ಆಲೂರು: ಹಲವು ದಿನಗಳಿಂದ ಸುರಿದ ಮಳೆಗೆ ಮನೆಯೊಂದು ಕುಸಿದು ಬಿದ್ದ ಘಟನೆ ಆಲೂರು ತಾಲ್ಲೂಕಿನ ಧರ್ಮಪುರಿ ಗ್ರಾಮದಲ್ಲಿ ನಡೆದಿದ್ದು ವಾಸ ಮಾಡಲು ಮನೆಯಿಲ್ಲದೇ ಕುಟುಂಬಸ್ಥರು ಅತಂತ್ರ ಸ್ಥಿತಿಯಲ್ಲಿದ್ದಾರೆ
ಎಡೆಬಿಡದೇ ಮಳೆ ಸುರಿದ ಹಿನ್ನೆಲೆಯಲ್ಲಿ ಧರ್ಮಪುರಿ ಗ್ರಾಮದ ಅಂಗವಿಕಲರಾಗಿರುವ ಕೃಷ್ಣೇಗೌಡ ಎಂಬವರ ಹೆಂಚಿನ ಮನೆ ಶುಕ್ರವಾರ ರಾತ್ರಿ ಮೂರುವರೆ ಗಂಟೆ ಸುಮಾರಿಗೆ ಮನೆ ಗೋಡೆ ಕುಸಿದಿದ್ದು,ವಾಸ ಮಾಡಲು ಮನೆ ಇಲ್ಲದೇ ಅಲ್ಲಿಯೇ ಟಾರ್ಪಾಲ್ ಹಾಕಿಕೊಂಡು ಅದೇ ಮನೆಯ ಮುಂಭಾಗದಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಮಳೆ ಬರುವ ಸೂಚನೆಗಳಿರುವುದರಿಂದ ಗೊಡಯು ಕುಸಿಯುವ ಭೀತಿಯಲ್ಲಿದ್ದು ಕುಟುಂಬದವರು ಅಸಹಾಯಕ ಸ್ಥಿತಿಯಲ್ಲಿ ಬದುಕುವಂತಾಗಿದೆ.
ಮನೆಯ ಗೋಡೆ ಬಿದ್ದ ಸಂದರ್ಭದಲ್ಲಿ ಮನೆಯ ಮಧ್ಯದ ವರಾಂಡದಲ್ಲಿಯೇ ಮನೆ ಮಂದಿಯಲ್ಲ ಮಲಗಿದ್ದರು ಅದರೆ ಅದೃಷ್ಟ ರೀತಿಯಲ್ಲಿ ಪಾರಾಗಿದ್ದಾರೆ ಮನೆಗೆ ಹಲಗೆಯಿಂದ ಜೋಡಿಸಿದ್ದ ಅಟ್ಟವಿದ್ದ ಕಾರಣ ಗೊಡೆ ಹಾಗೂ ಮನೆಗೆ ಬಳಸಿದ ತೀರುಗಳು ಅಟ್ಟದ ಮೇಲೆ ಬಿದ್ದಿವೆ ಅದರೆ ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅಂಗವಿಕಲ ಕೃಷ್ಣೇಗೌಡ ಕಳೆದ ಒಂದು ವರ್ಷಗಳಿಂದ ಮನೆ ನೀಡುವಂತೆ ಅರ್ಜಿ ಕೋಡಲಾಗಿದೆ ಅದರೆ ಇದುವರೆವಿಗೂ ಒಂದು ಮನೆ ನೀಡಿಲ್ಲ ನಾನು ಅಂಗವಿಕಲನಾಗಿದ್ದು ದುಡಿಯಲು ಶಕ್ತಿ ಇಲ್ಲ ತಿರುಗಾಡುವುದೇ ಕಷ್ಟವಾಗಿದೆ ರಾತ್ರಿ ಇದ್ದಕ್ಕಿದ್ದಂತೆ ಮನೆ ಕುಸಿದಿದ್ದು ಮನೆಯಲ್ಲಿ ಮಲಗಿದ್ದೇವು ಮದ್ಯದ ಮನೆಯಲ್ಲಿ ಅಟ್ಟ ಇರುವುದರಿಂದ ಕುಸಿದ ಗೊಡೆ ಮಣ್ಣು ಅದರ ಮೇಲೆ ಬಿದ್ದಿದೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ನಮಗೆ ವಾಸ ಮಾಡಲು ಮನೆ ಇಲ್ಲ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ನಮಗೆ ಸರ್ಕಾರದ ನೀಡುವ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಮಾತನಾಡಿ ಕೃಷ್ಣೇಗೌಡ ಅಂಗವಿಕಲರಾಗಿದ್ದು ಹಲವು ದಿನಗಳಿಂದ ಮನೆ ನೀಡುವಂತೆ ಗ್ರಾಮ ಪಂಚಾಯಿತಿ,ತಾಲ್ಲೂಕು ಪಂಚಾಯಿತಿಗೆ ಅಲೆಯುತ್ತಿದ್ದಾರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದಿಂದ ಯಾವುದೇ ಮನೆಗಳು ಬಂದಿರಲಿಲ್ಲ ಇತ್ತೀಚೆಗೆ ಸುರಿಯುತ್ತಿರುವ ಮಳೆ ಹನಿಯಿಂದ ಮನೆ ಬಿದ್ದು ಹೋದರೆ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ ಅದರಂತೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.