ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಟೀಕೆ ಮಾಡಿದೆ. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡಲಾಗಿದೆ.
2019ರ ಪ್ರವಾಹ ಸಂದರ್ಭದಲ್ಲಿ – ಸಂಪುಟವೆ ಇರಲಿಲ್ಲ, 2020ರ ಪ್ರವಾಹ ಸಂದರ್ಭದಲ್ಲಿ -ನಾಯಕತ್ವ ಬದಲಾವಣೆಯ ತಿಕ್ಕಾಟ, 2021ರಲ್ಲಿ -ಸಮರ್ಪಕ ನೆರೆ ಪರಿಹಾರ ನೀಡಲಿಲ್ಲ. ಈಗ ಮತ್ತೊಮ್ಮೆ ರಾಜ್ಯದಲ್ಲಿ ಮಳೆ ಹಾನಿ, ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ನಾಪತ್ತೆಯಾಗಿದ್ದಾರೆ. ಸಿಎಂ ಆನಲೈನ್ ಮೀಟಿಂಗ್ ಗಳಿಗೆ ಸೀಮಿತರಾಗಿದ್ದಾರೆ. ಜನರನ್ನು ಕೇಳುವವರಾರು ಎಂದು ಪ್ರಶ್ನಿಸಿದೆ.
ಇದನ್ನೂ ಓದಿ:ಬೈತಡ್ಕ ಪ್ರಕರಣ: ಅಪಘಾತವೆಂದು ಕರೆ ಮಾಡಿದ್ದು11.52ಕ್ಕೆ, ಆದರೆ ಕಾರು ಬಿದ್ದದ್ದು 12.02ಕ್ಕೆ
ರಾಜ್ಯದಲ್ಲಿ ಮಳೆ ಅಬ್ಬರದಿಂದ ಪ್ರವಾಹದ ಸ್ಥಿತಿ ಉಂಟಾಗಿದೆ, 40% ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರದ ನೆರವು ಕೇಳಲು ಮೀನಾಮೇಷ ಎಣಿಸುತ್ತಿರುವುದೇಕೆ? ಕೈಗೊಂಡ ರಕ್ಷಣಾ ಕ್ರಮಗಳೇನು? ಆಶ್ರಯ ಕೇಂದ್ರಗಳನ್ನು ತೆರೆಯದಿರುವುದೇಕೆ? ಮನೆ ಹಾನಿಗೆ ಕೇವಲ 10,000 ರೂ. ಪರಿಹಾರ ಸಾಕೇ? ಪ್ರಾಣ ಕಳೆದುಕೊಂಡ ಜನ, ಜಾನುವಾರಿಗೆ ನೀಡಿದ ಪರಿಹಾರವೇನು ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.