Advertisement
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಬೆಳಗ್ಗೆ 11.30ರ ಮುಂಬೈ-ಬೆಂಗಳೂರಿಗೆ ಹೊರಡುವ ಕುರ್ಲಾ ಎಕ್ಸ್‌ಪ್ರೆಸ್ ರೈಲು ತಡೆಗಟ್ಟಲು ಮುಂದಾದಾಗ ಪೊಲೀಸರು ಅಡ್ಡಗಟ್ಟಿದರು. ಈ ವೇಳೆ ವಾಗ್ವಾದ ನಡೆದು ನೂಕುನುಗ್ಗಲು ಏರ್ಪಟ್ಟಿತು. ಕೊನೆಗೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು.
ಹುನ್ನಾರ ನಡೆಯುತ್ತಿರುವುದು ಖಂಡನೀಯ. ತೈಲ ಬೆಲೆ ದಿನೇದಿನೆ ಏರುತ್ತಿದ್ದರೂ ಕೇಂದ್ರ ಸರ್ಕಾರ ಮೌನಕ್ಕೆ ಶರಣಾಗಿದೆ. ಕೂಡಲೇ ಇದಕ್ಕೆ ಕಡಿವಾಣ
ಹಾಕಲಿ ಎಂದು ತಾಕೀತು ಮಾಡಿದರು. ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಜಿಲ್ಲಾ ಸಂಚಾಲಕ ಕೆ.ಜಿ. ವೀರೇಶ್, ವಿವಿಧ ಸಂಘಟನೆಗಳ ಮುಖಂಡರಾದ ಶರಣಪ್ಪ ಮರಳಿ, ಈ.ರಂಗನಗೌಡ,
ರವಿರಾಜ, ರೂಪಾ ಶ್ರೀನಿವಾಸ ನಾಯಕ, ಡಿ.ಎಸ್. ಶರಣಬಸವ, ಮಾರೆಪ್ಪ ಹರವಿ, ಖಾಜಾ ಅಸ್ಲಂಪಾಷ, ರಾಮಬಾಬು, ನರಸಪ್ಪ ಶಕ್ತಿನಗರ, ಶ್ರೀನಿವಾಸ
ಕಲವಲದೊಡ್ಡಿ, ಎನ್.ಎಸ್.ವೀರೇಶ್, ಚನ್ನಬಸವ ಜಾನೇಕಲ್, ವೀರೇಶ ಕೊತ್ತದೊಡ್ಡಿ, ರಂಗಪ್ಪ ಯಾಪಲದಿನ್ನಿ, ಮಲ್ಲಿಕಾರ್ಜುನ ದಿನ್ನಿ, ಉಮಾದೇವಿ
ಸೇರಿದಂತೆ ಅನೇಕ ಮುಖಂಡರು, ರೈತರು ಪಾಲ್ಗೊಂಡಿದ್ದರು.