Advertisement
ನಗರದಲ್ಲಿರುವ ಮೂರು ಸರಕಾರಿ ಕಚೇರಿ ಗಳನ್ನು ಹೊರತುಪಡಿಸಿದರೆ, ಉಳಿದಂತೆ ಯಾವುದೇ ಕಚೇರಿಗಳಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ ಎನ್ನುವುದು ಗೊತ್ತಾಗಿದೆ. ಅಂದರೆ, ಸರಕಾರಿ ವ್ಯವಸ್ಥೆಯಲ್ಲಿ ಇರುವ ಅಧಿಕಾರಿ ವರ್ಗದವರಿಗೇ ಮಳೆಕೊಯ್ಲು ಬಗ್ಗೆ ಅಷ್ಟೊಂದು ಬದ್ಧತೆ ಅಥವಾ ಇಚ್ಛಾಶಕ್ತಿ ಇಲ್ಲದಿರಬೇಕಾದರೆ, ಜನಸಾಮಾನ್ಯರನ್ನು ಆ ದಿಕ್ಕಿನಲ್ಲಿ ಎಷ್ಟರ ಮಟ್ಟಿಗೆ ಉತ್ತೇಜಿಸಲು ಸಾಧ್ಯ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವುದು ಸಹಜ.
Related Articles
Advertisement
‘ಉಪ ನಿರ್ದೇಶಕರ ಕಚೇರಿಯ ಹೊಸ ಕಟ್ಟಡ ಬೆಂದೂರ್‌ನಲ್ಲಿ ನಿರ್ಮಾಣ ಗೊಳ್ಳುತ್ತಿದ್ದು, ಅಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಲಾಗುವುದು’ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ನಾಯಕ್ ಹೇಳಿದರೆ, ‘ಮೇಲಧಿಕಾರಿಗಳಿಗೆ ಅನುಮತಿಗಾಗಿ ಪತ್ರ ಬರೆಯಲಾಗುವುದು. ಅನುಮತಿ ಸಿಕ್ಕಲ್ಲಿ ಅಳವಡಿಸಲಾಗುವುದು’ ಎಂದು ಪ್ರಭಾರ ಆರ್‌ಟಿಒ ಜಾನ್ ಮಿಸ್ಕಿತ್ ಹೇಳುತ್ತಾರೆ.
ಮನೆ-ಮನೆಗೆ ಮಳೆಕೊಯ್ಲು ‘ಸುದಿನ’ ನಮಗೆ ಪ್ರೇರಣೆ
ನಗರವಾಸಿಗಳನ್ನು ಮಳೆ ಕೊಯ್ಲು ವ್ಯವಸ್ಥೆಯತ್ತ ಉತ್ತೇಜಿಸುವ ಜತೆಗೆ ಅವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸುದಿನವು ‘ಮನೆ ಮನೆಗೆ ಮಳೆಕೊಯ್ಲು’ ಎನ್ನುವ ಅಭಿಯಾನ ಪ್ರಾರಂಭಿಸಿದೆ. ಇದಕ್ಕೆ ಪೂರಕವಾಗಿ, ನಗರ ವ್ಯಾಪ್ತಿಯ ಯಾವೆಲ್ಲ ಸರಕಾರಿ ಕಚೇರಿ ಕಟ್ಟಡಗಳಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಲಾಗಿದೆ ಎನ್ನುವ ವಾಸ್ತವಾಂಶ ತಿಳಿಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.