Advertisement
ಸೆಪ್ಟಂಬರ್ ಮಾಹೆಯ ಅಂತ್ಯ ಅಕ್ಟೋಬರ್‌ನಎರಡನೇ ವಾರದಲ್ಲಿನ ಚಿತ್ತಾ ಮಳೆಯಿಂದಾಗಿ ಜಿಲ್ಲೆಯಲ್ಲಿ ಮೆಕ್ಕೆಜೋಳ, ಭತ್ತಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ದಾವಣಗೆರೆ ತಾಲೂಕಿನಆನಗೋಡು, ಮಾಯಕೊಂಡ ಹೋಬಳಿ,ನ್ಯಾಮತಿ, ಹೊನ್ನಾಳಿ ತಾಲೂಕಿನ ಅನೇಕ ಭಾಗದಲ್ಲಿಮಳೆಯಿಂದಾಗಿ ಮೆಕ್ಕೆಜೋಳ ನೆಲಕ್ಕೆ ಬಿದ್ದು,ಮೊಳಕೆಯೊಡುವ ಹಂತ ಕಾಣುತ್ತಿದೆ. ಇದೇ ರೀತಿ ಮಳೆ ಮುಂದುವರೆದಲ್ಲಿ ರೈತರು ಮೆಕ್ಕೆಜೋಳಮರೆಯಬೇಕಾಗುತ್ತದೆ. ಇಳುವರಿಯ ಮೇಲೆ ಹೊಡೆತ ಬೀಳಲಿದೆ.
Related Articles
Advertisement
ಗ್ರಾಮೀಣ ಭಾಷೆಯಲ್ಲಿ ಚಿತ್ತಾ ಮಳೆಯನ್ನು ಕುಲ್ಡ್ ಚಿತ್ತ ಮಳೆ ಎನ್ನುತ್ತಾರೆ. ಈ ಮಳೆ ಬಂದರೆ ಜನರ ಚಿತ್ತ (ಹೃದಯ) ವನ್ನೇ ಕದಡುವಂತೆ ಬರುತ್ತದೆ. ಇಲ್ಲವಾದರೆ ಬರುವುದೇ ಇಲ್ಲ. ಈ ಬಾರಿ ಚಿತ್ತಾ ಮಳೆಯ ಅಬ್ಬರ ರೈತರ ಎದೆ ಬಡಿತವನ್ನೇ ಕದಡುವಂತಿದೆ
491.34 ಹೆಕ್ಟೇರ್‌ನಲ್ಲಿ ಬೆಳೆ ನಷ್ಟ : ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1,26,708 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಇತ್ತು. ಶೇ. 104.24 ಪ್ರಮಾಣದಲ್ಲಿ 1,31,829 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ತೆನೆ ಮುರಿಯುವ ಹಂತಕ್ಕೆಬಂದಿದ್ದ 305.47 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಹಾನಿಯಾಗಿದೆ. ಹೊನ್ನಾಳಿಯಲ್ಲಿ 11.47, ನ್ಯಾಮತಿಯಲ್ಲಿ 2, ಜಗಳೂರಿನಲ್ಲಿ 40 ಹಾಗೂ ಚನ್ನಗಿರಿಯಲ್ಲಿ ಅತೀ ಹೆಚ್ಚು 252 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಹಾನಿಗೀಡಾಗಿದೆ. ಮೆಕ್ಕೆಜೋಳ ಮಾತ್ರವಲ್ಲ, ಭತ್ತ ಸಹ ಅನೇಕ ಕಡೆ ಮಳೆ-ಗಾಳಿಯಿಂದ ಚಾಪೆಯಂತಾಗಿದೆ. ಹರಿಹರ ತಾಲೂಕಿನಲ್ಲಿ ಅತಿ ಹೆಚ್ಚು 175.27 ಹೆಕ್ಟೇರ್ ಪ್ರದೇಶದಲ್ಲಿನ ಭತ್ತ ಹಾಳಾಗಿದೆ.ನೆಲಕ್ಕೆ ಬಿದ್ದಿರುವ ಭತ್ತ ಕೈಗೆ ಬರಬೇಕು ಎಂದಾದರೆ ಮಳೆ ನಿಲ್ಲಬೇಕು. ಮಳೆ ಬರದೇ ಹೋದರೂ ಕಷ್ಟ, ಬಂದರೂ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿರುವ ರೈತಾಪಿ ವರ್ಗ ಮಳೆಯಿಂದಾಗಿ ತತ್ತರಿಸುವಂತಾಗಿದೆ. ಹರಿಹರ ತಾಲೂಕಿನಲ್ಲಿ 175.27 ಹೆಕ್ಟೇರ್, ಹೊನ್ನಾಳಿಯಲ್ಲಿ 9.60, ನ್ಯಾಮತಿಯಲ್ಲಿ 1 ಹೆಕ್ಟೇರ್‌ನಷ್ಟು ಭತ್ತ ಮಳೆಯಿಂದ ಹಾನಿಗೀಡಾಗಿದೆ. ಒಟ್ಟಾರೆ ಮಳೆಯಿಂದಾಗಿ 491.34 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿ 61.4 ಲಕ್ಷ ರೂ. ನಷ್ಟ ಉಂಟಾಗಿದೆ. ಇದರಿಂದ 518 ರೈತರು ತೊಂದರೆ ಅನುಭವಿಸುಂತಾಗಿದೆ.
-ರಾ. ರವಿಬಾಬು