Advertisement
ಉಡುಪಿ, ಮಣಿಪಾಲ, ಮಲ್ಪೆ, ಪರ್ಕಳ, ಕುಂದಾಪುರ ನಗರ, ಕೋಟೇಶ್ವರ, ಬೀಜಾಡಿ, ಗೋಪಾಡಿ, ತೆಕ್ಕಟ್ಟೆ,ಬಸ್ರೂರು, ಬಿದ್ಕಲ್‌ಕಟ್ಟೆ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಅಮಾಸೆಬೈಲು, ಸಿದ್ದಾಪುರ, ಹೊಸಂಗಡಿ, ಶಂಕರನಾರಾಯಣ, ತಲ್ಲೂರು, ಹೆಮ್ಮಾಡಿ, ಗಂಗೊಳ್ಳಿ, ತ್ರಾಸಿ ಮತ್ತಿತರ ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಸಂಜೆ ವೇಳೆ ಸುರಿದ ಮಳೆಯಿಂದಾಗಿ ಕೆಲಸ ಮುಗಿಸಿ ಮನೆಗೆ ತೆರಳಲು ಸಂಕಷ್ಟ ಪಡುವಂತಾಯಿತು.
Related Articles
Advertisement
ಕೃಷಿಗೆ ಅಡ್ಡಿಕರಾವಳಿಯ ಕೆಲವೆಡೆಗಳಲ್ಲಿ ಇನ್ನೂ ಕೂಡ ಮುಂಗಾರು ಹಂಗಾಮಿನ ಕಟಾವು ಕಾರ್ಯ ಮುಗಿಯದೇ ಇರುವುದರಿಂದ ಮಳೆಯಿಂದಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ಕಟಾವು ಮುಗಿದ ಕಡೆಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ನೆಲಗಡಲೆ (ಶೇಂಗಾ) ಬೀಜ ಬಿತ್ತನೆಗೆ ಮುಂದಾಗುವ ವೇಳೆಯೇ ಮಳೆ ಬರುತ್ತಿರುವುದು ಸಹ ಅಡ್ಡಿಯಾಗಲಿದೆ. ಬಿತ್ತನೆಗೆ ಒಣ ಭೂಮಿ ಇದ್ದಷ್ಟು ಉತ್ತಮ. ಆದರೆ ಆಗಾಗ್ಗೆ ಬರುತ್ತಿರುವ ಮಳೆ ಯಿಂದಾಗಿ ಗದ್ದೆಗಳಲ್ಲಿ ತೇವಾಂಶ ಇರುವುದರಿಂದ ಬಿತ್ತನೆ ಮತ್ತಷ್ಟು ವಿಳಂಬ ಆಗಬಹುದು ಎನ್ನುವ ಆತಂಕ ರೈತರದ್ದಾಗಿದೆ.