ನಿಸರ್ಗ ನಮ್ಮ ಜೀವನದಲ್ಲಿ ತುಂಬಾ ಮಹತ್ವದ ಸ್ಥಾನ ಪಡೆದಿದೆ. ಭೂಮಿಯ ಮೇಲೆ ಪ್ರತಿಯೊಂದು ಜೀವಿಗೂ ಮಳೆ ತುಂಬಾ ಅಗತ್ಯ.
ಚಿಕ್ಕವರಿದ್ದಾಗ ಮಳೆ ಬಂದರೆ ನಮಗಂತೂ ಹಬ್ಬವೇ ಸರಿ. ಗೆಳೆಯರ ಜತೆ ಆಟವಾಡಿ ಬಂದಾಗ ಅಮ್ಮ ಬೈದು ತಲೆ ವರಿಸುವ ಸನ್ನಿವೇಶ ನೆನಸಿಕೊಳ್ಳುವುದರಲ್ಲಿ ಖುಷಿ ಅಡಗಿದೆ. ಮಳೆ ಬರುವ ವೇಳೆ ನವಿಲುಗಳ ನರ್ತನ. ಕೋಗಿಲೆಗಳು ಹಾಡುವ ಖುಷಿ ಆಲಿಸಿದಷ್ಟೂ ಮತ್ತಷ್ಟು ಇಂಪಾದ ಸ್ವರ ಕೇಳುತ್ತದೆ.
ಲಕ್ಷ್ಮಣನಿಗೆ ಹನುಮಂತನು ಸಂಜೀವಿನಿ ಕೊಟ್ಟಂತೆ ಮಳೆ ಬಂದಾಗ ರೈತರಿಗೆ ಮಳೆ ಸಂಜೀವಿನಿಯಂತೆ ಭಾಸವಾಗುತ್ತದೆ. ಆದರೆ ಕೆಲವೊಂದು ಬಾರಿ ಅತಿಯಾಗಿ ಮಳೆ ಸುರಿದು ಪ್ರಳಯ ಬಂದು ರೈತ ಕಂಗಾಲಾಗುತ್ತಾರೆ. ಇಂದು ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಕೃತಿಯ ಮಹತ್ವ ನಮಗೆ ಅರಿವಾಗಿದೆ ಎನ್ನಬಹುದು.
ಸಾವಿರಾರು ವರ್ಷಗಳಿಂದ ಗಿಡ-ಮರಗಳು ನಮಗೆ ಆಮ್ಲಜನಕ ನೀಡುತ್ತಿದ್ದು ಒಮ್ಮೆಯೂ ನಾವು ಅದರ ಕುರಿತು ಕಿಂಚಿತ್ತೂ ಯೋಚಿಸಲಿಲ್ಲ. ಆದರೆ ಇಂದು ಆಮ್ಲಜನಕ ಗಿಡ ಮರಗಳ ಮಹತ್ವ ನಮಗೆ ಮತ್ತೇ ಅರಿವಂತಾಗಿದೆ. ದೇಶದೆಲ್ಲೆಡೆ ಇಂದು ಆಕ್ಸಿಜನ್ ಅಭಿಯಾನ ನಡೆಯುತ್ತಿದ್ದು ಎಲ್ಲೆಡೆ ಲಾಕ್‌ಡೌನ್ ಅವಧಿಯಲ್ಲಿ ಗಿಡ ನೆಡುವ ಮೂಲಕ ಮತ್ತೇ ಪರಿಸರ ಕಾಳಜಿ ಜೀವಂತಿಕೆ ಪಡೆದಿದೆ. ಆದರೆ ಎಷ್ಟು ಕಾಲ ಈ ಕಾಳಜಿ ಉಳಿಯುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ.
ಪ್ರತಿದಿನ ದೇವರಿಗೆ ಹಾಲಿನ ಅಭಿಷೇಕ ಮಾಡಿಸುವ ಬದಲು ನೀವು ನೆಟ್ಟಿರುವ ಗಿಡಕ್ಕೆ ನೀರಿನ ಅಭಿಷೇಕ ಮಾಡಿಸಿ. ಇದರಿಂದ ಪರಿಸರವು ಚಂದವಾಗಿ ಕಾಣುವುದು ಮತ್ತು ನಾವು ಆಮ್ಲಜನಕವನ್ನು ಬೆಲೆ ಕೊಟ್ಟು ಕೊಳ್ಳಬೇಕಾಗದೇ ನಿಸರ್ಗದಿಂದಲೇ ಪಡೆದುಬಹುದು.
ಅಜಯ್‌ಕುಮಾರ್ ಎನ್. ರಾಥೋಡ್
ಎಸ್ ಬಿ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜು ವಿಜಯಪುರ