Advertisement
ಕಿನ್ನಿಗೋಳಿ ಕಟೀಲಿನ ತಗ್ಗು ಪ್ರದೇಶ ಜಲಾವೃತವಾಗಿದೆ. ಅತ್ತೂರು ಬೈಲು ಮಹಾಗಣಪತಿ ಮಂದಿರಕ್ಕೆ ಸಂಚರಿಸುವ ರಸ್ತೆ ಸಂಪರ್ಕ ಕಡಿದಿದೆ. ಎಡಪದವು ಮಯ್ನಾರಬೆಟ್ಟಿನ ಕುಸುಮಾ ಅವರ ಮನೆಯ ಮೇಲೆ ಮಂಗಳವಾರ ತೆಂಗಿನ ಮರ ಬಿದ್ದು ಮನೆ ಜಖಂಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಬುಧವಾರ ಮಧ್ಯಾಹ್ನ ಗುಡ್ಡ ಕುಸಿದು ಹೆದ್ದಾರಿ ರಸ್ತೆ ಮೇಲೆ ಬಿದ್ದು, ಸುಮಾರು ಒಂದೂವರೆ ತಾಸು ವಾಹನ ಸಂಚಾರಕ್ಕೆ ತಡೆ ಉಂಟಾಯಿತು.
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ವಳಾಲಿನಲ್ಲಿ ಬುಧವಾರ ಮಧ್ಯಾಹ್ನ ಗುಡ್ಡ ಕುಸಿದು ಹೆದ್ದಾರಿ ಮೇಲೆ ಬಿದ್ದು ಸುಮಾರು ಒಂದೂವರೆ ತಾಸು ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಗುಡ್ಡ ಕುಸಿದ ಭಾಗದಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಿರ್ವಹಿಸುತ್ತಿರುವ ಎಲ್.ಆ್ಯಂಡ್.ಟಿ. ಸಂಸ್ಥೆ ಮಣ್ಣು ತೆರವು ಮಾಡಿತು.
Related Articles
ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಡಿಪೋದಿಂದ ಬೆಂಗಳೂರಿಗೆ ತೆರಳುವ 46 ಬಸ್, ಮೈಸೂರಿಗೆ ತೆರಳುವ 7 ಕೆಎಸ್ಸಾರ್ಟಿಸಿ ಬಸ್ ಗಳನ್ನು ಬುಧವಾರ ಕೂಡ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಾಧಿಕಾರಿ ದೀಪಕ್ ಕುಮಾರ್ ಅವರು ‘ಉದಯವಾಣಿ’ಗೆ ಪ್ರತಿಕಿಯಿಸಿ ‘ಒಟ್ಟು 54 ಬಸ್ ಗಳನ್ನು ಸ್ಥಗಿತಗೊಳಿಸಲಾಗಿದೆ. ಬೆಂಗಳೂರು, ಮೈಸೂರಿಗೆ ತೆರಳುವಂತಹ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆ ಇದೆ. ಈಗಾಗಲೇ ಸ್ಥಗಿತಗೊಂಡ ಬಸ್ ಗಳಲ್ಲಿ ಪ್ರಯಾಣಿಕರು ಸೀಟು ಕಾಯ್ದಿರಿಸಿಕೊಂಡಿದ್ದರೆ ಅಂತಹವರಿಗೆ ಶೇ. 100ರಷ್ಟು ಹಣ ಮರುಪಾವತಿ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.
Advertisement