Advertisement
ಹಳೆಯಂಗಡಿ ಗ್ರಾ.ಪಂ.ನ ಕೊಪ್ಪಳದಲ್ಲಿ ಬೃಹತ್ ಆಲದ ಮರವೊಂದು ಬುಧವಾರ ರಾತ್ರಿ ಉರುಳಿ ಬಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡು, ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ಗುರುವಾರ ಮರವನ್ನು ತೆರವುಗೊಳಿಸಲಾಯಿತು.ಇಂದಿರಾನಗರದ ಅಂಗನವಾಡಿ ಕೇಂದ್ರದ ಆವರಣ ಗೋಡೆಗೂ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ ಸಹಿತ ಸದಸ್ಯರು ಹಾಗೂ ಪಿಡಿಒ ಅಬೂಬಕ್ಕರ್ ಭೇಟಿ ನೀಡಿದ್ದಾರೆ.
Related Articles
ಕಿನ್ನಿಗೋಳಿ ಮೆಸ್ಕಾಂ ಸೆಕ್ಷನ್ ಕಚೇರಿ ವ್ಯಾಪ್ತಿಯಲ್ಲಿ ಗುರುವಾರ ಸುರಿದ ಮಳೆ ಗಾಳಿಗೆ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿ ಚಂದ್ರಹಾಸ ತಿಳಿಸಿದ್ದಾರೆ. ಕೆರೆಕಾಡು ಬಸ್ ನಿಲ್ದಾಣ, ಕಟೀಲು, ಎಕ್ಕಾರು ಕೃಷ್ಣ ಮಠ ಹಾಗೂ ಪೊಂಪೈ ಕಾಲೇಜು ಬಳಿ ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಮರ ಬಿದ್ದಿದೆ. ಇದರಿಂದ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಕೂಡಲೇ ದುರಸ್ತಿ ಕಾರ್ಯ ನಡೆಸಿದ್ದರಿಂದ ಮಧ್ಯಾಹ್ನದ ವೇಳೆಗೆ ವಿದ್ಯುತ್ ಸರಬರಾಜು ಮಾಡಲಾಯಿತು.ಕೆಂಚನಕೆರೆ ಬಳಿ ಸರಸ್ವತಿ ಅವರ ಮನೆಯ ಹತ್ತಿರದ ದೂಪದ ಮರವು ಅರ್ಧ ತುಂಡಾಗಿ ಮನೆಯ ಸಮೀಪದ ಬಚ್ಚಲು ಶೆಡ್ ಮೇಲೆ ಬಿದ್ದಿದ್ದು, ಭಾರೀ ಅನಾಹತವೊಂದು ತಪ್ಪಿದೆ.
Advertisement