Advertisement

ರೈಲ್ವೆ ಸುಗಮ ಸಂಚಾರಕ್ಕಾಗಿ ವಿವಿಧೆಡೆ ಸೇತುವೆ ನಿರ್ಮಾಣ

03:19 PM Apr 14, 2017 | |

ಹುಬ್ಬಳ್ಳಿ: ನೈಋತ್ಯ ರೈಲ್ವೆ ಸುಗಮ ರೈಲು ಸಂಚಾರಕ್ಕಾಗಿ 2016-17ನೇ ಸಾಲಿನಲ್ಲಿ 12 ಕಡೆಗಳಲ್ಲಿ ರೋಡ್‌ ಓವರ್‌ ಬ್ರಿಡ್ಜ್ ಹಾಗೂ 15 ಕಡೆಗಳಲ್ಲಿ ರೋಡ್‌ ಅಂಡರ್‌ ಬ್ರಿಡ್ಜ್ ಗಳನ್ನು ನಿರ್ಮಿಸುವ ಮೂಲಕ 27 ಲೆವೆಲ್‌ ಕ್ರಾಸಿಂಗ್‌ಗಳನ್ನು ವಿಸರ್ಜಿಸಲಾಗಿದೆ. 

Advertisement

ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳಲ್ಲಿ ಅಪಘಾತಗಳನ್ನು ತಡೆಯುವ ಹಾಗೂ ಸುರಕ್ಷಾ ಕ್ರಮಗಳನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಮಾನವ ರಹಿತ ಲೆವೆಲ್‌ ಕ್ರಾಸಿಂಗ್‌ಗಳಿರುವಲ್ಲಿ 24 ಕಡೆ ಸಬ್‌ ವೇ, 3 ಕಡೆ ಡೈವರ್ಶನ್‌, 31 ಮ್ಯಾನಿಂಗ್‌, 7 ಕಡೆ ಲೋ ಟಿಯುವಿ ನಿರ್ಮಿಸಲಾಗಿದೆ. ಅದೇ ರೀತಿ ಮಾನವ ಲೆವೆಲ್‌ ಕ್ರಾಸಿಂಗ್‌ ಇರುವಲ್ಲಿ 34 ಸಬ್‌ ವೇ, 10 ಕಡೆ ರೋಡ್‌ ಓವರ್‌ ಬ್ರಿಡ್ಜ್, 1 ಕಡೆ ಡೈವರ್ಶನ್‌ ನಿರ್ಮಾಣ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next