Advertisement

ಗ್ರಾಮೀಣ ರೈಲ್ವೇ ನಿಲ್ದಾಣದಲ್ಲಿ ಇ-ಸೇವಾ ಕೇಂದ್ರ ಆರಂಭ

03:45 AM Mar 27, 2017 | |

ನವದೆಹಲಿ: ದೇಶದ ಕುಗ್ರಾಮಗಳಲ್ಲೂ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಕುರಿತಾಗಿ ಇ-ಸೇವೆಗಳನ್ನು ನೀಡುವ ಉದ್ದೇಶದಿಂದ ರೈಲ್ವೇ ಸ್ಟೇಷನ್‌ಗಳಲ್ಲೇ ವೈಫೈ ಹಾಟ್‌ಸ್ಪಾಟ್‌ ಕಿಯೋಸ್ಕ್ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. 

Advertisement

ದೇಶಾದ್ಯಂತ 500 ಸ್ಟೇಷನ್‌ಗಳಲ್ಲಿ ಇಂತಹ ಕೇಂದ್ರಗಳನ್ನು ರೈಲ್ವೇ ಇಲಾಖೆ ತೆರೆಯಲಿದೆ. “ರೈಲ್‌ವೈರ್‌ ಸಾಥಿ’ ಹೆಸರಿನಡಿ ಈ ಕೇಂದ್ರಗಳನ್ನು ತೆರೆಯುತ್ತಿದ್ದು ಜನರು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿ ಅವುಗಳಿಗೆ ಅರ್ಜಿ ಸಲ್ಲಿಕೆ ಜೊತೆಗೆ ಆನ್‌ಲೈನ್‌ ಬ್ಯಾಂಕಿಂಗ್‌, ಅಂತರ್ಜಾಲ ಖರೀದಿ, ಶಾಲಾ-ಕಾಲೇಜುಗಳ ಸೇರ್ಪಡೆಗೆ ಅರ್ಜಿ ಸಲ್ಲಿಕೆ, ವಿಮೆ ಸೌಲಭ್ಯ, ರೈಲು, ಬಸ್‌ಗಳಿಗೆ ಇ-ಟಿಕೆಟ್‌ ಇತ್ಯಾದಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಇದರೊಂದಿಗೆ ಮೊಬೈಲ್‌ ರಿಜಾರ್ಜ್‌, ಡಿಟಿಎಚ್‌ ರಿಚಾರ್ಜ್‌ ಕೂಡ ಸಾಧ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next