Advertisement

ಬಿಡುವು ನೀಡಿದ ಮಳೆ; ಎಸೆಸೆಲ್ಸಿ ಪರೀಕ್ಷೆಗೆ ಶುಭ ಆರಂಭ

11:56 PM Jun 25, 2020 | Sriram |

ಉಡುಪಿ: ಜಿಲ್ಲೆಯಾದ್ಯಂತ 51 ಪರೀಕ್ಷಾ ಕೇಂದ್ರಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ಗುರುವಾರ ಆರಂಭಗೊಂಡಿತು. ಕೋವಿಡ್ 19 ಕಾರಣ ದಿಂದಾಗಿ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮಳೆ ಬಿಡುವು ನೀಡಿದ್ದು ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲವಾಯಿತು.

Advertisement

13,526 ವಿದ್ಯಾರ್ಥಿಗಳು
ಜಿಲ್ಲೆಯ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ 13,526 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಇಲ್ಲಿ ನೋಂದಣಿ ಮಾಡಿಕೊಂಡು ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯು ವವರು 586 ಹಾಗೂ ಹೊರ ಜಿಲ್ಲೆ ಯಲ್ಲಿ ನೋಂದಣಿ ಮಾಡಿ ಇಲ್ಲಿ ಪರೀಕ್ಷೆ ಬರೆಯುವವರು 82 ಮಂದಿ ಇದ್ದಾರೆ. ರೆಗ್ಯುಲರ್‌ ವಿದ್ಯಾರ್ಥಿಗಳು -12,520, ರೆಗ್ಯುಲರ್‌ ಪುನರಾವರ್ತಿತ ವಿದ್ಯಾರ್ಥಿಗಳು- 485, ಖಾಸಗಿ ವಿದ್ಯಾರ್ಥಿಗಳು- 376, ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು 145 ಆಗಿದ್ದಾರೆ.

ಕಂಟೈನ್ಮೆಂಟ್‌ ಝೋನ್‌ನಿಂದ ನಾಲ್ವರು ವಿದ್ಯಾರ್ಥಿಗಳು
ಯಾವುದೇ ಪರೀಕ್ಷಾ ಕೇಂದ್ರವು ಕಂಟೈನ್ಮೆಂಟ್‌ ಝೊàನ್‌ ಎಂದು ಘೋಷಣೆಯಾದರೆ ಬದಲಿ ಕೇಂದ್ರ ವನ್ನು ಗುರುತಿಸುವ ಬಗ್ಗೆ – ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದಲ್ಲಿ 2 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿತ್ತು. ಅದರಂತೆ ಕಂಟೈನ್‌ಮೆಂಟ್‌ ಝೋನ್‌ ನಿಂದ ಆಗಮಿಸಿದ ನಾಲ್ವರು ವಿದ್ಯಾರ್ಥಿ ಗಳಿಗೆ ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಲಾಗಿತ್ತು.

ಸೆಕ್ಷನ್‌ ಜಾರಿ
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸೆಕ್ಷನ್‌ ಜಾರಿ ಮಾಡಲಾಗಿತ್ತು ಹಾಗೂ ಝೆರಾಕ್ಸ್‌ ಅಂಗಡಿಗಳನ್ನು ಮುಚ್ಚಲಾಗಿತ್ತು. ವಿದ್ಯಾರ್ಥಿಗಳು 4 ಸಾಲುಗಳಲ್ಲಿ ಬರುವಂತಾಗಲು ಪರೀಕ್ಷಾ ಕೇಂದ್ರಗಳಲ್ಲಿ ಬಾಕ್ಸ್‌ಗಳನ್ನು ಅಳವಡಿಸಲಾಗಿತ್ತು. ಎಲ್ಲ ಕೇಂದ್ರಗಳಲ್ಲಿಯೂ ಆರೋಗ್ಯ ತಪಾಸಣೆ ನಡೆಯಿತು. 200 ಮಕ್ಕಳಿಗೆ ಒಂದರಂತೆ ಥರ್ಮಲ್‌ ಗನ್‌ಗಳನ್ನು ಒದಗಿಸಲಾಗಿತ್ತು. ಆರೋಗ್ಯ ಕಾರ್ಯಕರ್ತರು, ಸ್ಕೌಟ್ಸ್‌-ಗೈಡ್ಸ್‌ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯ ನಿರತರಾಗಿದ್ದರು.

ಬಸ್‌ ವ್ಯವಸ್ಥೆ
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲೆ ಯಲ್ಲಿ ಒಟ್ಟು 82 ಬಸ್ಸುಗಳನ್ನು ಖಾಸಗಿ ಶಾಲೆಗಳಿಂದ ಪಡೆಯಲಾಗಿತ್ತು. ಪ್ರತಿ ತಾಲೂಕಿನಲ್ಲಿ 5 ವಾಹನಗಳನ್ನು ಹೆಚ್ಚುವರಿಯಾಗಿ ತಹಶೀಲ್ದಾರರ ಹಂತದಲ್ಲಿ ಕಾಯ್ದಿರಿಸಲಾಗಿತ್ತು. ಅಗತ್ಯವಿದ್ದ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆಯನ್ನೂ ಮಾಡಲಾಗಿತ್ತು.

Advertisement

ಬಿಗಿ ಭದ್ರತೆ
ಪರೀಕ್ಷಾ ಕೇಂದ್ರಗಳಿಗೆ, ಪ್ರಶ್ನೆ ಪತ್ರಿಕೆ ರವಾನೆ, ಉತ್ತರ ಪತ್ರಿಕೆ ದಾಸ್ತಾನು ಕೊಠಡಿಗಳಿಗೆ ಭದ್ರತೆ ವಹಿಸುವ ಬಗ್ಗೆ ಪೊಲೀಸ್‌ ಇಲಾಖೆಯು ಎಲ್ಲ ರೀತಿಯ
ಮುನ್ನೆಚ್ಚರಿಕೆ ಕ್ರಮ ತೆಗೆದು ಕೊಂಡಿತ್ತು. ಸ್ಥಾನಿಕ ಜಾಗೃತ ದಳ, ಅನ್ಯ ಇಲಾಖಾ ಅಧಿಕಾರಿ ಗಳ ನಿಯೋಜನೆ, ಉಪ ನಿರ್ದೇಶಕರ ನೇತೃತ್ವದಲ್ಲಿ 2 ಜಾಗೃತ ದಳ ಹಾಗೂ ಡಯಟ್‌ಸಿಬಂದಿ ಬಳಸಿಕೊಳ್ಳಲಾಗಿತ್ತು.

ಬೇಗನೆ ಹಾಜರಾದ ವಿದ್ಯಾರ್ಥಿಗಳು
ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಬೆಳಗ್ಗೆ 7.30ರಿಂದಲೇ ಆಗಮಿಸಿದ್ದರು. 9 ಗಂಟೆ ವೇಳೆಗೆ ಬಹುತೇಕ ಎಲ್ಲ ವಿದ್ಯಾರ್ಥಿಗಳೂ ಹಾಜರಿದ್ದರು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಸುಸೂತ್ರವಾಗಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.
-ಶೇಷಶಯನ ಕಾರಿಂಜ, ಡಿಡಿಪಿಐ

ಕುಂದಾಪುರ ತಾ| 105 ಮಂದಿ ಗೈರು
ಕುಂದಾಪುರ: ತಾಲೂಕಿನಲ್ಲಿ 2,457 ವಿದ್ಯಾರ್ಥಿಗಳು 8 ಪರೀಕ್ಷಾ ಕೇಂದ್ರ ಗಳಲ್ಲಿ ಪರೀಕ್ಷೆ ಬರೆದರು. ನೋಂದಣಿ ಮಾಡಿಕೊಂಡಿರುವವರ ಪೈಕಿ 105 ಮಂದಿ ಗೈರಾಗಿದ್ದರು. ಈ ಪೈಕಿ ಕೆಲವರು ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಬಿಇಒ ಅಶೋಕ್‌ ಕಾಮತ್‌ ಅವರು ತಿಳಿಸಿದ್ದಾರೆ. ಪ್ರತಿಯೊಂದು ಕೇಂದ್ರದಲ್ಲೂ ಕೋವಿಡ್ 19 ಸುರಕ್ಷಾ ಕ್ರಮಕೈಗೊಳ್ಳಲಾಗಿತ್ತು. ಪರೀಕ್ಷೆ ನಡೆಯುತ್ತಿರುವ ಸಂದರ್ಭ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲಾಗುತ್ತಿತ್ತು.

ಶಿಕ್ಷಣ ಇಲಾಖೆ ಜತೆಗೆ ಆರೋಗ್ಯ, ಪೊಲೀಸ್‌ ಮೊದಲಾದ ಇಲಾಖೆಗಳೂ ಕೈಜೋಡಿಸಿವೆ. ಸರಕಾರದ ಆದೇಶದಂತೆ ಎಲ್ಲ ಕ್ರಮ ಪಾಲಿಸಲಾಗಿದೆ. 25 ಕೊಠಡಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲಾಗಿದ್ದು, ಕಂಟೈನ್‌ಮೆಂಟ್‌ ಝೋನ್‌ನಿಂದ ಯಾವುದೇ ವಿದ್ಯಾರ್ಥಿ ಬಂದಿಲ್ಲ. ಜ್ವರ ಪ್ರಕರಣ ಕಂಡು ಬಂದಿಲ್ಲ ಎಂದು ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್‌ಚಂದ್ರ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ವಲಯ: 80 ಮಂದಿ ಗೈರು
ಉಡುಪಿ ವಲಯದ 8 ಕೇಂದ್ರಗಳಲ್ಲಿ 2,071 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರು. 107 ಮಂದಿ ಅನ್ಯ ತಾಲೂಕು/ ಜಿಲ್ಲೆಗಳಲ್ಲಿ ಪರೀಕ್ಷೆ ಬರೆದಿದ್ದು, 80 ಮಂದಿ ಗೈರು ಹಾಜರಾಗಿದ್ದರು.ಅನ್ಯ ಜಿಲ್ಲೆಯಿಂದ ವಲಸೆ ಬಂದ ಇಬ್ಬರು ಇಲ್ಲಿ ಪರೀಕ್ಷೆ ಬರೆದರು. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 1,884.

ಕಾರ್ಕಳ ವಲಯ: 118 ಮಂದಿ ಗೈರು
ಕಾರ್ಕಳ ವಲಯದ 9 ಪರೀಕ್ಷಾ ಕೇಂದ್ರಗಳಲ್ಲಿ 2,685 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. 2,567 ವಿದ್ಯಾರ್ಥಿಗಳು
ಪರೀಕ್ಷೆ ಬರೆದರು.

98 ಮಂದಿ ವಿದ್ಯಾರ್ಥಿಗಳು ಹೊರ ತಾಲೂಕು/ಜಿಲ್ಲೆಗಳಲ್ಲಿ ಪರೀಕ್ಷೆ ಬರೆದಿದ್ದಾರೆ. 118 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 15 ಮಂದಿ ಅನ್ಯ ತಾಲೂಕು/ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 2,567.

ಬೈಂದೂರು ವಲಯ:
1.927 ವಿದ್ಯಾರ್ಥಿಗಳು
ಬೈಂದೂರು ವಲಯದಲ್ಲಿ ಒಟ್ಟು, 2,013 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದು, 1,927 ವಿದ್ಯಾರ್ಥಿ ಗಳು ಹಾಜರಾಗಿದ್ದಾರೆ. ಒಟ್ಟು 86 ಮಂದಿ ಗೈರುಹಾಜರಾಗಿದ್ದಾರೆ. ಅವರಲ್ಲಿ 50 ವಿದ್ಯಾರ್ಥಿಗಳು ಹೊರಜಿಲ್ಲೆಯವರು.

ಬ್ರಹ್ಮಾವರ ವಲಯ:
2,111 ವಿದ್ಯಾರ್ಥಿಗಳು
ಬ್ರಹ್ಮಾವರ: ಬ್ರಹ್ಮಾವರ ವಲಯದಲ್ಲಿ 2,111 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 158 ವಿದ್ಯಾರ್ಥಿಗಳು ಹೊರ ಜಿಲ್ಲೆಗಳಲ್ಲಿ ಪರೀಕ್ಷೆಯನ್ನು ಬರೆದಿದ್ದು, 14 ವಿದ್ಯಾರ್ಥಿಗಳು ಬೇರೆ ತಾಲೂಕು ಮತ್ತು ಜಿಲ್ಲೆಗಳಿಂದ ಆಗಮಿಸಿ ಬ್ರಹ್ಮಾವರ ತಾಲೂಕಿನಲ್ಲಿ ಪರೀಕ್ಷೆ ಬರೆದಿದ್ದಾರೆ. ಒಟ್ಟು 11 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ಮಲ್ಪೆ: 212 ವಿದ್ಯಾರ್ಥಿಗಳು
ಮಲ್ಪೆ: ಇಲ್ಲಿನ ಸರಕಾರಿ ಪೌಢಶಾಲೆ (ಫಿಶರೀಸ್‌) ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ 222 ವಿದ್ಯಾರ್ಥಿಗಳಲ್ಲಿ 212 ವಿದ್ಯಾರ್ಥಿಗಳು ಹಾಜರಿದ್ದರು. 9 ಮಂದಿ ಹೊರಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದು, ಒಬ್ಬರು ಗೈರು ಹಾಜರಾಗಿದ್ದರು. ಫಿಶರೀಸ್‌ ಶಾಲೆ, ಗಾಂಧಿ ಶತಾಬ್ದ ಶಾಲೆ, ನಾರಾಯಣಗುರು ಆಂಗ್ಲಮಾಧ್ಯಮ ಶಾಲೆ, ಫÉವರ್ ಆಫ್‌ ಪ್ಯಾರಡೈಸ್‌ ಮತ್ತು ಕಿದಿಯೂರು ವಿದ್ಯಾಸಮುದ್ರ ಹೀಗೆ ಒಟ್ಟು 5 ಕೇಂದ್ರಗಳಿದ್ದವು.

ಕೊಲ್ಲೂರು: 167 ವಿದ್ಯಾರ್ಥಿಗಳು
ಕೊಲ್ಲೂರು: ಇಲ್ಲಿನ ಶ್ರೀಮೂಕಾಂ ಬಿಕಾ ಹೈಸ್ಕೂಲ್‌ನಲ್ಲಿ 167 ವಿದ್ಯಾರ್ಥಿ ಗಳು ಹಾಜರಾಗಿದ್ದು, ಐವರು ಗೈರಾಗಿದ್ದಾರೆ. ಬೈಂದೂರು ತಹಶೀಲ್ದಾರ್‌ ಬಸಪ್ಪ ಪೂಜಾರ್‌, ಕ್ಷೇತ್ರ ಶಿಕ್ಷಣಾಧಿ ಕಾರಿ ಜ್ಯೋತಿ, ಸಮನ್ವಯಾಧಿಕಾರಿ ಅಬ್ದುಲ್‌ ರವೂಫ್, ನೋಡಲ್‌ ಅ ಧಿಕಾರಿ ಕರುಣಾಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ ಹಳನಾಡು, ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

ಬಿದ್ಕಲ್‌ಕಟ್ಟೆ: 266 ವಿದ್ಯಾರ್ಥಿಗಳು
ತೆಕ್ಕಟ್ಟೆ: ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಪರೀಕ್ಷಾ ಕೇಂದ್ರದಲ್ಲಿ ಮೊದಲ ದಿನವೇ ಸುಮಾರು 266 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಮೊದಲ ದಿನವೇ ಗ್ರಾಮೀಣ ಭಾಗದ ಎಸೆಸೆಲ್ಸಿ ವಿದ್ಯಾರ್ಥಿಗಳು ಹಾಜರಾದರು. ಒಟ್ಟು 269 ಮಂದಿ ನೋಂದಣಿ ಮಾಡಿ ಕೊಂಡಿದ್ದು, ಇಬ್ಬರು ಬೇರೆ ಜಿಲ್ಲೆಯಲ್ಲಿ ಪರೀಕ್ಷೆ ಬರೆದರು. ಹೊರ ಜಿಲ್ಲೆಯ ಓರ್ವ ವಿದ್ಯಾರ್ಥಿ ಇಲ್ಲಿ ಪರೀಕ್ಷೆ ಬರೆದಿದ್ದಾನೆ. ಇಬ್ಬರು ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಪ್ರಾಂಶು ಪಾಲ ಅಧೀಕ್ಷಕ ಎಂ.ಕರುಣಾಕರ ಶೆಟ್ಟಿ ತಿಳಿಸಿದ್ದಾರೆ.

ಕೋಟೇಶ್ವರ:
414 ವಿದ್ಯಾರ್ಥಿಗಳು
ಕೋಟೇಶ್ವರ: ಇಲ್ಲಿನ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ 414 ವಿದ್ಯಾರ್ಥಿಗಳು ಹಾಜರಿದ್ದು, ಓರ್ವ ಗೈರಾಗಿದ್ದಾನೆ. ಕುಂದಾಪುರ ತಹಶೀಲ್ದಾರ್‌ ಕೆ.ಬಿ. ಆನಂದಪ್ಪ, ತಾ.ಪಂ. ಕಾರ್ಯನಿರ್ವಹಣಾ ಧಿಕಾರಿ ಕೇಶವ ಶೆಟ್ಟಿಗಾರ್‌, ಕ್ಷೇತ್ರ ಶಿಕ್ಷಣಾ ಧಿಕಾರಿ ಅಶೋಕ್‌ ಕಾಮತ್‌, ಉಪ ಪ್ರಾಂಶುಪಾಲ ಚಂದ್ರಶೇಖರ, ನೋಡಲ್‌ ಅಧಿ ಕಾರಿ ಶೇಖರ ಶೆಟ್ಟಿಗಾರ್‌, ಮೇಲ್ವಿಚಾರಕರು ಅಗತ್ಯ ಕ್ರಮ ಕೈಗೊಂಡರು.

ಕಾಪು ತಾ|: ಪರೀಕ್ಷೆ ಬರೆದವರು 1,547, ಗೈರು 25
ಕಾಪು ಕಾಪು ತಾಲೂಕಿನ 7 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನ ತಾಲೂಕಿನಲ್ಲಿ 1,547 ಮಂದಿ ಪರೀಕ್ಷೆ ಬರೆದಿದ್ದಾರೆ. 25 ಮಂದಿ ಗೈರು ಹಾಜರಾಗಿದ್ದಾರೆ.
ಕಟಪಾಡಿ ಎಸ್‌.ವಿ.ಎಸ್‌.ನಲ್ಲಿ 281, ಅದಮಾರು ಪೂರ್ಣಪ್ರಜ್ಞ ಕಾಲೇಜಿನಲ್ಲಿ 242, ಶಿರ್ವ ಸಂತ ಮೇರಿ ಶಿಕ್ಷಣ ಸಂಸ್ಥೆಯಲ್ಲಿ 200, ಪೊಲಿಪು ಜೂನಿಯರ್‌ ಕಾಲೇಜಿನಲ್ಲಿ 361, ಶಿರ್ವ ಹಿಂದೂ ಜೂನಿಯರ್‌ ಕಾಲೇಜಿನಲ್ಲಿ 160, ಹೆಜಮಾಡಿ ಜೂನಿಯರ್‌ ಕಾಲೇಜಿನಲ್ಲಿ 192, ಇನ್ನಂಜೆ ಎಸ್‌.ವಿ.ಎಚ್‌. ಜೂನಿಯರ್‌ ಕಾಲೇಜಿನಲ್ಲಿ 280 ಸಹಿತ ಒಟ್ಟು 1,716 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಹಲವು ವಲಸೆ ಕಾರ್ಮಿಕರ ಮಕ್ಕಳು ಅವರವರ ಊರಿನಲ್ಲಿ ಪರೀಕ್ಷೆ ಬರೆದಿದ್ದಾರೆ.

ಪ್ರತಿ ಕೇಂದ್ರದಲ್ಲೂ ಸ್ಯಾನಿಟೈಸೇಶನ್‌, ಥರ್ಮಲ್‌ ಸ್ಕ್ರೀನಿಂಗ್‌ ಮತ್ತು ಸಾಮಾಜಿಕ ಅಂತರ ಪಾಲನೆಗೆ ವಿಶೇಷ ವ್ಯವಸ್ಥೆ ಮಾಡಿಕೊಡಲಾಗಿದೆ. ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಸಿಬಂದಿ ಮತ್ತು ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿಗಳ ಥರ್ಮಲ್‌ ಪರೀಕ್ಷೆ ನಡೆಸಿದರು. ಪೊಲೀಸ್‌ ಸಿಬಂದಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ್ದರು.

ನಕ್ಸಲ್‌ಪೀಡಿತ ಪ್ರದೇಶದ 2 ಕೇಂದ್ರಗಳಲ್ಲಿ 488 ಮಂದಿ
ಸಿದ್ದಾಪುರ: ನಕ್ಸಲ್‌ ಪೀಡಿತ ಪ್ರದೇಶಗಳನ್ನು ಒಳಗೊಂಡ ಸಿದ್ದಾಪುರ ಹಾಗೂ ಶಂಕರನಾರಾಯಣ ಸರಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 488 ವಿದ್ಯಾರ್ಥಿ ಗಳು ಪರೀಕ್ಷೆ ಬರೆದರು.

ಸಿದ್ದಾಪುರದಲ್ಲಿ 5 ಶಾಲೆಗಳಿಂದ 283 ಮಂದಿ ನೋಂದಣಿ ಮಾಡಿಕೊಂಡಿದ್ದು 270 ಮಂದಿ ಹಾಜರಾದರು. 9 ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆದರು. ನಾಲ್ವರು ಗೈರಾಗಿದ್ದಾರೆ.

ಶಂಕರನಾರಾಯಣ ಕೇಂದ್ರದಲ್ಲಿ 3 ಶಾಲೆಗಳಿಂದ 223 ವಿದ್ಯಾರ್ಥಿಗಳು ನೋಂದಾ ಯಿಸಿಕೊಂಡಿದ್ದು, 207 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆದರು. 10 ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆದರೆ, ಉಳಿದ 6 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಈ ಪರೀಕ್ಷಾ
ಕೇಂದ್ರದಲ್ಲಿ ಹೊರ ತಾಲೂಕಿನ 5 ವಿದ್ಯಾರ್ಥಿ ಗಳು ಪರೀಕ್ಷೆ ಬರೆದರು.

ಸಿದ್ದಾಪುರ ಪರೀಕ್ಷಾ ಕೇಂದ್ರ
ಸಿದ್ದಾಪುರ ಪರೀಕ್ಷಾ ಕೇಂದ್ರವು 5 ಪ್ರೌಢಶಾಲೆಗಳನ್ನು ಒಳಗೊಂಡಿದೆ. ಸಿದ್ದಾಪುರ ಸರಕಾರಿ ಪ್ರೌಢಶಾಲೆಯಿಂದ 148 ಮಂದಿ, ಹೊಸಂಗಡಿ ಸರಕಾರಿ ಪ್ರೌಢಶಾಲೆಯಿಂದ 31 ಮಂದಿ, ಅಂಪಾರು ಸಂಜಯ ಗಾಂಧಿ ಸರಕಾರಿ ಪ್ರೌಢಶಾಲೆಯಿಂದ 31 ಮಂದಿ, ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ಪ್ರೌಢಶಾಲೆ ಕಮಲಶಿಲೆಯಿಂದ 31 ಮಂದಿ ಮತ್ತು ಖಾಸಗಿ ಶಾಲೆಯಾದ ಸಿದ್ದಾಪುರ ಸರಸ್ವತಿ ವಿದ್ಯಾಲಯದಿಂದ 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.

Advertisement

Udayavani is now on Telegram. Click here to join our channel and stay updated with the latest news.

Next