Advertisement

ಕಾಲ್ನಡಿಗೆಯಲ್ಲೇ ತವರಿನತ್ತ ಕಾರ್ಮಿಕರು

07:06 PM May 16, 2020 | Naveen |

ರಾಯಚೂರು: ಜಿಲ್ಲೆಯ ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಗುಳೆ ಬಂದಿದ್ದ ಮಧ್ಯ ಪ್ರದೇಶದ ಅನೇಕ ಕಾರ್ಮಿಕರು ಸರಕು ಸರಂಜಾಮು ಸಮೇತ ತಮ್ಮೂರಿಗೆ ತೆರಳುತ್ತಿದ್ದು, ಅವರನ್ನು ಶಕ್ತಿನಗರ ಬಳಿ ಅಧಿಕಾರಿಗಳು ತಡೆದ ಪ್ರಕರಣ ಬುಧವಾರ ನಡೆದಿದೆ.

Advertisement

ಗಂಟು ಮೂಟೆಗಳ ಸಮೇತ ಪ್ರಯಾಣ ಆರಂಭಿಸಿದರು. ಇಷ್ಟು ದಿನಗಳ ಕಾಲ ಇಲ್ಲಿಯೇ ಉಳಿದಿದ್ದ ಈ ಕಾರ್ಮಿಕರಿಗೆ ಕೆಲಸವಿಲ್ಲದ ಕಾರಣ ಕುಟುಂಬ ನಿರ್ವಹಣೆ ಕೂಡ ಕಷ್ಟವಾಗುತ್ತಿದೆ. ಇದರಿಂದ ಅಂತಾರಾಜ್ಯಗಳಿಗೆ ಹೋಗಲು ಸರ್ಕಾರ ಅವಕಾಶ ನೀಡಿದೆ ಎಂಬ ಮಾಹಿತಿ ಆಧರಿಸಿ ಪಾದಯಾತ್ರೆ ಮೂಲಕ ತೆರಳಿದರು. ರಾಯಚೂರಿನಿಂದ ಹೈದರಾಬಾದ್‌ ಮುಖ್ಯರಸ್ತೆ ಮೂಲಕ ಸುಮಾರು 50-60ಕ್ಕೂ ಹೆಚ್ಚು ಜನ ಮಕ್ಕಳ ಸಮೇತರಾಗಿ ಪ್ರಯಾಣ ಬೆಳೆಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಶಕ್ತಿನಗರ ಬಳಿ ಅಧಿಕಾರಿಗಳು ವಿಚಾರಣೆ ನಡೆಸಿ ತಡೆದಿದ್ದಾರೆ. ಅಲ್ಲಿಯೇ ತಂಗಲು ವ್ಯವಸ್ಥೆ ಮಾಡಿದ್ದು, ರೈಲು ಸೇವೆ ಆರಂಭವಾಗುತ್ತಿದ್ದು, ನಿಮ್ಮೂರಿಗೆ ತೆರಳಲು ಅವಕಾಶ ಮಾಡಿಕೊಡಲಾಗುವುದು ಎಂದು ಮನವರಿಕೆ ಮಾಡಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next