Advertisement

Railway: ಕನ್ನಡದಲ್ಲಿ ಸಹಾಯಕ ಲೋಕೋ ಪೈಲಟ್‌ ಹುದ್ದೆ ಮುಂಭಡ್ತಿ ಪರೀಕ್ಷೆ: ನೈಋತ್ಯ ರೈಲ್ವೇ

12:42 AM Aug 08, 2024 | Team Udayavani |

ಬೆಂಗಳೂರು: ಸಹಾಯಕ ಲೋಕೋ ಪೈಲಟ್‌ ಹುದ್ದೆ ಮುಂಭಡ್ತಿ ಪರೀಕ್ಷೆ ಕನ್ನಡದಲ್ಲಿ ನಡೆಸಲು ನೈಋತ್ಯ ರೈಲ್ವೇ ಕ್ರಮ ಕೈಗೊಂಡಿದ್ದು, ಇದರಿಂದ ರೈಲ್ವೆಯಲ್ಲಿ ಕಾರ್ಯನಿರ್ವಹಿಸುವ ಕನ್ನಡಿಗ ಸಿಬಂದಿಗೆ ಸಹಾಯಕವಾಗಲಿದೆ.

Advertisement

ನೈಋತ್ಯ ರೈಲ್ವೇ ವಲಯವು ಸಹಾಯಕ ಲೋಕೋ ಪೈಲಟ್‌ ಹುದ್ದೆಗೆ ಮುಂಭಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿಯೂ ನಡೆಸಲು ಕ್ರಮ ಕೈಗೊಂಡಿದ್ದು, ಈ ಸಂಬಂಧ ನೈಋತ್ಯ ರೈಲ್ವೇ ಕೇಂದ್ರ ಕಚೇರಿಯಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ ವಿಭಾಗೀಯ ಅಧಿಕಾರಿಗಳಿಗೆ ಅಧಿಕೃತ ಆದೇಶ ಹೊರಡಿಸಲಾಗಿದೆ. ಸದ್ಯದಲ್ಲಿಯೇ ದಿನಾಂಕವನ್ನು ಮರು-ನಿಗದಿಪಡಿಸಿ ಪರೀಕ್ಷೆ ನಡೆಸಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ರೈಲ್ವೇ ಮತ್ತು ಜಲ ಶಕ್ತಿ ಖಾತೆ ರಾಜ್ಯ ಸಚಿವರ ಕಾರ್ಯಾಲಯ ಪ್ರಕಟನೆಯಲ್ಲಿ ತಿಳಿಸಿದೆ.

ಕೇವಲ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿತ್ತು. ಇಲಾಖೆಯ ಈ ಕ್ರಮದಿಂದ ನೈಋತ್ಯ ರೈಲ್ವೇ ವಲಯದಲ್ಲಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಕನ್ನಡಿಗ ಅಭ್ಯರ್ಥಿಗಳಿಗೆ ಅನಾನುಕೂಲವಾಗುತ್ತಿದೆ ಎಂಬ ವಿಷಯ ರೈಲ್ವೇ ಮತ್ತು ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಗಮನಕ್ಕೆ ಬಂದಿತ್ತು. ಕೂಡಲೇ ಅವರು ಕಾರ್ಯಪ್ರವೃತ್ತರಾಗಿ ನೈಋತ್ಯ ರೈಲ್ವೇ ಮಹಾಪ್ರಬಂಧಕರಿಗೆ ಕನ್ನಡದಲ್ಲಿಯೂ ಪರೀಕ್ಷೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next