Advertisement

ರೈಲ್ವೇಯಲ್ಲಿನ್ನು ವಿವಿಐಪಿ ಸಂಸ್ಕೃತಿಗೆ ಕೊಕ್‌

06:00 AM Oct 09, 2017 | Team Udayavani |

ಹೊಸದಿಲ್ಲಿ: ಪೊಲೀಸ್‌ ಇಲಾಖೆಯಂತೆಯೇ ರೈಲ್ವೇ ಇಲಾಖೆಯಲ್ಲಿರುವ ಆರ್ಡರ್ಲಿ ಪದ್ಧತಿಯೂ ಇನ್ನು ಕೊನೆಯಾಗಲಿದೆ. ರೈಲ್ವೇಯಲ್ಲಿರುವ ವಿವಿಐಪಿ ಸಂಸ್ಕೃತಿಗೆ ಕೊನೆಹಾಡುವ ನಿಟ್ಟಿನಲ್ಲಿ ಇಲಾಖೆಯು ಮಹತ್ವದ ಹೆಜ್ಜೆಯಿಟ್ಟಿದ್ದು, ಹಿರಿಯ ಅಧಿಕಾರಿಗಳ ನಿವಾಸದಲ್ಲಿ ಮನೆಕೆಲಸ ಮಾಡುತ್ತಿದ್ದ 30 ಸಾವಿರ ವರ್ಕ್‌ಮೆನ್‌ಗಳನ್ನು ಅದರಿಂದ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ. 

Advertisement

ಜತೆಗೆ ರೈಲ್ವೇ ಮಂಡಳಿ ಅಧ್ಯಕ್ಷ ಅಥವಾ ಸದಸ್ಯರು ವಲಯ ಭೇಟಿಗೆ ಬಂದಾಗ ವಿಮಾನ ಅಥವಾ ರೈಲ್ವೇ ನಿಲ್ದಾಣದಲ್ಲಿ ಸ್ವಾಗತಕ್ಕೆ ವಲಯ ಮ್ಯಾನೇಜರ್‌ ಖುದ್ದು ಹಾಜರಿರಬೇಕು ಮತ್ತು ಈ ಸಂದರ್ಭಗಳಲ್ಲಿ ಸ್ಮರಣಿಕೆಗಳನ್ನು ನೀಡಬೇಕು ಎಂದು 36 ವರ್ಷಗಳ ಹಿಂದೆ ಹೊರಡಿಸಲಾಗಿದ್ದ ಸುತ್ತೋಲೆಯನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಲಾಗಿದೆ.

ಈ ಬಗ್ಗೆ ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವಿ‌ನಿ ಲೊಹಾನಿ ಸೆ.28ರಂದೇ ಆದೇಶ ಹೊರಡಿಸಿದ್ದರು. 1981ರಲ್ಲಿ ಹೊರಡಿಸಲಾಗಿದ್ದ ಆದೇಶ ಪ್ರಕಾರ, ರೈಲ್ವೇ ಮಂಡಳಿ ಅಧ್ಯಕ್ಷ, ಸದಸ್ಯರ ಭೇಟಿ ವೇಳೆ ವಲಯ ಮ್ಯಾನೇಜರ್‌ಗಳು ಹೂಗುತ್ಛ, ಸ್ಮರಣಿಕೆಗಳನ್ನು ನೀಡಿ ಸ್ವಾಗತಿಸಬೇಕಾಗಿತ್ತು. ಈಗ ಇದಕ್ಕೆ ನಿಷೇಧ ಹೇರಲಾಗಿದೆ. ಜತೆಗೆ, ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದ 30 ಸಾವಿರ ಟ್ರ್ಯಾಕ್‌ಮನ್‌ಗಳ ಪೈಕಿ ಸುಮಾರು 6-7 ಸಾವಿರ ಮಂದಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಮರಳಿ ಇಲಾಖೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ .

ಸ್ಲಿಪರ್‌ ಕೋಚ್‌ಗಳಲ್ಲಿ ಪ್ರಯಾಣಿಸಿ: ಇಷ್ಟು ಮಾತ್ರವಲ್ಲ ರೈಲ್ವೇ ಅಧಿಕಾರಿಗಳು ವಿಲಾಸಿ ಸಲೂನ್‌ಗಳಿಗೆ ತೆರಳದಂತೆ, ಹವಾನಿಯಂತ್ರಿತ ಬೋಗಿಯಲ್ಲಿ ಪ್ರಯಾಣಿಸದಂತೆಯೂ ಸೂಚಿಸಲಾಗಿದೆ. ಬದಲಾಗಿ ಸ್ಲಿàಪರ್‌ ಕೋಚ್‌ಗಳಲ್ಲಿ ಅಧಿಕೃತ ಭೇಟಿಗೆ ತೆರಳಬೇಕು ಎಂದು ಸಚಿವ ಗೋಯಲ್‌ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next