ಮಂಗಳೂರು: ತಿರುವನಂತಪುರದ ರೈಲ್ವೇ ಯಾರ್ಡ್ ನಲ್ಲಿ ಎಂಜಿನಿಯರಿಂಗ್ ಕಾಮಗಾರಿಗಳಿಂದಾಗಿ ಕೆಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ನಂ. 16603 ಮಂಗಳೂರು ಸೆಂಟ್ರಲ್- ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲು ಮಾ. 27ರಿಂದ ಎ. 25ರ ವರೆಗೆ 30 ದಿನಗಳ ಕಾಲ ಕೊಚ್ಚುವೇಲಿ ಹಾಗೂ ತಿರುವನಂತಪುರ ಸೆಂಟ್ರಲ್ ಮಧ್ಯೆ ಆಂಶಿಕವಾಗಿ ರದ್ದಾಗಲಿದೆ.
ನಂ. 16604 ತಿರುವನಂತಪುರಂ ಸೆಂಟ್ರಲ್ -ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ತಿರುವನಂತಪುರಂ ಸೆಂಟ್ರಲ್‌ನಿಂದ ಪ್ರತಿದಿನ ರಾತ್ರಿ 7.25ಕ್ಕೆ ಹೊರಡಬೇಕಿರುವುದು ಮಾ. 28ರಿಂದ ಎ. 26ರ ತನಕ 30 ದಿನಗಳ ಕಾಲ ಕೊಚ್ಚುವೇಲಿಯಿಂದ ರಾತ್ರಿ 7.30ಕ್ಕೆ ಹೊರಡಲಿದೆ ಎಂದು ದ. ರೈಲ್ವೇ ಪ್ರಕಟನೆ ತಿಳಿಸಿದೆ.