Advertisement
ಸುದ್ದಿಗಾರರ ಜತೆಗೆ ಮಾತನಾಡಿದ ಸಂಸದ ನಳಿನ್, ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ಹಾಗೂ ಸುರೇಶ್ ಅಂಗಡಿ ಅವರ ಪ್ರಯತ್ನಕ್ಕೆ ಪೂರಕವಾಗಿ ಪಾಲ್ಗಟ್ ವಿಭಾಗವು ನಿಗದಿತ ಅವಧಿಗಿಂತ ಮುಂಚೆಯೇ 32 ಕೋಚ್‌ಗಳನ್ನು ಸಿದ್ಧಪಡಿಸಿದೆ. ಈ ಪೈಕಿ 20ನ್ನು ಮಂಗಳೂರಿಗೆ ಮೀಸಲಿಡಲಾಗಿದೆ. ಇವುಗಳಲ್ಲಿ ಒಟ್ಟು 320 ಬೆಡ್‌ಗಳಿವೆ ಎಂದರು.
ದೇಶದ ಕೊರೊನಾ ಹೋರಾಟದ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಾವು ಮೊದಲು ಸಭೆ ಮಾಡಿದ್ದೇವೆ. ವೆನ್ಲಾಕ್ ಆಸ್ಪತ್ರೆಯನ್ನು ಕೊರೊನಾ ಚಿಕಿತ್ಸೆಗಾಗಿ ಮೀಸಲಿಟ್ಟೆವು. ತಲಪಾಡಿ ಗಡಿ ಬಂದ್‌ನಂಥ ಕಠಿನ ಕ್ರಮ ಕೈಗೊಂಡೆವು. ಇದರಿಂದ ಬಹುತೇಕ ನಿಯಂತ್ರಣ ಆಗಿದೆ. ಪಾಸಿಟಿವ್ ಆಗಿದ್ದವರು ಡಿಸಾcರ್ಜ್ ಆಗುತ್ತಿದ್ದಾರೆ. ಏಳು ದಿನಗಳಿಂದ ಪಾಸಿಟಿವ್ ಪ್ರಕರಣಗಳು ಬಂದಿಲ್ಲ. ಇದಕ್ಕಾಗಿ ಎಲ್ಲ ಆಸ್ಪತ್ರೆಗಳ ಮುಖ್ಯಸ್ಥರು, ವೈದ್ಯರು, ನರ್ಸ್‌ಗಳು, ಸಿಬಂದಿ, ಪೊಲೀಸರು ಮತ್ತು ಸಾರ್ವಜನಿಕರಿಗೆ ಅಭಿನಂದನೆ ಎಂದು ಸಂಸದ ನಳಿನ್ ಹೇಳಿದರು.
Related Articles
ಐಸೋಲೇಶನ್ ಬೋಗಿಯಲ್ಲಿ ಎಲೆಕ್ಟ್ರಾನಿಕ್ ಚಾರ್ಜಿಂಗ್ ವ್ಯವಸ್ಥೆ, ಬಟ್ಟೆ, ಕೋಟ್, ಔಷಧ, ಬಕೆಟ್ ಇಡಲು ಪ್ರತ್ಯೇಕ ವ್ಯವಸ್ಥೆಯಿದ್ದು, ಎಲ್ಲದರಲ್ಲೂ ಡಸ್ಟ್ ಬಿನ್, ವೈದ್ಯರಿಗೆ ಸೌಲಭ್ಯ, ಔಷಧ ಸಿಂಪಡಿಸಲು ಸೋಡಿಯಂ ಹೈಪೋಕ್ಲೋರೈಡ್ ವ್ಯವಸ್ಥೆ, ಎಲ್ಲ ಕಿಟಿಕಿಗಳಿಗೆ ಸೊಳ್ಳೆ ಪರದೆ ಅಳವಡಿಸಲಾಗಿದೆ. ಪ್ಯಾಂಟ್ರಿ ಕಾರ್ ಮತ್ತು ಫುಡ್ ವಿಭಾಗವೂ ಇದೆ ಎಂದು ನಳಿನ್ ಹೇಳಿದರು.
Advertisement