ಮಂಗಳೂರು: ರೈಲು ಸಂಚಾರ ಆರಂಭಗೊಂಡಿದ್ದು, ಗುರುವಾರ ಉತ್ತರ ಭಾರತದ ಕಡೆ ಯಿಂದ ಮಂಗಳೂರು ಮೂಲಕ 3 ರೈಲುಗಳು ಹಾದುಹೋಗಿದ್ದು, ಮಂಗಳೂರು ಜಂಕ್ಷನ್‌ನಲ್ಲಿ 200 ಮಂದಿ ಇಳಿದಿದ್ದಾರೆ. ಬುಧವಾರ ಸಂಜೆ 6.30ಕ್ಕೆ ಬರ ಬೇಕಾಗಿದ್ದ ದಿಲ್ಲಿ- ತಿರುವನಂತಪುರ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಮುಂಜಾನೆ 4ಕ್ಕೆ ಮಂಗಳೂರು ಜಂಕ್ಷನ್ ಮೂಲಕ ಕೇರಳ ಕಡೆಗೆ ಸಾಗಿದೆ. ಈ ರೈಲಿನಿಂದ 12 ಜನ ಮುಂಬಯಿ ಪ್ರಯಾಣಿಕರ ಸಹಿತ 49 ಜನ ಮಂಗಳೂರಿನಲ್ಲಿ ಇಳಿ ದಿದ್ದಾರೆ. ಗುರುವಾರ ಸಂಜೆ 6.30ಕ್ಕೆ ಬಂದ ರಾಜಧಾನಿ ಎಕ್ಸ್ ಪ್ರಸ್ ರೈಲಿನಲ್ಲಿ 95 ಮಂದಿ ಮಂಗಳೂರಿನಲ್ಲಿ ಇಳಿದಿದ್ದಾರೆ. ಮಧ್ಯಾಹ್ನ 12.10ಕ್ಕೆ ನೇತ್ರಾವತಿ ಎಕ್ಸ್‌ಪ್ರೆಸ್‌ನ 76 ಮಂದಿ ಮಂಗಳೂರಿನಲ್ಲಿ ಇಳಿದಿದ್ದಾರೆ. ಅವರ ಪೈಕಿ ಮುಂಬಯಿಯ ಎಷ್ಟು ಜನ ಇದ್ದರೆಂದು ಮಾಹಿತಿ ಲಭ್ಯವಾಗಿಲ್ಲ. ರೈಲಿನಲ್ಲಿ ಇಳಿದ ಪ್ರಯಾಣಿಕರನ್ನು ಥರ್ಮೋ ಸ್ಕ್ರೀನಿಂಗ್ ಮಾಡಿಸಿ ಬಳಿಕ ಮುಂಬಯಿ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಹಾಗೂ ಇತರರನ್ನು ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.
ಉಡುಪಿಗೆ 159 ಮಂದಿ
ಉಡುಪಿ: ಮಹಾರಾಷ್ಟ್ರದ ಲೋಕಮಾನ್ಯ ಟರ್ಮಿನಲ್‌ನಿಂದ ಹೊರಟ ಎರ್ನಾಕುಳಂ ರೈಲು ಮೂಲಕ ಗುರುವಾರ 159 ಮಂದಿ ಪ್ರಯಾಣಿಕರು ಮಹಾರಾಷ್ಟ್ರ ಸಹಿತ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ್ದಾರೆ. ಕಾಪು, ಉಡುಪಿ, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಕುಂದಾ ಪುರ, ಬೈಂದೂರು ತಾ|ಗೆ ಸಂಬಂಧಿಸಿದಂತೆ 150 ಪ್ರಯಾಣಿಕರು ಹಾಗೂ ಚಿಕ್ಕಮಗಳೂರು ಜಿಲ್ಲೆಯಿಂದ 9 ಮಂದಿ ಉಡುಪಿ ಜಿಲ್ಲೆಯ ವಿವಿಧ ರೈಲು ನಿಲ್ದಾಣಕ್ಕೆ ಆಗಮಿಸಿ ದ್ದಾರೆ. ಹಾರಾಷ್ಟ್ರದಿಂದ ಬಂದ 151 ಜನರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ, ಗೋವಾದಿಂದ ಬಂದ ಪ್ರಯಾಣಿಕರನ್ನು ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.