Advertisement

ಕೇರಳ: ಪಿಎಫ್ ಐ ಮುಖಂಡರ ನಿವಾಸಗಳ ಮೇಲೆ ಎನ್ ಐಎ ದಾಳಿ, ತೀವ್ರ ಶೋಧ

01:36 PM Dec 29, 2022 | Team Udayavani |

ತಿರುವನಂತಪುರಂ: ಕೇರಳದಲ್ಲಿ ನಿಷೇಧಿತ ಪಿಎಫ್ ಐ ಸಂಘಟನೆಯ ಎರಡನೇ ಹಂತದ ಮುಖಂಡರ ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದ ಅಧಿಕಾರಿಗಳು ಗುರುವಾರ (ಡಿಸೆಂಬರ್ 29) ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ವಂಚನೆ ಪ್ರಕರಣ; ಆರೋಪಿ ಲಕ್ಷ್ಮೀನಾರಾಯಣಗೆ ಜ.11ರ ವರೆಗೆ ನ್ಯಾಯಾಂಗ ಬಂಧನ

ಬುಧವಾರ ತಡರಾತ್ರಿ ದಾಳಿ ನಡೆದಿದ್ದು, ಗುರುವಾರವೂ ಮುಂದುವರಿದಿರುವುದಾಗಿ ಕೇರಳ ಪೊಲೀಸ್ ಮೂಲಗಳು ಹೇಳಿವೆ. ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಕೇರಳ, ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿ ಎನ್ ಐಎ ಪಿಎಫ್ ಐ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಿ ಬಂಧಿಸಿತ್ತು.

ಇದೊಂದು ಬೃಹತ್ ಕಾರ್ಯಾಚರಣೆಯಾಗಿರುವುದಾಗಿ ಎನ್ ಐಎ ಅಧಿಕಾರಿಗಳು ತಿಳಿಸಿದ್ದು, ಇದು ಪಿಎಫ್ ಐ ವಿರುದ್ಧದ ಅತೀ ದೊಡ್ಡ ತನಿಖಾ ಕಾರ್ಯಾಚರಣೆಯಾಗಿದೆ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next