ಬೆಂಗಳೂರು: ಸೋಮವಾರ ಬೆಳಗ್ಗೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯಾದ್ಯಂತ ಒಣಹವೆ ಇತ್ತು. ಈ ಅವಧಿಯಲ್ಲಿ ಕಾರವಾರದಲ್ಲಿ ಅತ್ಯಧಿಕ 37.1 ಡಿಗ್ರಿ ಸೆ., ಬಾಗಲ ಕೋಟೆಯಲ್ಲಿ ಅತೀ ಕನಿಷ್ಠ 14 ಡಿಗ್ರಿ ಸೆ. ದಾಖಲಾಯಿತು.
ಮಳೆ ಸಾಧ್ಯತೆ
ಬುಧವಾರ ಬೆಳಗ್ಗೆ ವರೆಗಿನ ಅವಧಿಯಲ್ಲಿ ಕರಾವಳಿಯ ಕೆಲವು ಕಡೆ ಲಘು ಮಳೆಯಾಗುವ ಸಾಧ್ಯತೆ ಇದೆ. ಮಾ. 14-15ರಂದು ಕಾಸರಗೋಡು ಸೇರಿದಂತೆ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಲ್ಲಿ ಮೋಡ, ಕೆಲವು ಕಡೆ ತುಂತುರು ಮಳೆಯಾಗಲಿದೆ.
ಮಂಗಳೂರಿನಲ್ಲಿ ಮಾ. 13ರಂದು 35 ಡಿಗ್ರಿ ಸೆ. ಇದ್ದರೆ ಮಾ. 14, 15 ರಂದು ಮೋಡ-ಬಿಸಿಲು ಇರಲಿದ್ದು 36 ಡಿಗ್ರಿ ಸೆ. ತಾಪಮಾನ ಇರಲಿದೆ. ಮಾ. 16, 17 ಮತ್ತು 18ರಂದು ಉಷ್ಣಾಂಶ 38 ಡಿಗ್ರಿ ಸೆ. ವರೆಗೆ ಹೆಚ್ಚುವ ಸಾಧ್ಯತೆಯಿದ್ದು, ಮೋಡದ ವಾತಾವರಣ, ಮಳೆ ಸಾಧ್ಯತೆ ಇದೆ.
ಮುಂದುವರಿದ ಬಿಸಿಲ ಝಳ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಉಷ್ಣಾಂಶ ಏರುಗತಿಯಲ್ಲೇ ಮುಂದುವರಿದಿದ್ದು, ಸೋಮ ವಾರವೂ ಬೆಳಗ್ಗಿನಿಂದಲೇ ಬಿಸಿಲ ಝಳವಿತ್ತು.