Advertisement

ರೈಲು ನಿಲ್ದಾಣ ಕಾಮಗಾರಿಗೆ ಅಡಿಗಲ್ಲು

09:41 AM Feb 22, 2019 | |

ವಿಜಯಪುರ: ಸ್ವಾತಂತ್ರ್ಯ ನಂತರ 60 ವರ್ಷ ಆಡಳಿತ ನಡೆಸಿದವರು ದೇಶದ ಹಣ ಲೂಟಿ ಮಾಡಿ ವಿದೇಶಕ್ಕೆ ಕಳುಹಿಸಿದರು ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಪರೋಕ್ಷವಾಗಿ ಕಾಂಗ್ರೆಸ್‌ ಆಡಳಿತವನ್ನು ಟೀಕಿಸಿದರು.

Advertisement

ನಗರದಲ್ಲಿ ನೂತನ ರೈಲು ನಿಲ್ದಾಣ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಗೂ ವಿಜಯಪುರ-ಮಿಂಚನಾಳ ನಡುವಿನ ಲೆವೆಲ್‌ ಕ್ರಾಸಿಂಗ್‌ ಗೇಟ್‌ ನಂ.84ರ ಬಳಿ ನಿರ್ಮಿಸುತ್ತಿರುವ ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರ ಅಟಲ್‌
ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರಂತಹ ನಾಯಕರು ಆಡಳಿತ ನಡೆಸಿದ್ದರೆ ಭಾರತದ ಚಿತ್ರಣವೇ ಬದಲಾಗುತ್ತಿತ್ತು. ಆದರೆ ಕೇಂದ್ರದಲ್ಲಿ 60 ವರ್ಷ ಒಂದೇ ಪಕ್ಷ ಕೇಂದ್ರಿತ ಆಡಳಿತ ವ್ಯವಸ್ಥೆಯಿಂದಾಗಿ ಅಭಿವೃದ್ಧಿಯಾಗಿಲ್ಲ. ಒಂದೇ ಒಂದು ಬ್ರಿಡ್ಜ್ ಸಹ ಅವರು ನಿರ್ಮಿಸಲಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.

ಕಳೆದ ಐದು ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತ್ಛ ಹಾಗೂ ಪಾರದರ್ಶಕ ಆಡಳಿತ ನೀಡಿದ್ದು, ಒಂದೇ ಒಂದು ಹಗರಣ ನಡೆಯಲು ಅವಕಾಶ ನೀಡಲಿಲ್ಲ. ಆದರೆ ಈ ಹಿಂದೆ ನಿತ್ಯ ಲಂಚಗುಳಿತನ, ಭ್ರಷ್ಟಾಚಾರ, ಸಚಿವರೊಬ್ಬರ ಮೇಲೆ ಭ್ರಷ್ಟಾಚಾರದ ಕೇಸ್‌ಗಳು ದಾಖಲಾಗುತ್ತಿದ್ದವು. ಸಾವಿರಾರು
ಕೋಟಿ ರೂ.ಗಳ ಅವ್ಯವಹಾರ ಕೇಳಿಬರುತ್ತಿತ್ತು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅಭಿವೃದ್ಧಿ ಪರ್ವ ಆರಂಭವಾಗಿದೆ. ಈಗಾಗಲೇ ಕೈಗೆತ್ತಿಕೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದೇನೆ ಎಂದರು.

ಈಗಾಗಲೇ ಮಂಜೂರಾಗಿರುವ ಆರ್‌ಒಬಿ ಕಾಮಗಾರಿ ಮಹಾನಗರ ಪಾಲಿಕೆ ದಡ್ಡತನದಿಂದಾಗಿ ಅರ್ಧಕ್ಕೆ ನಿಂತಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಮನ್ವಯ ಸಮಿತಿ ಸಭೆ ಕರೆಯಿರಿ ಎಂದು ಸೂಚನೆ ನೀಡಲು ಕರೆ ಮಾಡಿದ್ದೆ. ಆದರೆ ಸರ್‌, ನನಗೆ ವರ್ಗಾವಣೆಯಾಗಿದೆ ಎಂದು ಶೆಟ್ಟೆಣ್ಣವರ
ಪ್ರತಿಕ್ರಿಯಿಸಿದ್ದಾರೆ. ಈ ಸರ್ಕಾರದಲ್ಲಿ ಯಾರು ಯಾವಾಗ ವರ್ಗಾವಣೆ ಯಾಗುತ್ತಾರೋ, ಮುಂಜಾನೆ ಎದ್ದು ಯಾರು ಬರುತ್ತಾರೋ, ಸಂಜೆ ಯಾರು ಹೋಗುತ್ತಾರೋ ಯಾರಿಗೆ ಗೊತ್ತಿಲ್ಲ, ಒಂದು ರೀತಿ ರಾಜ್ಯ ಸರ್ಕಾರದ ಪರಿಸ್ಥಿತಿ ತಾಳ ತಪ್ಪಿದ ಬಾಳೆ ಆದಂತಾಗಿದೆ ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಸಾವಿರಾರು ಕೋಟಿ ರೂ. ಮೌಲ್ಯದ ಚತುಷಥ ರಸ್ತೆ ಕಾಮಗಾರಿಗಳು, ನನೆಗುದಿಗೆ ಬಿದ್ದಿದ್ದ ಆರ್‌ಒಬಿ ನಿರ್ಮಾಣ ಹೀಗೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಜಿಲ್ಲೆಗೆ ಅಭಿವೃದ್ಧಿಯ ಕೊಡುಗೆ ನೀಡಿದ್ದಾರೆ. ಆದರೆ ಕೆಲವು ನಾಯಕರಿಗೆ ಇದು ಅರ್ಥವಾಗುತ್ತಿಲ್ಲ. ವಿನಾಕಾರಣ ಜಿಗಜಿಣಗಿ ಅವರ ಸಾಧನೆ ಏನು ಎಂಬುದನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದರು.

Advertisement

ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ಅವರ ಪ್ರಯತ್ನದ ಫಲವಾಗಿ ಇಬ್ರಾಹಿಂಪೂರ, ಅಲಿಯಾಬಾದ, ವಜ್ರಹನುಮಾನ, ಹೊನಗನಹಳ್ಳಿಯಲ್ಲಿ ಆರ್‌ಒಬಿ ನಿರ್ಮಾಣ ಕಾಮಗಾರಿಗಳು ಆರಂಭಗೊಂಡಿವೆ. ರೈಲ್ವೆ ಕ್ರಾಸಿಂಗ್‌ನಿಂದಾಗಿ ಸಾಕಷ್ಟು ಸಮಯ ವ್ಯಯವಾಗಿ ವ್ಯಾಪಾರಸ್ಥರಿಗೆ, ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು, ಈ ಸಮಸ್ಯೆಗೆ ಈಗ ಪರಿಹಾರ ಕೈಗೊಳ್ಳಲಾಗುತ್ತಿದೆ ಎಂದರು.

ಶಾಸಕ ಡಾ| ದೇವಾನಂದ ಚವ್ಹಾಣ ಮಾತನಾಡಿದರು. ಮೇಯರ್‌ ಶ್ರೀದೇವಿ ಲೋಗಾಂವಿ, ಪಾಲಿಕೆ ಸದಸ್ಯ ರವೀಂದ್ರ ಲೋಣಿ, ಡಿ.ಎಸ್‌. ಗುಡ್ಡೋಡಗಿ, ಜಿಪಂ ಸದಸ್ಯ ನವೀನ್‌ ಅರಕೇರಿ, ರವೀಂದ್ರ ಬಿಜ್ಜ  

Advertisement

Udayavani is now on Telegram. Click here to join our channel and stay updated with the latest news.

Next