Advertisement

ಆಫ್ರಿಕಾ-ವಿಂಡೀಸ್‌ ಪಂದ್ಯಕ್ಕೂ ಮಳೆ

11:15 PM May 26, 2019 | Team Udayavani |

ಬ್ರಿಸ್ಟಲ್‌: ದಕ್ಷಿಣ ಆಫ್ರಿಕಾ-ವೆಸ್ಟ್‌ ಇಂಡೀಸ್‌ ನಡುವಿನ ವಿಶ್ವಕಪ್‌ ಅಭ್ಯಾಸ ಪಂದ್ಯಕ್ಕೂ ಮಳೆ ಅಡಚಣೆಯೊಡ್ಡಿದೆ. ಇದರಿಂದ ರವಿವಾರದ ಎರಡೂ ಪಂದ್ಯಗಳು ರದ್ದುಗೊಂಡಂತಾಯಿತು.

Advertisement

ಭಾರೀ ಮಳೆಯಿಂದ ಪಂದ್ಯ ನಿಂತಾಗ ದಕ್ಷಿಣ ಆಫ್ರಿಕಾ 12.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 95 ರನ್‌ ಮಾಡಿತ್ತು. ಹಾಶಿಮ್‌ ಆಮ್ಲ 51, ಕ್ವಿಂಟನ್‌ ಡಿ ಕಾಕ್‌ 37 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು.

10ನೇ ಓವರ್‌ ವೇಳೆ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಾಗ ದಕ್ಷಿಣ ಆಫ್ರಿಕಾ 60 ರನ್‌ ಮಾಡಿತ್ತು. ಬಳಿಕ ಓವರ್‌ಗಳ ಸಂಖ್ಯೆಯನ್ನು 31ಕ್ಕೆ ಇಳಿಸಲಾಯಿತು.

ದಕ್ಷಿಣ ಆಫ್ರಿಕಾ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 87 ರನ್ನುಗಳಿಂದ ಮಣಿಸಿತ್ತು. ವೆಸ್ಟ್‌ ಇಂಡೀಸಿಗೆ ಇದು ಮೊದಲ ಪಂದ್ಯವಾಗಿತ್ತು. ಮಂಗಳವಾರ ಕೆರಿಬಿಯನ್‌ ಪಡೆ ನ್ಯೂಜಿಲ್ಯಾಂಡನ್ನು ಎದುರಿಸಲಿದೆ.


Advertisement

Udayavani is now on Telegram. Click here to join our channel and stay updated with the latest news.

Next