Advertisement

58 ವಂದೇ ಭಾರತ್‌ ರೈಲಿಗೆ ಟೆಂಡರ್‌

10:00 PM Aug 29, 2021 | Team Udayavani |

ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ಹೊಸದಾಗಿ 58 ವಂದೇ ಭಾರತ್‌ ರೈಲುಗಳ ನಿರ್ಮಾಣಕ್ಕೆ ಟೆಂಡರ್‌ ಕರೆದಿದೆ.

Advertisement

ಆ.15ರಂದು ಪ್ರಧಾನಿ ನರೇಂದ್ರ ಮೋದಿಯವರು 75ನೇ ಸ್ವಾತಂತ್ರ್ಯ ಮಹೋತ್ಸವದ ವೇಳೆ 75 ವಾರಗಳಲ್ಲಿ 75 ವಂದೇ ಭಾರತ್‌ ರೈಲು ಸಂಚಾರ ಆರಂಭಿಸುವುದಾಗಿ ಘೋಷಿಸಿದ ಬೆನ್ನಲ್ಲೇ ರೈಲ್ವೆ ಇಲಾಖೆ ಈ ಟೆಂಡರ್‌ ಕರೆದಿದೆ.

58 ರೈಲುಗಳ ವಿನ್ಯಾಸ, ಅಭಿವೃದ್ಧಿ, ನಿರ್ಮಾಣ, ಏಕೀಕರಣ ಹಾಗೂ ಪರೀಕ್ಷೆಗಾಗಿ ಟೆಂಡರ್‌ ಕರೆಯಲಾಗಿದೆ. ಟೆಂಡರ್‌ಗೆ ಅಕ್ಟೋಬರ್‌ 20 ಕೊನೆಯ ದಿನ. ಪೂರ್ವ ಬಿಡ್‌ ಸಭೆಯು ಸೆ.21ರಂದು ನಡೆಯಲಿದೆ. ಅದಕ್ಕೆ ಪ್ರಶ್ನೆ ಸಲ್ಲಿಸಲು ಸೆ.14 ಕೊನೆಯ ದಿನ ಎಂದು ತಿಳಿಸಲಾಗಿದೆ.

ಚೆನ್ನೈನ ಇಂಟ್ರಿಗಲ್‌ ಕೋಚ್‌ ಫ್ಯಾಕ್ಟರಿ, ರೇ ಬರೇಲಿಯ ಮಾಡರ್ನ್ ಕೋಚ್‌ ಫ್ಯಾಕ್ಟರಿ, ಕಪುರ್ಥಲದ ರೈಲ್‌ ಕೋಚ್‌ ಫ್ಯಾಕ್ಟರಿಯಲ್ಲಿ ರೈಲು ಗಳು ತಯಾರಾಗಲಿವೆ.

ಇದನ್ನೂ ಓದಿ:ಒಲಂಪಿಕ್ಸ್ ಗೆ ಕನ್ನಡಿಗರು ಯಾಕಾಗಬಾರದು? ಇದು ನಮ್ಮ ಘೋಷವಾಕ್ಯ: ಸಿಎಂ ಬೊಮ್ಮಾಯಿ

Advertisement

ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಭಾರತೀಯ ರೈಲ್ವೆಯು 44 ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲುಗಳ ನಿರ್ಮಾಣಕ್ಕಾಗಿ ಟೆಂಡರ್ ಕರೆದಿತ್ತು. ರೈಲು ನಿರ್ಮಾಣಕ್ಕೆ ಬಳಸುವ ಶೇ 75ರಷ್ಟು ಉತ್ಪನ್ನಗಳು ದೇಶೀಯವಾಗಿಯೇ ಉತ್ಪಾದನೆಯಾಗಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು.

ಜೂನ್​ 2020ರ ನಂತರ ಹೊಸ ವಿನ್ಯಾಸದ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲುಗಳು ಸಂಚಾರ ಆರಂಭಿಸಬಹುದು ಎನ್ನಲಾಗಿದೆ. ಹೊಸ ವಿನ್ಯಾಸದ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಮಾರ್ಚ್ 2022ರಂದು ಸಂಚಾರ ಆರಂಭಿಸಲಿದೆ. ಜೂನ್ 2022ರ ವೇಳೆಗೆ ವಾಣಿಜ್ಯ ಸಂಚಾರ ಆರಂಭವಾಗಬಹುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಹೊಸ ವಿನ್ಯಾಸದ ರೈಲುಗಳಲ್ಲಿ ಪ್ರತಿ ಬೋಗಿಗಳಲ್ಲಿಯೂ ನಾಲ್ಕು ತುರ್ತು ನಿರ್ಗಮನ ದ್ವಾರಗಳಿವೆ. ತುರ್ತು ಬಳಕೆಯಲ್ಲಿ ಬಳಸಲು ಸಾಧ್ಯವಾಗುವ ಲೈಟ್​ಗಳು, ಹೆಚ್ಚುವರಿ ಎಮರ್ಜೆನ್ಸಿ ಪುಶ್ ಬಟನ್​ಗಳು ಇರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next