Advertisement

ರಸಗೊಬ್ಬರ ಅಂಗಡಿ ಮೇಲೆ ದಾಳಿ; ದಾಖಲೆ ಪರಿಶೀಲನೆ

06:25 PM May 21, 2022 | Team Udayavani |

ಹುಬ್ಬಳ್ಳಿ: ಇಟಗಿ, ಗಂದಿಗವಾಡ, ನಂದಗಡ, ಬೇಕವಾಡ, ಬೀಡಿ ಗ್ರಾಮಗಳಲ್ಲಿ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮಾರಾಟ ಮಳಿಗೆಗಳ ಮೇಲೆ ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

Advertisement

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಬಿ.ಚವ್ಹಾಣ ಹಾಗೂ ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಮಂಜುನಾಥ ಕುಸಗಲ್‌, ಕೃಷಿ ಅಧಿಕಾರಿ ಮಂಜುನಾಥ ಕೆಂಚನ್ನವರ ದಾಳಿ ನೇತೃತ್ವ ವಹಿಸಿದ್ದರು.

ಕೆಲವೆಡೆ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೆಲ ಅಂಗಡಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ. ರಸಗೊಬ್ಬರ ದಾಸ್ತಾನು, ದಾಸ್ತಾನು ಪುಸ್ತಕ ಮತ್ತು ದರಪಟ್ಟಿ ಫಲಕಗಳನ್ನು ದಾಳಿ ವೇಳೆ ಪರಿಸೀಲಿಸಲಾಯಿತು.

ಮಾರಾಟ ಮಳಿಗೆದಾರರಿಗೆ ದರಫಲಕದಲ್ಲಿ ಕಡ್ಡಾಯವಾಗಿ ರಸಗೊಬ್ಬರ ದರ, ದಾಸ್ತಾನು ವಿವರ, ದಾಸ್ತಾನು ಪುಸ್ತಕದ ಸಮರ್ಪಕ ನಿರ್ವಹಿಸಬೇಕೆಂದು ಹಾಗೂ ಪಿಓಎಸ್‌ ಮಶೀನ್‌ ಮತ್ತು ಭೌತಿಕ ರಸಗೊಬ್ಬರ ದಾಸ್ತಾನು ಎರಡು ಹೊಂದಾಣಿಕೆ ಇರಬೇಕೆಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಬಿ.ಚವ್ಹಾಣ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next