Advertisement

ಪತ್ರಿಕೆ ಪ್ರೇರಣೆಯಿಂದ ವಸತಿ ಸಮುಚ್ಚಯಕ್ಕೆ ಮಳೆಕೊಯ್ಲು ಅಳವಡಿಕೆ

12:31 AM Sep 04, 2019 | mahesh |

ಬೇಸಗೆಯಲ್ಲಿ ನೀರಿನ ಕೊರತೆ ವಿಪರೀತವಾಗಿ ಕಾಡಿದ ಹಿನ್ನೆಲೆಯಲ್ಲಿ ಕದ್ರಿ ಹಿಲ್ಸ್ ಬಳಿ ಇರುವ ದೇವ್‌ ಪ್ಯಾರಡೈಸ್‌ ವಸತಿ ಸಮುಚ್ಚಯದಲ್ಲಿ ಮಳೆಕೊಯ್ಲು ಅಳವಡಿಕೆ ಮಾಡಲಾಗಿದೆ.

Advertisement

ನೀರಿನ ಕೊರತೆ ಉಂಟಾದ ಸಮಯದಲ್ಲಿ ಪತ್ರಿಕೆ ಪ್ರಕಟಿಸಿದ ಅಭಿಯಾನದಿಂದ ಪ್ರೇರಣೆಗೊಂಡ ವಿಠ್ಠಲ್ ಶೆಣೈ ಅವರು ವಸತಿ ಸಮುಚ್ಚಯದಲ್ಲಿ ಮಳೆಕೊಯ್ಲು ಅಳವಡಿಸುವ ಬಗ್ಗೆ ಚಿಂತಿಸಿದ್ದಾರೆ. ಅದರಂತೆ ಸೂಕ್ತ ಮಾರ್ಗದರ್ಶನ ಪಡೆದು ಮಳೆಕೊಯ್ಲು ಅಳವಡಿಸಿದ್ದಾರೆ. ವಸತಿ ಸಮುಚ್ಚಯದ 3,500 ಚದರ ಅಡಿ ವಿಸ್ತಾರದ ತಾರಸಿಯಲ್ಲಿ ಬಿದ್ದ ಮಳೆ ನೀರನ್ನು ಫಿಲ್ಟರ್‌ ಮೂಲಕ ಬಾವಿಗೆ ಬಿಡಲಾಗಿದೆ. ಇದಕ್ಕೆ ಸುಮಾರು 40,000 ರೂ. ಖರ್ಚು ತಗಲಿದೆ. ಆದರೆ ಮುಂದಿನ ಬಾರಿ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎನ್ನುವ ನಂಬಿಕೆ ಇದೆ ಎನ್ನುತ್ತಾರೆ ವಿಠ್ಠಲ್ ಶೆಣೈ ಅವರು.

ಇಂದು ಬಪ್ಪನಾಡಿನಲ್ಲಿ ಮಳೆಕೊಯ್ಲು ಮಾಹಿತಿ
ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುವ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಸೆ. 4ರಂದು ಸಂಜೆ 6 ಗಂಟೆಗೆ ಮಳೆಕೊಯ್ಲು ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ. ಎಂಜಿನಿಯರ್‌ ಭರತ್‌ ಜೆ. ಅವರು ಮಾಹಿತಿ ನೀಡಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪಕ್ರಟನೆಯಲ್ಲಿ ತಿಳಿಸಿದ್ದಾರೆ.

ನೀರಿನ ಮಹತ್ವ ತಿಳಿಯುವಂತಾಗಿದೆ

‘ಉದಯವಾಣಿ ಸುದಿನ’ ಹಮ್ಮಿಕೊಂಡ ಮನೆ ಮನೆಗೆ ಮಳೆಕೊಯ್ಲು ಅಭಿಯಾನವು ಶ್ಲಾಘನೀಯ ವಿಚಾರ. ಈ ಅಭಿ ಯಾನದಿಂದ ಕುಡಿಯುವ ನೀರಿನ ಅಭಾವದ ಬಿಸಿಯಿಂದ ತತ್ತರಿಸುವ ಜೀವ ಸಂಕುಲಕ್ಕೆ ಮುಂದಿನ ದಿನಗಳಲ್ಲಿ ಸ್ವಲ್ಪಮಟ್ಟಿಗೆ ತಂಪುಣಿಸುವ ಕಾರ್ಯ ಇದಾಗಿದೆ. ಈ ಅಭಿಯಾನದಿಂದ ಸಾಮಾನ್ಯ ಮಂದಿಯಲ್ಲೂ ಭೌಗೋಳಿಕ ವ್ಯವಸ್ಥೆಯಲ್ಲಿ ನೀರಿನ ಜಲಮಟ್ಟ , ನೀರಿನ ಮಹತ್ವವನ್ನು ತಿಳಿಯುವಂತಾಗಿದೆ.
– ವಲ್ಲಿಬೋಳ ಕುಡ್ಲ, ಲೇಖಕ, ಮಂಗಳೂರು

ಪ್ರತಿಕ್ರಿಯೆಗಳು

ನೀರಿನ ಕೊರತೆಗೆ ಮಾನವನೇ ಕಾರಣನಾದ ಕಾರಣ ಇದರಿಂದ ಹಲವಾರು ಪಾಠ ಕಲಿತು ಇನ್ನು ಮುಂದೆಯಾದರೂ ನೀರನ್ನು ನಿಯಮಿತವಾಗಿ ಬಳಸುವಲ್ಲಿ ಹಾಗು ಸಂರಕ್ಷಿಸುವಲ್ಲಿ ಈ ರೀತಿಯ ಇಂಗು ಗುಂಡಿ, ಮಳೆ ನೀರಿನ ಕೊಯ್ಲಿನ ಬಗ್ಗೆ ಮಾಹಿತಿ ನೀಡುವ ಅಭಿಯಾನವು ಇನ್ನು ಮುಂದುವರಿಯಲಿ, ಉದಯವಾಣಿ ಪತ್ರಿಕಾ ತಂಡಕ್ಕೆ ಅಭಿನಂದನೆಗಳು.
– ಪೂಜಾ ಎಸ್‌. ಆಚಾರ್ಯ, ಶಿಮಂತೂರು
ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000
Advertisement
Advertisement

Udayavani is now on Telegram. Click here to join our channel and stay updated with the latest news.

Next