Advertisement

ನವೆಂಬರ್‌ ವೇಳೆ ಗಂಗಾವತಿವರೆಗೆ ರೈಲ್ವೆ ಸಂಚಾರ 

05:05 PM Jul 15, 2018 | |

ಗಂಗಾವತಿ: ಮುಂಬರುವ ನವೆಂಬರ್‌ ವೇಳೆಗೆ ಹುಬ್ಬಳ್ಳಿಯಿಂದ ಗಂಗಾವತಿವರೆಗೆ ರೈಲ್ವೆ ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು. ಅವರು ಶನಿವಾರ ಗಂಗಾವತಿಯಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಗಿಣಿಗೇರಿ-ರಾಯಚೂರು ರೈಲ್ವೆ ಮಾರ್ಗ ಎರಡು ದಶಕಗಳ ಯೋಜನೆಯಾಗಿಯಾಗಿದೆ. ಭೂಸ್ವಾಧೀನ, ಅನುದಾನದ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಳ್ಳುವಲ್ಲಿ ವಿಳಂಬವಾಗಿದೆ. ಕಳೆದ ವರ್ಷ ದೇಶದ ವಿವಿಧೆಡೆ ಸಂಭವಿಸಿದ ರೈಲ್ವೆ ಅಪಘಾತದಿಂದ ನಾಶವಾಗಿದ್ದ ರೈಲ್ವೆ ಹಳಿಗಳನ್ನು ಜೋಡಣೆ ಮಾಡಲು ಗಿಣಿಗೇರಿ ರಾಯಚೂರು ಮಾರ್ಗದ ಹಳಿಗಳನ್ನು ಬಳಕೆ ಮಾಡಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಇದೀಗ ಕಾಮಗಾರಿ ಚುರುಕಿನಿಂದ ನಡೆದಿದ್ದು, ಭೂಸ್ವಾ ಧೀನ, 12 ರೈಲ್ವೆ ನಿಲ್ದಾಣಗಳ ನಿರ್ಮಾಣ ಕಾಮಗಾರಿ ನಡೆದಿದೆ. ಗಂಗಾವತಿ ನಿಲ್ದಾಣ ಪೂರ್ಣಗೊಳ್ಳುವ ಹಂತದಲ್ಲಿದೆ. ನವೆಂಬರ್‌ನಲ್ಲಿ ನಿಲ್ದಾಣ ಉದ್ಘಾಟನೆ ಮಾಡಿ ಹುಬ್ಬಳ್ಳಿಯಿಂದ ರೈಲು ಸಂಚಾರ ಆರಂಭವಾಗಲಿದೆ.

Advertisement

ಗಿಣಿಗೇರಿಯಿಂದ ರಾಯಚೂರುವರೆಗೆ 165 ಕಿ.ಮೀ. ಉದ್ದ ರೈಲ್ವೆ ಮಾರ್ಗ ಇದಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಂಟಿ ಅನುದಾನನದಲ್ಲಿ ಯೋಜನೆ ರೂಪಿಸಲಾಗಿದೆ. ಯೋಜನಾ ವೆಚ್ಚ ಓಟ್ಟು 1390 ಕೋಟಿ ರೂ.ಯಾಗಿದೆ. ಇದುವರೆಗೆ 850 ಕೋಟಿ ರೂ.ಗಳನ್ನು ಖರ್ಚು ಮಾಡಿ ಗಂಗಾವತಿ ಕಾರಟಗಿವರೆಗೆ ರೈಲ್ವೆ ಮಾರ್ಗದ ಕಾಮಗಾರಿ ಕೈಗೊಳ್ಳಲಾಗಿದೆ. 150 ಕೋಟಿ ರೂ. ಗಳನ್ನು ಭೂಮಿ ನೀಡಿದ ರೈತರಿಗೆ ಇದುವರೆಗೂ ಪರಿಹಾರವಾಗಿ ವಿತರಣೆ ಮಾಡಲಾಗಿದೆ. ಅಯೋಧ್ಯಾ, ಶ್ರೀರಾಮನಗರದ ಕೆಲ ರೈತರು ಭೂಸ್ವಾ ಧೀನಕ್ಕೆ ತಕರಾರು ತೆಗೆದಿದ್ದರು. ಅವರ ಮನವೊಲಿಕೆ ಮಾಡಿ ಅವರಿಗೆ ಪರಿಹಾರವಾಗಿ 26 ಕೋಟಿ ರೂ. ಗಳನ್ನು ಬ್ಯಾಂಕ್‌ನಲ್ಲಿ ಡಿಪಾಜಿಟ್‌ ಮಾಡಲಾಗಿದೆ. ಕಂದಾಯ ಇಲಾಖೆ 11ಎ ನಕ್ಷೆ ನೀಡಿದ ತಕ್ಷಣ ರೈತರಿಗೆ ಪರಿಹಾರ ನೀಡಲಾಗುತ್ತದೆ. ಈಗಾಗಲೇ 1004 ಎಕರೆ ಭೂಸ್ವಾಧಿಧೀನವಾಗಿದ್ದು ಇನ್ನೂ 1200 ಎಕರೆ ಸ್ವಾಧೀನ ಬಾಕಿಯಿದೆ. ರೈಲ್ವೆ ಮಾರ್ಗದ ಕಾಮಗಾರಿ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನುದಾನ ನೀಡಿದ್ದು, ಹಣದ ಕೊರತೆಯಿಲ್ಲ.

ಶಾಸಕರಾದ ಪರಣ್ಣ ಮುನವಳ್ಳಿ, ದಢೇಸುಗೂರು ಬಸವರಾಜ, ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಮುಖಂಡರಾದ ತಿಪ್ಪೇರುದ್ರಸ್ವಾಮಿ, ಸಿದ್ದರಾಮಯ್ಯ ಸ್ವಾಮಿ, ವೀರೇಶ ಬಲ್ಕುಂದಿ, ಸೈಯದ್‌ ಅಲಿ, ರಾಜೇಶ ಅಂಗಡಿ, ಶೇಷರಾವ್‌, ಟಿ. ರಾಮಚಂದ್ರ, ದೇವಪ್ಪ ಕಾಮದೊಡ್ಡಿ, ಜಿ. ಶ್ರೀಧರ, ಹೊನ್ನೂರಪ್ಪ ಸೇರಿ ರೈಲ್ವೆ ಇಲಾಖೆಯ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next