ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಸತತವಾಗಿ ಎರಡು ದಿನಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ ಒಟ್ಟು 73 ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ ಎಂದು ತಹಶೀಲ್ದಾರ್ ಎಸ್.ಬಿ.ಇಂಗಳೆ ತಿಳಿಸಿದರು.
ಶನಿವಾರ ಅವರು ಪತ್ರಿಕೆಯ ಜೊತೆಗೆ ಮಾತನಾಡಿ, ಈ ಕುರಿತು ಪ್ರಾಥಮಿಕ ವರದಿಗಳನ್ನು ಪಡೆಯಲಾಗಿದ್ದು, ಸರ್ಕಾರದ ಮುಂದಿನ ಅದೇಶದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ಮಣ್ಣಿನ ಮನೆಗಳಲ್ಲಿ ವಾಸವಿದ್ದವರು ಅಲ್ಲಿ ವಾಸವಿರದೆ ಸುರಕ್ಷತೆಯ ಸ್ಥಳಗಳಲ್ಲಿ ವಾಸವನ್ನು ಪಡೆಯಬೇಕು ಎಂದು ತಹಶೀಲ್ದಾರ್ ಎಸ್.ಬಿ.ಇಂಗಳೆ ಮನವಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಬಸವರಾಜ ಬಿಜ್ಜರಗಿ ಇದ್ದರು.
Related Articles
ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯಲ್ಲಿ ಹಾನಿಗೆ ಒಳಗಾದ ಮನೆಗಳಿಗೆ ಸ್ಥಳೀಯ ನಗರಸಭೆಯ ಪೌರಾಯುಕ್ತ ಶ್ರೀನಿವಾಸ ಜಾಧವ, ಹಿರಿಯ ಆರೋಗ್ಯಾಧಿಕಾರಿ ಎಂ.ಎಂ.ಮುಗಳಖೋಡ, ರಾಜಕುಮಾರ ಹೊಸೂರ, ಎಂಜಿನಿಯರ್ ಕಲಬುರಗಿ, ನಗರಸಭೆಯ ಸದಸ್ಯ ಯಲ್ಲಪ್ಪ ಕಟಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.