Advertisement
ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಪಾಲ್ಘಾಟ್ ವಿಭಾಗ ಬಳಕೆದಾರರ ಸಲಹಾ ಸಮಿತಿ ಸದಸ್ಯ ಹನುಮಂತ ಕಾಮತ್ ಮಂಗಳೂರು ವ್ಯಾಪ್ತಿಯ ರೈಲ್ವೇ ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಪ್ರಸ್ತಾವನೆ ಮಂಡಿಸಿದರು.
ಮಂಗಳೂರು ಸೆಂಟ್ರಲ್‌ನಲ್ಲಿ ಹೊಸದಾಗಿ ನಿರ್ಮಿಸಿದ ಪ್ಲಾಟ್‌ಫಾರ್ಮ್ಗೆ ಮೇಲ್ಸೇತುವೆ ನಿರ್ಮಾಣ ಪ್ರಗತಿಯಲ್ಲಿದ್ದು ಡಿಸೆಂಬರ್ ಅಂತ್ಯಕ್ಕೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಸಂಚಾರ ದಟ್ಟಣೆ ಕಡಿಮೆ ಇದ್ದು, ಹಳಿ ದ್ವಿಪಥ ಮಾಡುವ ಅಗತ್ಯ ಕಂಡು ಬರುವುದಿಲ್ಲ. ಮುಂದಿನ ದಿನಗಳಲ್ಲಿ ರೈಲುಗಳ ಓಡಾಟ ಈ ವಿಭಾಗದಲ್ಲಿ ಜಾಸ್ತಿ ಆದ ಅನಂತರ ದ್ವಿಪಥ ಮಾಡಲಾಗುವುದು ಹಾಗೂ ಬಂದರು ಗೂಡ್ಸ್ ಯಾರ್ಡ್ ಅನ್ನು ಪ್ರಯಾಣಿಕ ರೈಲು ಗಾಡಿಗಳ ಟರ್ಮಿನಲ್ ಆಗಿ ಬದಲಾಯಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
Related Articles
ರೈಲ್ವೇ ಅಧಿಕಾರಿಗಳು ಮಾತನಾಡಿ, ಮಂಗಳೂರು-ವಿಜಯಪುರ ರೈಲು ಗಾಡಿಯನ್ನು ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಿಸುವ ಬಗ್ಗೆ ಸಮ್ಮತಿ ನೀಡಲಾಗುವುದು. ವಿಸ್ತರಣೆ ತರುವಾಯ ಈ ರೈಲು ವಿಜಯಪುರದಿಂದ ಮಂಗಳೂರು ಸೆಂಟ್ರಲ್‌ಗೆ ಮಧ್ಯಾಹ್ನ 1ಕ್ಕೆ ಆಗಮಿಸಿ, 2.35ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ವಿಜಯಪುರಕ್ಕೆ ನಿರ್ಗಮಿಸಲಿದೆ. ಈಗ ಬೆಳಗ್ಗೆ ಮಂಗಳೂರು ಜಂಕ್ಷನ್‌ನಿಂದ 7 ಗಂಟೆಗೆ ಹೊರಡುವ ಮಂಗಳೂರು-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಸಹ ಮಂಗಳೂರು ಸೆಂಟ್ರಲ್‌ಗೆ ಸದ್ಯದಲ್ಲಿಯೇ ವಿಸ್ತರಿಸಲಾಗುವುದು ಎಂದರು.
Advertisement
ರಾಮೇಶ್ವರಂ-ಮಂಗಳೂರು ಹೊಸ ರೈಲಿನ ಪ್ರಸ್ತಾವನೆ ರೈಲ್ವೆ ಮಂತ್ರಾಲಯದಲ್ಲಿ ಪರಿಶೀಲನೆಯ ಹಂತದಲ್ಲಿದ್ದು, ರೈಲ್ವೇ ಮಂತ್ರಾಲಯ ಅನುಮತಿ ನೀಡಿದ ಬಳಿಕ ಆರಂಭಿಸಲಾಗುವುದು ಎಂದರು.
ಮುಂಬಯಿ ಸಿಎಸ್‌ಟಿ ಎಕ್ಸ್‌ಪ್ರೆಸ್ ಸೆಂಟ್ರಲ್‌ಗೆ ವಿಸ್ತರಣೆ ಸದ್ಯ ಅಸಾಧ್ಯಮುಂಬಯಿ ಸಿಎಸ್‌ಟಿ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲನ್ನು ಸದ್ಯದ ವೇಳಾಪಟ್ಟಿಯಲ್ಲಿ ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಲು ಅಸಾಧ್ಯವಾಗಿರುವ ಕಾರಣ ಕೊಂಕಣ ರೈಲ್ವೇ ಈ ರೈಲನ್ನು ಕೊಂಚ ಬೇಗ ಮಂಗಳೂರು ಜಂಕ್ಷನ್‌ಗೆ ತಲುಪಿಸಿದರೆ ಈ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಾ^ಟ್ ಅಧಿಕಾರಿಗಳು ತಿಳಿಸಿದರು.