Advertisement

ಅಂಬೋಲಿಯಲ್ಲಿ ಮಳೆ, ಕಪ್ಪೆ ಮತ್ತು ಫೊಟೋಗ್ರಫಿ

06:30 AM Oct 01, 2017 | Harsha Rao |

ದಕ್ಷಿಣ ಮಹಾರಾಷ್ಟ್ರದ ಗಿರಿಧಾಮ ಅಂಬೋಲಿ ಪ್ರವೇಶಿಸುತ್ತಿದ್ದಂತೆ ನಮ್ಮನ್ನು ಸ್ವಾಗತಿಸಿದ್ದು ದಟ್ಟ ಮಂಜು. ಅದರೊಳಗೆ ನಮ್ಮ ಕಾರು ತೇಲಿಹೋಗುತ್ತಿರುವಾಗಲೇ ಕೆಲವೇ ಕ್ಷಣಗಳಲ್ಲಿ ಮಂಜು ಮರೆಯಾಗಿ ಜೋರು ಮಳೆ ಸುರುವಾಯ್ತು. ನಮ್ಮ ರಿಸಾರ್ಟ್‌ ತಲುಪಿದ ನಂತರ ನಾವು ಹೊರಗೆ ಬರಲಾಗಲೇ ಇಲ್ಲ. ಕಾರಣ ಅಂದರೆ, ದೊಡª ಮಳೆ ಆಕಾಶಕ್ಕೆ ತೂತು ಬಿದ್ದಂತೆ ಸುರಿಯುತ್ತಿತ್ತು. ಸುಮಾರು ಒಂದು ಗಂಟೆಯ ನಂತರ ಮಳೆ ಕಡಿಮೆಯಾಯಿತೆಂದು ಹೊರಬಂದರೆ ಮತ್ತದೇ ಮಂಜು ಆವರಿಸಿದ್ದು ಐದೇ ನಿಮಿಷವಷ್ಟೇ. ಮತ್ತೆ ಸುರುವಾದ ಮಳೆ ಸತತವಾಗಿ ಒಂದೂವರೆ ಗಂಟೆ ಸುರಿಯಿತು.

Advertisement

“ಹೀಗಾದರೆ ನಾವು ಫೋಟೊಗ್ರಫಿ ಮಾಡಿದ ಹಾಗೆ’ ಅಂತ ಅಲ್ಲಿನವರಿಗೆ ಹೇಳಿದಾಗ “ಸರ್‌, ಚಿಂತಿಸಬೇಡಿ, ನಿಮ್ಮ ಅದೃಷ್ಟ ಚೆನ್ನಾಗಿದೆ. ಇಂಥ ಜೋರು ಮಳೆಯಲ್ಲಿಯೇ ಅನೇಕ ಹಾವುಗಳು ಹಲ್ಲಿಗಳು, ಕಪ್ಪೆಗಳು ಹೊರಬರುವುದು. ರಾತ್ರಿ ಕಾಡಿಗೆ ಹೋಗೋಣ. ಅವೆಲ್ಲವೂ ಖಂಡಿತ ಸಿಗುತ್ತವೆ’ ಎಂದು ನಮಗೆ ಧೈರ್ಯ ತುಂಬಿದರು. “ಅಂದ ಹಾಗೆ ಕಳೆದ ಇಪ್ಪತ್ತನಾಲ್ಕು ಗಂಟೆಯಲ್ಲಿ 330 ಎಂಎಂ ಮಳೆಯಾಗಿದೆ’ ಅಂದ್ರು.

ಇಡೀ ಬೆಂಗಳೂರಿಗೆ ಮಳೆಗಾಲದಲ್ಲಿ ಆಗುವ ಮಳೆ 970 ಎಂಎಂ ಅದರಲ್ಲಿ ಮೂರನೇ ಒಂದು ಭಾಗ ಒಂದೇ ದಿನ ಆಗಿದೆಯಲ್ಲ ಅಂತ ತಿಳಿದು ನಮಗೆ ಆಶ್ಚರ್ಯವಾಯ್ತು. ರಾತ್ರಿ ಹತ್ತು ಗಂಟೆಗೆ ಕಾಲಿಗೆ ಬೂಟು, ಮೈಗೆ ರೈನ್‌ಕೋಟ್‌, ಕೈಯಲ್ಲಿ ಕೊಡೆ, ಮತ್ತೂಂದು ಕೈಯಲ್ಲಿ ಬ್ಯಾಟರಿ, ತಲೆಗೆ ಮಳೆ ಟೋಪಿ ಹಾಕಿಕೊಂಡಿದ್ದಲ್ಲದೇ ನಮ್ಮ ಕುತ್ತಿಗೆಗೆ ತೂಗುಬಿದ್ದ ಕೆಮರಾಕ್ಕೂ ಮಳೆ ಕೋಟು, ರೈನ್‌ ಕವರ್‌ ಹಾಕಿ ಅಂತ ಜೋರು ಮಳೆಯಲ್ಲಿ ಗೈಡ್‌ ಜೊತೆಗೆ ಫೋಟೊಗ್ರಫಿಗಾಗಿ ಟ್ರಕ್ಕಿಂಗ್‌ ಹೊರಟೆವು. ಎರಡು ಕಿ. ಮೀ. ನಡಿಗೆ ಸಾಗುವಷ್ಟರಲ್ಲಿ ನಮಗೆ ಕೇಳಿಸುತ್ತಿದ್ದುದ್ದು ತರಹೇವಾರಿ ಕಪ್ಪೆಗಳ ಟ್ರೂ ಟ್ರೂ, ವಟರ್‌, ವಟರ್‌ ಶಬ್ದದ ಜೊತೆಗೆ ಜೋರು ಮಳೆಯ ಶಬ್ದ ಜುಗಲ್‌ಬಂದಿ.

 ನಮಗೆ ಮೊದಲು ಕಾಣಿಸಿದ್ದು ಗ್ರೀನ್‌ವೈನ್‌ ವೈಪರ್‌. ಬೇಟೆಗಾಗಿ ಕಾಯುತ್ತಿದ್ದ ಅದರ ಫೋಟೊ ತೆಗೆದು ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಒಂದು ಕಲ್ಲುಬಂಡೆಯ ಪಕ್ಕದಲ್ಲಿ ಎರಡು ಪುಟ್ಟ ಕಪ್ಪೆಗಳ ಮಿಲನಕ್ರಿಯೆ ನಡೆಯುತ್ತಿತ್ತು. ಅದರ ಫೋಟೊ ಕ್ಲಿಕ್ಕಿಸಿದೆವು. ಕಲ್ಲಿನ ಬಣ್ಣಕ್ಕೆ ಹೊಂದಿಕೊಳ್ಳುವಂತೆ ಕೊಮಾಪ್ಲೇಜ್‌ ಆಗಿದ್ದ ವಿಸ್ಮಯಕ್ಕೆ ಬೆರಗಾಗಿ ಮುಂದೆ ಸಾಗುವಷ್ಟರಲ್ಲಿ ನಮ್ಮನ್ನು ಸಣ್ಣಗೆ ಹರಿಯುವ ಕಾಲುವೆಯೊಳಗೆ ಇಳಿಸಿಬಿಟ್ಟರು. ಅರ್ಧ ಅಡಿ ನೀರಿದ್ದ ಆ ಕಾಲುವೆಯೊಳಗೆ ಕತ್ತಲಲ್ಲಿ ಬ್ಯಾಟರಿ ಬಿಟ್ಟುಕೊಂಡು ಸುಮಾರು ದೂರ ಸಾಗುವಷ್ಟರಲ್ಲಿ ನೀರಿನತ್ತ ಕೆಳಮುಖ ಮಾಡಿದ್ದ ಎಲೆಗಳ ಮೇಲೆ ಕಪ್ಪೆಯ ಮೊಟ್ಟೆಗಳು ಕಾಣಿಸಿದವು. ಈ ಮೊದಲು ಮೊಣಕಾಲವರೆಗೆ ಪೂರ್ತಿ ನೆನೆದಿದ್ದ ನಾವು ನೀರಿನೊಳಗೆ ಕುಳಿತು ಅವುಗಳ ಫೋಟೊ ಕ್ಲಿಕ್ಕಿಸುವಷ್ಟರಲ್ಲಿ ಸೊಂಟದವರೆಗೆ ನೆನೆದಾಗಿತ್ತು. ಹಾಗೆ ಕಾಲುವೆಯಲ್ಲಿ ಮುಂದೆ ಸಾಗುವಷ್ಟರಲ್ಲಿ ನೆಲಕ್ಕೆ ಮುಖ ಮಾಡಿ ಬೇಟೆಗಾಗಿ ಕಾಯುತ್ತಿದ್ದ ಪಿಟ್‌ ವೈಪರ್‌ ಹಾವಿನ ಫೋಟೊ ಕ್ಲಿಕ್ಕಿಸಿದೆವು. ಅದರ ಪಕ್ಕದಲ್ಲಿ ಎಲೆಯ ಮೊಟ್ಟೆಗಳ ಜೊತೆಗೆ ಕುಳಿತ ರಿಂಕಲ್‌ ಫ‌ಗ್‌ ಕಪ್ಪೆ ಕುಳಿತಿತ್ತು. ಅದನ್ನು ಕ್ಲಿಕ್ಕಿಸಿದೆವು. ಹೀಗೆ ಆ ರಾತ್ರಿ ಏಳೆಂಟು ಕಿ.ಮೀ. ಸುತ್ತಾಡಿ ಮತ್ತಷ್ಟು ಕಪ್ಪೆಗಳು ಮತ್ತು ಹಾವುಗಳ ಫೋಟೊಗಳನ್ನು ಕ್ಲಿಕ್ಕಿಸಿ ವಾಪಸ್‌ ಬರುವಷ್ಟರಲ್ಲಿ ರಾತ್ರಿ ಒಂದು ಗಂಟೆ ದಾಟಿತ್ತು. ನಾವು ಹಾಕಿದ್ದ ಮಳೆಕೋಟು, ಒಳಗಿದ್ದ ಅಂಗಿ ಪ್ಯಾಂಟ್‌ ಎಲ್ಲವೂ ಸಂಪೂರ್ಣ ಒ¨ªೆಯಾಗಿತ್ತಾದರೂ ನಮ್ಮ ಕ್ಯಾಮೆರಾವನ್ನು ಒ¨ªೆಯಾಗಲು ಬಿಟ್ಟಿರಲಿಲ್ಲ.

ಮರುದಿನ ಹಗಲೆಲ್ಲ ಮತ್ತದೇ ಜೋರು ಮಳೆ, ಮಳೆ ನಿಂತರೆ ಮಂಜು. ಹೊರಗೆ ಎಲ್ಲೂ ಹೋಗಲು ಸಾಧ್ಯವಾಗಲಿಲ್ಲ. ಇದೆಲ್ಲಕ್ಕಿಂತ ನಮ್ಮ ಮುಖ್ಯ ಕೆಲಸವಿದ್ದಿದ್ದು ಒ¨ªೆಯಾಗಿದ್ದ ಬೂಟು, ರೈನ್‌ಕೋಟು, ಟೋಪಿ, ಕೊಡೆಗಳನ್ನು ಒಣಗಿಸಿಕೊಳ್ಳುವುದು, ಏಕೆಂದರೆ, ಈ ರಾತ್ರಿ ಕೂಡ ಮತ್ತೆ ಇದೇ ರೀತಿ ಮಳೆಯಲ್ಲಿ ಫೋಟೊಗ್ರಫಿಗೆ ಹೋಗಬೇಕಿತ್ತು. ಆದರೆ, ನಮ್ಮ ನಿರೀಕ್ಷೆಯಂತೆ ಒಂದು ಕ್ಷಣವೂ ಕೂಡ ಸೂರ್ಯ ಕಾಣಿಸಿಲಿಲ್ಲವಾದ್ದರಿಂದ ಅವು ಯಾವುವೂ ಒಣಗಲಿಲ್ಲ. ಅವತ್ತು ರಾತ್ರಿ ಊಟ ಮುಗಿಸಿ ತಕ್ಕಮಟ್ಟಿಗೆ ಒಣಗಿವೆಯೆಂದು ಸಮಾಧಾನ ಮಾಡಿಕೊಂಡು ಅವುಗಳನ್ನೇ ಹಾಕಿಕೊಂಡು ಜೋರು ಮಳೆಯಲ್ಲಿ ಹೊರಟೆವು. ಅವತ್ತು ರಾತ್ರಿ  ಸುತ್ತಾಡಿ ವಾಪಸ್‌ ಬರುವಾಗ ನಮಗೆ ಸಿಕ್ಕಿದ್ದು ಮಲಬಾರ್‌ ಗ್ಲೆ„ಂಡಿಂಗ್‌ ಫ್ರಾಗ್‌, ಅವುಗಳ ಮೇಟಿಂಗ್‌, ರಿಂಕಲ್‌ ಫ್ರಾಗ್‌ ಮತ್ತು ಅವುಗಳ ಮೊಟ್ಟೆಗಳು, ಪಿಟ್‌ ವೈಪರ್‌ ಹಾವು, ಗಿಕೋ ಎನ್ನುವ ಕಾಡು ಹಲ್ಲಿ, ಅನೇಕ ಬೇರೆ ಬೇರೆ ಜಾತಿಯ ಕಪ್ಪೆಗಳು ನಮ್ಮ ಮ್ಯಾಕ್ರೋಲೆನ್ಸಿನಲ್ಲಿ ಸೆರೆಯಾದವು. ವಾಪಸ್‌ ಬಂದು ಮಲಗುವ ಹೊತ್ತಿಗೆ ರಾತ್ರಿ 2 ಗಂಟೆ. ಮರುದಿನ ಮಧ್ಯಾಹ್ನ ಬೆಳಗಾವಿ ತಲುಪಿದರೂ ಅಲ್ಲಿಯೂ ಸತತವಾಗಿ ಮಳೆ ಸುರಿಯುತ್ತಿತ್ತು. ವಿಧಿಯಿಲ್ಲದೇ ಬೆಂಗಳೂರಿಗೆ ಬಂದು ನಮ್ಮೆಲ್ಲ ಬಟ್ಟೆಬರೆಗಳನ್ನು ಒಣಗಿಸಿಕೊಳ್ಳಬೇಕಾಯ್ತು.

Advertisement

ಚಿತ್ರ- ಬರಹ :ಶಿವು ಕೆ.

Advertisement

Udayavani is now on Telegram. Click here to join our channel and stay updated with the latest news.

Next