ್ಕೆ ಉರುಳುತ್ತದೆ ಎನ್ನುವ ಆತಂಕ ಸೃಷ್ಟಿಯಾಗಿತ್ತು. ನಗರದ ಕೆಲ ಬಡಾವಣೆಗಳಲ್ಲಿ ಚರಂಡಿಗಳು ತುಂಬಿ ರಸ್ತೆಗಳ ಮೇಲೆಲ್ಲ ನೀರು ಹರಿಯಿತು.

ಕೆಲವೆಡೆ ಸ್ವತ್ಛ ಕೂಡ ಆದವು. ನಗರ ವ್ಯಾಪ್ತಿಯ ತಗ್ಗು ಪ್ರದೇಶಗಳ ಹಲವು ಮನೆಗಳಿಗೆ ನೀರು ನುಗ್ಗಿದೆ. ನೀರು ಹೊರಹಾಕುವಲ್ಲಿ ಕುಟುಂಬಸ್ಥರು ಹೈರಾಣಾಗಿದ್ದಾರೆ ಜಿಲ್ಲೆಯ ಹಲವು ಗ್ರಾಮಗಳಲ್ಲೂ ಉತ್ತಮ ಮಳೆಯಾಗುತ್ತಿರುವ ಕಾರಣ ಕೃಷಿ ಚಟುವಟಿಕೆ ಇನ್ನಷ್ಟು ಗರಿಗೆದರಿದೆ. ಮುಂಗಾರು ಹಂಗಾಮುಆರಂಭವಾಗುತ್ತಿದ್ದು, ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳಲು ರೈತರಿಗೆ ಅನುಕೂಲವಾಗಿದೆ. ಈಗಾಗಲೇ ಅನೇಕ ರೈತರು ಜಮೀನು, ತೋಟದ ಕಾರ್ಯಗಳಲ್ಲಿ ಉತ್ಸಾಹದಿಂದ ತೊಡಗಿಕೊಂಡಿದ್ದಾರೆ. ಮಳೆ ಆರಂಭವಾದಗಿನಿಂದಲೂ ರೈತರಲ್ಲಿ ಒಂದಿಷ್ಟು ಭರವಸೆ ಮೂಡಿಸಿದೆ. ಗುರುವಾರ ರಾತ್ರಿ 11ರಿಂದ ಆರಂಭವಾದ ಬಿರುಸಿನ ಮಳೆ 11.30ರ ವರೆಗೂ ಸುರಿಯಿತು. ಕಳೆದ ಎರಡೂ¾ರು ದಿನಗಳಿಂದಲೂ ಆಗಿಂದಾಗ್ಗೆ ಮಳೆ ಸುರಿಯುತ್ತಿರುವ ಕಾರಣ ಧರೆ ತಂಪಾಗಿದೆ. ಅದರಂತೆ ತಾಪವೂ ಹೆಚ್ಚಾಗಿದೆ.

ಹಿರಿಯೂರು ತಾಲೂಕಿನಲ್ಲಿ ಹೆಚ್ಚು; ಹಿರಿಯೂರು ತಾಲೂಕಿನ ಇಕ್ಕನೂರಿನಲ್ಲಿ 70.4 ಮಿ.ಮೀಮಳೆಯಾಗಿದ್ದು ಇದು ಜಿಲ್ಲೆಯ ಅತೀ ಹೆಚ್ಚು ಮಳೆಯಾಗಿದೆ. ಚಿತ್ರದುರ್ಗ 1 ರಲ್ಲಿ 9.6, 2 ರಲ್ಲಿ 3.7, ತುರುವನೂರು 6.4, ಐನಹಳ್ಳಿ 7.8, ಚಳ್ಳಕೆರೆ 32, ಪರಶುರಾಂಪುರ 18.2, ತಳಕು 7.2, ನಾಯಕನಹಟ್ಟಿ 45.4, ಡಿ.ಮರಿಕುಂಟೆ 58.2, ಮೊಳಕಾಲ್ಮುರು 7, ರಾಯಾಪುರ 15.2, ಬಿ.ಜಿ.ಕೆರೆ 6.2, ಹಿರಿಯೂರು 54.6, ಬಬ್ಬೂರು 63.2, ಈಶ್ವರಗೆರೆ 54.8, ಸೂಗೂರು 25.2, ಹೊಸದುರ್ಗ 32.2, ಬಾಗೂರು 10.3, ಶ್ರೀರಾಂಪುರ 11, ಮಾಡದಕೆರೆ 28, ಹೊಳಲ್ಕೆರೆ 9.2,ರಾಮಗಿರಿ 15.4, ಚಿಕ್ಕಜಾಜೂರು 6.4, ಬಿ.ದುರ್ಗ 8.2,ಎಚ್‌.ಡಿ.ಪುರ 3.6, ತಾಳ್ಯ 6.2 ಮಿ.ಮೀ ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next