Advertisement
ಎರಡು ದಿನಗಳಿಂದ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಒಟ್ಟು 8,75,000 ರೂ. ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.
ಉಡುಪಿ ಜಿಲ್ಲೆಯಲ್ಲಿ ಎ. 1ರಿಂದ ಜು. 9ರ ವರೆಗೆ ಮಳೆಯಿಂದಾದ ಹಾನಿಯ ಮತ್ತು ನೀಡಲಾದ ಪರಿಹಾರ ವಿವರವನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿದೆ. ಪ್ರಕೃತಿ ವಿಕೋಪದ 1,076 ಪ್ರಕರಣಗಳಿಗೆ ಸಂಬಂಧಿಸಿ 3,71,46,443 ರೂ. ನಷ್ಟ ಸಂಭವಿಸಿದ್ದು, 828 ಪ್ರಕರಣಗಳಿಗೆ ಸಂಬಂಧಿಸಿ 76,57,082 ರೂ. ಪರಿ ಹಾರ ವಿತರಿಸಲಾಗಿದೆ. ಇದರಲ್ಲಿ ರಸ್ತೆ, ಸೇತುವೆ, ವಿದ್ಯುತ್ ಕಂಬ ಹಾನಿ ಸೇರಿಲ್ಲ.
Related Articles
ಜಿಲ್ಲೆಯಲ್ಲಿ ಮಳೆ ಸಂಬಂಧಿ ಪ್ರಕೃತಿ ವಿಕೋಪಕ್ಕೆ ನಾಲ್ವರು ಬಲಿಯಾಗಿದ್ದು, ತಲಾ 5 ಲ.ರೂ.ನಂತೆ ಒಟ್ಟು 20 ಲ.ರೂ., ಸಿಡಿಲಿನಿಂದ ಗಾಯಗೊಂಡ ಇಬ್ಬರಿಗೆ 16,900 ರೂ. ಪರಿಹಾರ ನೀಡಲಾಗಿದೆ. 14 ಜಾನುವಾರುಗಳು ಮೃತಪಟ್ಟು 3.67 ಲ.ರೂ. ನಷ್ಟ ಸಂಭವಿಸಿದ್ದು, 9 ಜಾನುವಾರು ಬಾಬ್ತು 1.79 ಲ.ರೂ. ಪರಿಹಾರವನ್ನು ವಿತರಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.
Advertisement