Advertisement
ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ಮಧ್ಯೆ ಮತ್ಸ್ಯಗಂಧ ಎಕ್ಸ್‌ಪ್ರೆಸ್ 25 ವರ್ಷ ಗಳಿಂದ ಸಂಚರಿಸುತ್ತಿದೆ. ಇದು ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ರೈಲುಗಳ ಲ್ಲೊಂದು. 1998ರ ಮೇ 1ಕ್ಕೆ ಆರಂಭಗೊಂಡ ಈ ರೈಲು ಹಿಂದೆ ಮಂಗಳೂರು-ಕುರ್ಲಾ ಎಕ್ಸ್‌ಪ್ರೆಸ್ ಎಂದೇ ಕರೆಯಲ್ಪಡುತ್ತಿತ್ತು. ತಿರುವನಂತಪುರ-ಮಂಗಳೂರು ಸೆಂಟ್ರಲ್-ತಿರುವನಂತಪುರ ಸೆಂಟ್ರಲ್ ಎಕ್ಸಪ್ರಸ್ ಕೂಡ ಅಧಿಕ ದಟ್ಟಣೆಯ ರೈಲುಗಳಲ್ಲೊಂದು.
ಮುಂಬಯಿ – ಮಂಗಳೂರು ಮಧ್ಯೆ ಪ್ರಯಾಣಿಕರ ದಟ್ಟಣೆ ಅಧಿಕ, ಅದರಲ್ಲೂ ಮಹಿಳೆಯರು ಮಕ್ಕಳು ಹೆಚ್ಚು ಸಂಚರಿಸುತ್ತಾರೆ. ರೈಲನ್ನು ಅನೇಕ ಬಾರಿ ದುರಸ್ತಿಗೊಳಪಡಿಸಿದರೂ ಸುಧಾರಣೆ ಬಯಸುತ್ತಿತ್ತು. ಈ ಬೇಡಿಕೆ ಕುರಿತು ಉದಯವಾಣಿ ಜ. 10ರಂದು ವಿಶೇಷ ವರದಿ ಪ್ರಕಟಿಸಿತ್ತು. ಎಲ್‌ಎಚ್‌ಬಿ ಕೋಚ್ ಒದಗಿಸುವ ಮೂಲಕ ಸಹಸ್ರಾರು ಪ್ರಯಾಣಿಕರ ಬೇಡಿಕೆ ಈಡೇರಿದಂತಾಗಿದೆ. ಮುಂಬರುವ 2025ರ ಫೆಬ್ರವರಿಯಿಂದ ಈ ಎರಡೂ ರೈಲುಗಳ ರೇಕ್‌ಗಳನ್ನು ಎಲ್‌ಎಚ್‌ಬಿ ರೇಕ್ ಆಗಿ ಪರಿವರ್ತಿಸಲಾಗುವುದು. ನಂ.16347 ತಿರುವನಂತಪುರ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಫೆ. 16ರಿಂದ ಮತ್ತು ನಂ.16348 ಮಂಗಳೂರು ಸೆಂಟ್ರಲ್-ತಿರುವನಂತಪುರ ರೈಲು ಫೆ.19ರಿಂದ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಸಂಚರಿಸಲಿದೆ.
Related Articles
Advertisement
ಎಲ್‌ಎಚ್‌ಬಿ ಕೋಚ್ ವೈಶಿಷ್ಟ್ಯಎಲ್ಎಚ್ಬಿ ಎಂದರೆ ಲಿಂಕ್ ಹಾಫ್‌ಮನ್ ಬುಷ್. ಇದು ಜರ್ಮನ್ ವಿನ್ಯಾಸದ್ದಾಗಿದ್ದು ನಿರ್ವಹಣೆ ಸುಲಭ ಹಾಗೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯ ಬಲ್ಲದು. ಸಾಂಪ್ರದಾಯಿಕ ಕೋಚ್‌ಗೆ ಹೋಲಿಸಿದರೆ ಡಿಸ್ಕ್ ಬ್ರೇಕ್ ಹೊಂದಿದೆ, ಹೆಚ್ಚು ಸುರಕ್ಷಿತ, ಅಧಿಕ ವೇಗದ ಚಾಲನೆಗೆ ಪೂರಕ, ಕಡಿಮೆ ಭಾರ ಹಾಗೂ ಇವುಗಳಲ್ಲಿ ಶಬ್ದ ಮಾಲಿನ್ಯವೂ ಕಡಿಮೆ.