Advertisement

ಪ್ರೇಕ್ಷಕರೆದುರು ಬರುತ್ತಿದೆ ರಕ್ಷಿತ್ ನಿರ್ಮಾಣದ Ekam ವೆಬ್ ಸಿರೀಸ್; ಪೂರ್ಣಮಾಹಿತಿ ಇಲ್ಲಿದೆ

06:13 PM Jun 17, 2024 | Team Udayavani |

2020ರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ತಮ್ಮ ಪರಂವಃ ಸ್ಟುಡಿಯೋಸ್ ಬ್ಯಾನರಿನಲ್ಲಿ ಕನ್ನಡ ವೆಬ್ ಸಿರೀಸ್ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಕರ್ನಾಟಕ ಕರಾವಳಿಯ ಸೊಗಡಿನ ‘ಎಕಂ’ ಎಂಬ ಸಿರೀಸ್ ನಿರ್ಮಾಣ ಕಾರ್ಯ ನಡೆದಿತ್ತು. ಬಳಿಕ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ದಿನ (ಜೂನ್ 6) ರಕ್ಷಿತ್ ಶೆಟ್ಟಿ ಅವರು ಏಕಂ ಬಿಡುಗಡೆಯ ಬಗ್ಗೆ ಸುಳಿವು ನೀಡಿದ್ದರು.

Advertisement

ಇದೀಗ ಇಂದು (ಜೂನ್ 17) ಏಕಂ ವೆಬ್ ಸಿರೀಸ್ ಬಿಡುಗಡೆಯ ದಿನಾಂಕ ಘೋಷಿಸಿದ್ದಾರೆ. ಇದರ ಬಗ್ಗೆ ಪೋಸ್ಟ್ ಮಾಡಿರುವ ರಕ್ಷಿತ್, ಕನ್ನಡದ ವೆಬ್ ಸಿರೀಸ್ ಬಿಡುಗಡೆಯ ಸಂಕಷ್ಟದ ಬಗ್ಗೆಯೂ ಹೇಳಿಕೊಂಡಿದ್ದಾರೆ.

“2021ರ ಅಕ್ಟೋಬರ್ ನಲ್ಲಿ ‘ಏಕಂ’ನ ಫೈನಲ್ ಕಟ್ ನೋಡಿದೆ. ಖುಷಿ ಆಯಿತು. ಹೆಮ್ಮೆ ಎನಿಸಿತು. ಇದನ್ನ ಜಗತ್ತಿಗೆ ತೋರಿಸಬೇಕೆನಿಸಿತು. ಅದಾಗಿ ಇಂದಿಗೆ ಬರೋಬ್ಬರಿ ಎರಡೂವರೆ ವರ್ಷಗಳು! “ಏಕಂ” ಅನ್ನು ಹೊರ ತರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ! ಎಲ್ಲೆಡೆ ನಿರಾಸೆ. ಅದೇ ನೆಪ. ಆದೇ ಸಬೂಬು! ಯಾವುದೇ ಕೃತಿಯ ಅರ್ಹತೆಯನ್ನ ನಿರ್ಧರಿಸುವ ಅವಕಾಶ, ಹಾಗು ಹಕ್ಕು. ಪ್ರೇಕ್ಷಕರಿಗಿರಬೇಕು ಎಂದು ನಾನು ಭಾವಿಸುತ್ತೇನೆ. ಹಾಗಾಗಿ, “ಏಕಂ’ ಅನ್ನು ನಾವು ನಮ್ಮದೇ ಆದ ವೇದಿಕೆಯಲ್ಲಿ ನಿಮ್ಮ ಮುಂದೆ ತರಲು ನಿಶ್ಚಯಿಸಿದ್ದೇವೆ” ಎಂದು ರಕ್ಷಿತ್ ಹೇಳಿಕೊಂಡಿದ್ದಾರೆ.

ಪರಂವಃ ಸ್ಟುಡಿಯೋಸ್ ಜೊತೆಗೆ ಜರ್ನಿಮ್ಯಾನ್ ಪ್ರೊಡಕ್ಷನ್ ನಲ್ಲಿ ನಿರ್ಮಿಸುತ್ತಿರುವ ಏಕಂ ವೆಬ್ ಸಿರೀಸ್ ಜುಲೈ 13ರಂದು ಬಿಡುಗಡೆಯಾಗಲಿದೆ. ರಕ್ಷಿತ್ ಅವರು ಇದಕ್ಕಾಗಿ ವೆಬ್ ಸೈಟ್ ಒಂದನ್ನು ತೆರೆದು ಅದರಲ್ಲಿ ಬಿಡುಗಡೆ ಮಾಡಲಿದ್ದಾರೆ.

Advertisement

ekamtheseries.com ಎಂಬ ವೆಬ್ ಸೈಟ್ ನಲ್ಲಿ ಎಂಟು ಎಪಿಸೋಡ್ ಗಳ ಸಿರೀಸ್ ಪ್ರಸಾರವಾಗಲಿದೆ. 149 ರೂ ಪಾವತಿ ಮಾಡಿ ನೀವು ಏಕಂ ವೆಬ್ ಸಿರೀಸ್ ರಿಲೀಸ್ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next