ಶಿಮ್ಲಾ: ಭಾರೀ ಮಳೆಯಿಂದಾಗಿ ಪಂಜಾಬ್ ಮತ್ತು ಹಿಮಾಚಲ ಪ್ರದೇಶವನ್ನು ಸಂಪರ್ಕಿಸುವ ಚಕ್ಕಿ ನದಿಯ ಮೇಲಿನ ರೈಲ್ವೆ ಸೇತುವೆ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದಿದೆ.
ರೈಲ್ವೆ ಸೇತುವೆ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೈಲ್ವೆ ಸೇತುವೆಯ ಒಂದು ಪಿಲ್ಲರ್ ಕುಸಿದು ಬಿದ್ದಿದೆ ಅದೃಷ್ಟವಶಾತ್ ಈ ವೇಳೆ ರೈಲು ಸಂಚಾರ ಇಲ್ಲದಿದ್ದ ಪರಿಣಾಮ ಭಾರಿ ಅವಘಡ ತಪ್ಪಿದಂತಾಗಿದೆ.
ಕೆಲ ದಿನಗಳಿಂದ ಹಿಮಾಚಲ ಪ್ರದೇಶದ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ಅಲ್ಲಲ್ಲಿ ಭೂ ಕುಸಿತ, ಪ್ರವಾಹ ಸಂಭವಿಸಿದ ಘಟನೆಗಳು ನಡೆದಿದೆ, ಅಲ್ಲದೆ ಧರ್ಮಶಾಲಾದಲ್ಲಿ ಮೇಘಸ್ಫೋಟ ವರದಿಯಾಗಿದ್ದು, ಆ ಪ್ರದೇಶದಲ್ಲಿ ಭೂಕುಸಿತ ಕೂಡಾ ಸಂಭವಿಸಿದೆ. ಇದರಿಂದಾಗಿ ಹಿಮಾಚಲ ಪ್ರದೇಶದ ಕಂಗ್ರಾ, ಕುಲು ಮತ್ತು ಮಂಡಿ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ :ಸೊಮಾಲಿಯಾದ ಹೋಟೆಲ್‌ನಲ್ಲಿ ಉಗ್ರರಿಂದ ಕಾರು ಬಾಂಬ್ ದಾಳಿ: ಗುಂಡಿನ ಚಕಮಕಿ