Advertisement

ಮಳೆಹಾನಿ: 17 ಕೋಟಿ ಅನುದಾನ ಬಿಡುಗಡೆ

07:35 PM Nov 21, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೀಡಾದ ರಸ್ತೆಗಳು ಹಾಗೂ ಸೇತುವೆಗಳ ದುರಸ್ತಿ ಕಾರ್ಯವನ್ನು ಕೂಡಲೇ ಕೈಗೊಂಡು ಗುಣಮಟ್ಟದಿಂದ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ| ರಾಗಪ್ರಿಯ ಆರ್‌ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ರಸ್ತೆಗಳು ಹಾಗೂ ಸೇತುವೆಗಳ ದುರಸ್ತಿ ಕೈಗೊಳ್ಳುವ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಿನ ಮಳೆಯಾಗಿದೆ ಹಾಗೂ ಅತಿವೃಷ್ಟಿಸಂಭವಿಸಿದ ಹಿನ್ನೆಲೆಯಲ್ಲಿ ರಸ್ತೆಗಳು ಹಾಗೂ ಸೇತುವೆಗಳು ಹಾನಿಯಾಗಿವೆ.ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳದುರಸ್ತಿಗಾಗಿ 17 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಆ ಹಣವನ್ನು ಬಳಸಿಕೊಂಡು ಹಾನಿಗೀಡಾದ ರಸ್ತೆ ಹಾಗೂ ಸೇತುವೆಗಳಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆಲೋಕೋಪಯೋಗಿ ಇಲಾಖೆಯಕಾರ್ಯನಿರ್ವಾಹಕ ಎಂಜಿನಿಯರ್‌ ದೇವಿದಾಸ್‌ ಚವ್ಹಾಣ್‌ಗೆ ಜಿಲ್ಲಾಧಿ ಕಾರಿಯವರು ಸೂಚಿಸಿದರು.

ಯಾದಗಿರಿ ತಾಲೂಕಿನ ಯಾದಗಿರಿ- ಸೈದಾಪುರ, ಯಾದಗಿರಿ-ಚಿತ್ತಾಪುರ, ಮುಂಡರಗಾದಿಂದ ಅಚೋಲಾ, ಕೊಂಕಲ್‌ ಕ್ರಾಸ್‌ನಿಂದ ಅರಕೇರಾ ರಸ್ತೆ, ಯಲೇರಿ ಶೆಟ್ಟಿಕೇರಾ ರಸ್ತೆ, ಗುರುಮಠಕಲ್‌- ನಂದೇಪಳ್ಳಿ, ಅಜಲಾಪುರ- ನಂದೇಪಲ್ಲಿ, ಯರಗೋಳ- ಬಾಚವಾರ ರಸ್ತೆ, ಸೈದಾಪುರ- ಅಜಲಾಪುರ ರಸ್ತೆ, ಪಸಪುಲ್‌- ಕಾಳಬೆಳಗುಂದಿ, ಶಹಾಪುರ ತಾಲೂಕಿನ ಹೆಬ್ಟಾಳು- ಕಚಕನೂರು, ಸುರಪುರ ತಾಲೂಕಿನ ಗೆದ್ದಲಮಾರಿ- ವಾಯುಕುಪ್ಪೆ ಬಳಶೆಟ್ಟಿಹಾಳ್‌ ರಸ್ತೆ, ಬಂಡೋಳ್ಳಿ-ಜೋಗುಂಡಬಾವಿ ರಸ್ತೆ ಸೇರಿದಂತೆ ಹಾನಿಗೀಡಾಗಿರುವ ವಿವಿಧ ರಸ್ತೆಗಳ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ರಜಪೂತ್‌, ಲೋಕೋಪಯೋಗಿ ಹಾಗೂ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯ ಸಹಾಯಕ ಕಾರ್ಯಪಾಲಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next