ರಾಮದುರ್ಗ: ರವಿವಾರ ರಾತ್ರಿ ಸುರಿದ ಮಳೆ-ಗಾಳಿಯಿಂದ ವಸತಿ ನಿಲಯ (ಕುಲಕರ್ಣಿ ಆಸ್ಪತ್ರೆ) ವೊಂದರ ಕಬ್ಬಿಣ ಸಲಾಕೆಯೊಂದಿಗೆ ಪ್ಲಾಸ್ಟಿಕ್ ಮೇಲ್ಛಾವಣಿ ಹಾರಿ ಸುಮಾರು 500 ಮೀ. ಅಂತರದಲ್ಲಿರುವ ಪಟ್ಟಡಕೋಟಿ ಗಲ್ಲಿಯ ನಿವಾಸಿ ಸಹದೇವ ಪವಾರ ಎಂಬವರ ಮನೆ ಮೇಲೆ ಬಿದ್ದ ಪರಿಣಾಮ ಅವರ ಮನೆ ಮೇಲ್ಛಾವಣಿ ಜಖಂಗೊಂಡು ಕುಸಿದಿದೆ.
ಜೊತೆಗೆ ಬೇವಿನ ಗಿಡ ಮುರಿದು ಬಿದ್ದು, ಮನೆಗೆ ಜೋಡಿಸಲಾದ ವಿದ್ಯುತ್ ತಂತಿಗಳು ತುಂಡಾಗಿವೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಬಣ್ಣೆನ್ನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Advertisement
ರವಿವಾರ ರಾತ್ರಿಯ ಸುರಿದ ಮಳೆ ಹಾಗೂ ಜೋರಾದ ಗಾಳಿಯಿಂದಾಗಿ ಈ ಮೊದಲು ಕುಲಕರ್ಣಿ ಆಸ್ಪತ್ರೆಯಾಗಿದ್ದ ಈಗ ವಸತಿ ನಿಲಯದವರು ಬಾಡಿಗೆ ಪಡೆದುಕೊಂಡ ಕಟ್ಟಡದ ಮೇಲ್ಛಾವಣಿ ಕಬ್ಬಿಣ ಸಲಾಕೆಗಳೊಂದಿಗೆ ತಗಡು ಸಮೇತ ಹಾರಿ ಸುಮಾರು 500 ಮೀ. ಅಂತರದಲ್ಲಿ ಹೋಗಿ ಬಿದ್ದಿವೆ. ಅದರ ರಭಸಕ್ಕೆ ಹಿರೇಮಠ ಎಂಬುವರ ಮನೆ ಮೇಲೆ ಜೋಡಿಸಲಾದ ಎರಡು ಪ್ಲಾಸ್ಟಿಕ್ ವಾಟರ್ ಟ್ಯಾಂಕ್ ಸಂಪೂರ್ಣ ತುಂಡಾಗಿ ಬಿದ್ದಿವೆ. ಕೊನೆಗೆ ಸಹದೇವ ಪವಾರ ಎಂಬುವರ ಮನೆ ಮೇಲೆ ಬಿದ್ದಿದ್ದರಿಂದ ತಗಡಿನ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ.