Advertisement

ಮಳೆ: ಭತ್ತದ ಬೆಳೆಗೆ ಅಪಾರ ಹಾನಿ

12:45 PM Nov 25, 2021 | Team Udayavani |

ಕೆಂಭಾವಿ: ಮಂಗಳವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ಪಟ್ಟಣ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳ ರೈತರ ಜಮೀನಿನಲ್ಲಿ ಬೆಳೆದ ಭತ್ತ ನೆಲಕಚ್ಚಿದ್ದು ಅಪಾರ ಹಾನಿ ಸಂಭವಿಸಿದೆ. ಮಳೆ ರೈತರಿಗೆ ಕಂಟಕವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.

Advertisement

ಕೆಂಭಾವಿ, ಯಡಿಯಾಪುರ, ಮುದನೂರ, ಕೂಡಲಗಿ, ಪರಸನಹಳ್ಳಿ, ಮಾಲಗತ್ತಿ, ಮಲ್ಲಾ, ಏವೂರ, ಕರಡಕಲ್‌, ಜೈನಾಪುರ, ನಗನೂರ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ಭತ್ತದ ಪೈರುಗಳಿಗೆ ಅಪಾರ ಹಾನಿಯಾಗಿದೆ. ಕೆಲ ದಿನಗಳಲ್ಲಿ ಭತ್ತ ಕಟಾವು ಮಾಡಬೇಕಾಗಿತ್ತು. ಮಳೆಯಿಂದ ಸಂಪೂರ್ಣ ನಾಶವಾಗಿದ್ದು, ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಹಲವು ರೈತರ ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ 17.2ಮಿಮೀ ಮಳೆಯಾಗಿದ್ದು, ತಾಲೂಕಿನಲ್ಲಿಯೇ ಅತಿ ಹೆಚ್ಚು ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಅಂದಾಜು ಪ್ರಕಾರ ಸುಮಾರು 15 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ನಾಶವಾಗಿದ್ದು, ಭತ್ತದ ಜೊತೆಗೆ 186 ಎಕರೆ ಕಬ್ಬು ನಾಶವಾಗಿದೆ. ಇದಲ್ಲದೆ ದ್ರಾಕ್ಷಿ ಮತ್ತು ಮೆಣಸಿನ ಗಿಡಗಳು ಸಂಪೂರ್ಣ ಹಾಳಾಗಿದ್ದು, ತೋಟಗಾರಿಕೆ ಇಲಾಖೆ ಹಾನಿಯ ಪ್ರಮಾಣ ಘೋಷಣೆ ಮಾಡಬೇಕಿದೆ. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದು, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next