Advertisement

ಶೂಟಿಂಗ್‌ನಿಂದ ರೈಲ್ವೆಗೆ 1ರೂ ಕೋಟಿ ಆದಾಯ

06:00 AM Apr 27, 2018 | |

ಮುಂಬಯಿ: ಚಲನಚಿತ್ರಗಳು, ಜಾಹೀರಾತುಗಳ ಶೂಟಿಂಗ್‌ಗಳಿಗಾಗಿ ತನಗೆ ಸೇರಿದ ನಿಲ್ದಾಣ ಹಾಗೂ ಇನ್ನಿತರ ಸ್ಥಳಗಳನ್ನು ಬಾಡಿಗೆಗೆ ನೀಡುವ ಮೂಲಕ ಕೇಂದ್ರೀಯ ರೈಲ್ವೆಯು (ಸಿಆರ್‌) 2017-18ರ ವಿತ್ತೀಯ ವರ್ಷದಲ್ಲಿ 1 ಕೋಟಿ ರೂ. ಆದಾಯ ಗಳಿಸಿದೆ ಎಂದು ಸಿಆರ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಸುನಿಲ್‌ ಉದಾಸಿ ತಿಳಿಸಿದ್ದಾರೆ. 2016-17ನೇ ವಿತ್ತೀಯ ವರ್ಷದ ಆದಾಯಕ್ಕೆ (73.93 ಲಕ್ಷ ರೂ.)ಹೋಲಿಸಿದರೆ ಕಳೆದ ವರ್ಷದ ಆದಾಯ ಶೇ. 36.43ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ. 

Advertisement

2017-18ನೇ ವರ್ಷದಲ್ಲಿ, ಸಿಆರ್‌ಗೆ ಅತಿ ಹೆಚ್ಚು ಆದಾಯ ತಂದ ಚಿತ್ರ ಬಾಲಿವುಡ್‌ ತಾರೆಯರಾದ ಅಲಿಯಾ ಭಟ್‌ ಹಾಗೂ ರಣವೀರ್‌ ಸಿಂಗ್‌ ಅಭಿನಯದ “ಗಲ್ಲಿ ಬಾಯ್‌’ ಆಗಿದ್ದು, ಈ ಚಿತ್ರದಿಂದ 15.32 ಲಕ್ಷ ರೂ. ಹಣ ಬಂದಿದೆ. ಗಲ್ಲಿ ಬಾಯ್‌ ನಂತರ ಅತಿ ಹೆಚ್ಚು ಆದಾಯ ತಂದ ಹೆಗ್ಗಳಿಕೆ, ವಥಾರ್‌ ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಣಗೊಂಡ ಕೋಕಾಕೋಲಾ ಜಾಹಿರಾತು (14.5 ಲಕ್ಷ ರೂ.), ಛತ್ರಪತಿ ಶಿವಾಜಿ ಟರ್ಮಿನಲ್‌ನಲ್ಲಿ ಚಿತ್ರೀಕರಣಗೊಂಡ “ಜಲೇಬಿ: ಸರ್ಕಲ್‌ ಆಫ್ ಲವ್‌’ ಚಿತ್ರದ್ದು (7 ಲಕ್ಷ ರೂ.) ಎಂದು ಅವರು ತಿಳಿಸಿದ್ದಾರೆ.

ಹಿಂದಿಯ “ಗಲ್ಲಿ ಬಾಯ್‌’ ಚಿತ್ರದಿಂ ದಲೇ ದೊಡ್ಡ ಬಾಡಿಗೆ ಸಂಗ್ರಹ
2016-17ಕ್ಕೆ ಹೋಲಿಸಿದರೆ ಬಾಡಿಗೆಯಲ್ಲಿ ಶೇ. 36.43 ಹೆಚ್ಚಳ

1,00,00,000  ಚಿತ್ರೀಕರಣದಿಂದ ಕೇಂದ್ರೀಯ ರೈಲ್ವೆ ಗಳಿಸಿದ ಬಾಡಿಗೆ
15,32,000 ಗಲ್ಲಿಬಾಯ್‌ ಚಿತ್ರವೊಂದ ರಿಂದಲೇ ಬಂದ ಹಣ
73,94,000  2016-17ರಲ್ಲಿ ಸಿಆರ್‌ಗೆ ಬಂದಿದ್ದ ಆದಾಯ

ಸಿಆರ್‌ಗೆ ಬಾಡಿಗೆ ತಂದುಕೊಟ್ಟ ಟಾಪ್‌ 3 ಶೂಟಿಂಗ್‌
ಚಿತ್ರ/ಜಾಹೀರಾತು           ಸ್ಥಳ                                     ಆದಾಯ (ಲಕ್ಷಗಳಲ್ಲಿ)
ಗಲ್ಲಿ ಬಾಯ್‌                  ವಾಡಿ ಬಂದರ್‌                            15.32
ಕೋಕಾಕೋಲಾ              ವಥಾರ್‌ ಸ್ಟೇಷನ್‌                        14.5
ಜಲೇಬಿ                        ಛತ್ರಪತಿ ಶಿವಾಜಿ ಟರ್ಮಿನಲ್‌               7

Advertisement
Advertisement

Udayavani is now on Telegram. Click here to join our channel and stay updated with the latest news.

Next