Advertisement

ದುರಸ್ತಿ ಆಗದ ರೈಲ್ವೆ ಅಂಡರ್‌ಪಾಸ್‌: ಪರದಾಟ

03:03 PM Jan 24, 2022 | Team Udayavani |

ದೊಡ್ಡಬಳ್ಳಾಪುರ: ನಗರದ ಖಾಸ್‌ಬಾಗ್‌ನಲ್ಲಿನ ರೈಲ್ವೆ ಅಂಡರ್‌ಪಾಸ್‌ನಲ್ಲಿ ಗುಂಡಿ ಬಿದ್ದು, ರಸ್ತೆ ಕಿರಿದಾಗಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮತ್ತೂಂದು ಅಂಡರ್‌ಪಾಸ್‌ ನಿರ್ಮಾಣದ ಕಾಮಗಾರಿ ಸಹ ನನೆಗುದಿಗೆಬಿದ್ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹಳೆಯ ರೈಲ್ವೆ ಅಂಡರ್‌ಪಾಸ್‌: ಸ್ವಾತಂತ್ರ್ಯಪೂರ್ವದಲ್ಲಿ ಬೆಂಗಳೂರಿನಿಂದ ದೊಡ್ಡಬಳ್ಳಾಪುರಮಾರ್ಗವಾಗಿ ರೈಲ್ವೆ ಹಳಿ ಹಾಕಿದ್ದ ಸಂದರ್ಭದಲ್ಲಿನಿರ್ಮಾಣವಾಗಿರುವ ರೈಲ್ವೆ ಅಂಡರ್‌ಪಾಸ್‌ನಲ್ಲಿ ನಿತ್ಯ ಸಹಸ್ರಾರು ವಾಹನಗಳು ಸಂಚರಿಸುತ್ತಿವೆ. 20 ಅಡಿ ಅಗಲದ ಈ ರೈಲ್ವೆ ಅಂಡರ್‌ಪಾಸ್‌ನಲ್ಲಿಬೆಂಗಳೂರು ಸೇರಿ ನಗರದ ಹೊರಭಾಗದಕೈಗಾರಿಕಾ ಪ್ರದೇಶಕ್ಕೆ ಹೋಗುವ ಕಾರ್ಮಿಕರುಹೋಗಿ ಬರುತ್ತಿದ್ದಾರೆ. ಹೀಗಾಗಿ ಒಂದಿಷ್ಟು ಸಮಯ ಕಾದು ನಿಂತಾದರೂ ಆಟೋ, ಬೈಕ್‌ಸೇರಿ ಎಲ್ಲಾ ವಾಹನಗಳು ಈ ಅಂಡರ್‌ಪಾಸ್‌ ಮೂಲಕವೇ ಸಂಚರಿಸಬೇಕಿದೆ.

ನಿತ್ಯ ಬೆಳಿಗ್ಗೆ ಹಾಗೂ ಸಂಜೆ ವೇಳೆ ಕೈಗಾರಿಕಾ ಪ್ರದೇಶಕ್ಕೆ ತೆರಳುವ ಹಾಗೂ ಕೆಲಸ ಮುಗಿಸಿ ಬರುವಕಾರ್ಮಿಕರು, ವಿವಿಧ ಉದ್ಯೋಗಿಗಳುಸಂಚರಿಸುವ ಈ ಮಾರ್ಗದಲ್ಲಿ ವಾಹನ ದಟ್ಟಣೆಹೆಚ್ಚಾಗಿ ರೈಲ್ವೆ ನಿಲ್ದಾಣದ ವೃತ್ತದ ಹೆದ್ದಾರಿಯಲ್ಲಿಯೂವಾಹನ ದಟ್ಟಣೆ ಸಾಮಾನ್ಯವಾಗಿದೆ.

ಹೊಸ ರೈಲ್ವೆ ಅಂಡರ್‌ಪಾಸ್‌ ನಿರ್ಮಾಣಕ್ಕೆ ಗ್ರಹಣ: ರೈಲ್ವೆ ಅಂಡರ್‌ಪಾಸ್‌ ದುರಸ್ತಿ ಮಾಡುವಂತೆ ಹಾಗೂ ಮತ್ತೂಂದು ಅಂಡರ್‌ಪಾಸ್‌ ನಿರ್ಮಿಸುವಂತೆ ಒತ್ತಾಯಿಸುತ್ತಿದ್ದರೂಮತ್ತೂಂದು ಅಂಡರ್‌ಪಾಸ್‌ ನಿರ್ಮಾಣ ಮಾತ್ರಆಗಿಲ್ಲ. ಈಗ ಇರುವ ಅಂಡರ್‌ಪಾಸ್‌ ಜೊತೆಗೆಮತ್ತೂಂದು ಕೆಳಸೇತುವೆ ನಿರ್ಮಿಸಲು ಕಾಮಗಾರಿಆರಂಭವಾಗಿ ಎರಡು ವರ್ಷ ಕಳೆದಿದೆ. ಕಾಮಗಾರಿ ಮಾತ್ರ ಮುಕ್ತಾಯವಾಗಿಯೇ ಇಲ್ಲ.

ಕಾಮಗಾರಿ ಮುಗಿಯುತ್ತಲೇ ಇಲ್ಲ: ಜನರುಕಾಮಗಾರಿ ಇಂದು ಮುಗಿಯುತ್ತದೆ, ನಾಳೆಮುಗಿಯುತ್ತದೆ ಅಂದು ಕೊಂಡೇ ಹಾಳಾಗಿರುವ,ಕಿರಿದಾಗಿರುವ ರೈಲ್ವೆ ಅಂಡರ್‌ಪಾಸ್‌ನಲ್ಲಿಯೇಸಂಚರಿಸುತ್ತಿದ್ದಾರೆ. ಈಗ ಹೊಸದಾಗಿನಿರ್ಮಾಣವಾಗುತ್ತಿರುವ ಅಂಡರ್‌ಪಾಸ್‌ನಸಮೀಪ ಹೊಸ ರೈಲ್ವೆ ಹಳಿ ಹಾಕುತ್ತಿರುವ ಜಮೀನುಖಾಸಗಿ ವ್ಯಕ್ತಿಗಳಿಗೆ ಸೇರಿದ್ದು ಎನ್ನಲಾಗಿದ್ದು,ಕಾಮಗಾರಿ ಆರಂಭವಾದ ಕೆಲ ದಿನಗಳ ನಂತರ ಅಂಡರ್ಪಾಸ್‌ ನಿರ್ಮಿಸುತ್ತಿರುವ ಜಮೀನುನಮ್ಮದು ಎಂದು ಖಾಸಗಿ ವ್ಯಕ್ತಿಗಳು ಸೂಕ್ತ ದಾಖಲೆಗಳನ್ನು ನೀಡಿ ಅಂಡರ್‌ಪಾಸ್‌ ಹಾಗೂ ರೈಲ್ವೆ ಹಳಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದರು.

Advertisement

ಇದಾಗಿ ಒಂದೂವರೆ ವರ್ಷ ಕಳೆದರೂಇಲ್ಲಿಯವರೆಗೂ ಅಂಡರ್‌ಪಾಸ್‌ ನಿರ್ಮಾಣ ಕಾಮಗಾರಿ ಕೆಲಸ ಆರಂಭವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಗಂಭೀರ ಕ್ರಮ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಪರ್ಯಾಯ ರಸ್ತೆ ಅಗತ್ಯ: ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಪ್ರತ್ಯೇಕರೈಲ್ವೆ ಅಂಡರ್‌ಪಾಸ್‌ ನಿರ್ಮಾಣದ ಜೊತೆಗೆ ಈಗ ಖಾಸ್‌ಬಾಗ್‌ ಮೂಲಕ ಬೆಂಗಳೂರು ಹೆದ್ದಾರಿಗೆಸೇರುವ ಹಳೇ ಮಧುಗಿರಿ ರಸ್ತೆಯನ್ನುಅಭಿವೃದ್ಧಿಪಡಿಸಿದರೆ ಭವಿಷ್ಯದ ದಿನಗಳಲ್ಲೂವಾಹನ ಸಂಚಾರ ಸುಗುಮವಾಗಲಿದೆ. ಮೊದಲುಇಲ್ಲಿ ಹದಗೆಟ್ಟ ರಸ್ತೆಯನ್ನು ಸರಿಪಡಿಸಬೇಕಿದೆ. ರಸ್ತೆಅವ್ಯವಸ್ಥೆ ಬಗ್ಗೆ ಹೆಚ್ಚಿನ ದೂರುಗಳು ಬರುತ್ತಿದ್ದಹಿನ್ನೆಲೆಯಲ್ಲಿ ನವೆಂಬರ್‌ ತಿಂಗಳಿನಲ್ಲಿ ರಸ್ತೆಹಳ್ಳಗಳನ್ನು ರೆಡಿ ಕಾಂಕ್ರೀಟ್‌ ಹಾಕಿಮುಚ್ಚಲಾಯಿತು. ಆದರೆ, ಈವರೆಗೂ ಯಾವುದೇ ಶಾಶ್ವತ ಕಾಮಗಾರಿ ನಡೆದಿಲ್ಲ ಎನ್ನುತ್ತಾರೆ ಶ್ರೀನಗರ ಮನು.

 

ಇತ್ತೀಚೆಗಷ್ಟೆ ಸಚಿವ ವಿ.ಸೋಮಣ್ಣ ಅವರು ದೇವನಹಳ್ಳಿ – ಬೆಂಗಳೂರು ನಡುವಣ ರೈಲ್ವೆ ಅಂಡರ್‌ಪಾಸ್‌ಕಾಮಗಾರಿಗಳ ಪರಿಶೀಲನೆ ನಡೆಸಿದ್ದವೇಳೆ ಗಮನಕ್ಕೆ ತರಲಾಗಿದೆ. ಅಂಡರ್‌ಪಾಸ್‌ ಸಮೀಪದ ಜಮೀನಿನವಿವಾದವನ್ನು ಶೀಘ್ರವೇ ಬಗೆಹರಿಸಿ,ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. – ಟಿ.ವೆಂಕಟರಮಣಯ್ಯ, ಶಾಸಕ.

Advertisement

Udayavani is now on Telegram. Click here to join our channel and stay updated with the latest news.

Next