Advertisement
ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮೇ 10ರಂದು ರಾಜ್ಯದ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ಅನಂತರ ಮಳೆಯಾಗುವ ಸಾಧ್ಯತೆ ಇವೆ. ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ 4 ದಿನಗಳ ಕಾಲ ಸಂಜೆ ವೇಳೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ.
ಜಗಳೂರಿನಲ್ಲಿ ಮಳೆಯ ನಡುವೆಯೇ ಚುನಾವಣ ಸಿಬಂದಿ ಮತಗಟ್ಟೆ ಕೇಂದ್ರಗಳತ್ತ ತೆರಳಿದರು. ವಿಜಯನಗರ ಜಿಲ್ಲೆ ಹೂವಿನಹಡಗಲಿಯಲ್ಲಿ ಮಳೆ-ಗಾಳಿಯ ರಭಸಕ್ಕೆ ಮಸ್ಟರಿಂಗ್‌ಗೆ ಹಾಕಿದ್ದ ಶಾಮಿಯಾನ ಕಿತ್ತು ಹೋಗಿದೆ. ಚುನಾವಣ ಸಿಬಂದಿ ಮಳೆಯಲ್ಲೇ ಮತಗಟ್ಟೆಗಳತ್ತ ತೆರಳಬೇಕಾಯಿತು. ಹುಬ್ಬಳ್ಳಿಯಲ್ಲಿ ಮಳೆಗೆ ಬೈಕ್‌ಗಳು ಕೊಚ್ಚಿ ಹೋಗಿವೆ. ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ, ಹಾವೇರಿಯಲ್ಲೂ ಭಾರೀ ಮಳೆಯಾಗಿದೆ.
Related Articles
ಧಾರಾಕಾರ ಮಳೆಗೆ ಯಲಬುರ್ಗಾ ತಾಲೂಕಿನ ಬೀಲರಲದಿನ್ನಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದ ಯುವ ರೈತ ಕನಕಪ್ಪ ಹೊನ್ನನಗೌಡ ಮಾಲಿಪಾಟೀಲ್ (30) ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಿದ್ದರಿಂದ ಬಿಸಿಲಿನ ಬೇಗೆಗೆ ಬಾಡಿ ಹೋಗಿದ್ದ ಕಾಫಿ, ಕಾಳುಮೆಣಸು ಬೆಳೆಗೆ ಜೀವಕಳೆ ಬಂದಿದೆ. ಮಲೆನಾಡಿನ ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ, ಬಾಳೆಹೊನ್ನೂರು, ಬಯಲುಸೀಮೆ ಪ್ರದೇಶಗಳಲ್ಲೂ ಸಾಧಾರಣ ಮಳೆಯಾಗಿದೆ.
Advertisement