Advertisement

ಹಸೆಮಣೆ ಏರಿದ 17 ಜೋಡಿ

02:43 PM Jun 14, 2019 | Naveen |

ರಾಯಚೂರು: ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಅಂಗವಾಗಿ ನಗರದ ಗದ್ವಾಲ್ ರಸ್ತೆಯಲ್ಲಿನ ಲಕ್ಷ್ಮಮ್ಮದೇವಿ ದೇವಸ್ಥಾನದಲ್ಲಿ ಜಿಲ್ಲಾ ಮುನ್ನೂರು ಕಾಪು ಸಮಾಜದ ಯುವಕ ಮಂಡಳಿಯಿಂದ ಗುರುವಾರ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.

Advertisement

17 ಜೋಡಿಗಳು ನವಜೀವನಕ್ಕೆ ಕಾಲಿರಿಸಿದರು. ಸೋಮವಾರಪೇಟೆ ಹಿರೇಮಠದ ಅಭಿನವ ಶ್ರೀ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರಿನ ಶ್ರೀ ಬೂದಿ ಬಸವೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಹಾಗೂ ಕಾರ್ಯಕ್ರಮ ರೂವಾರಿ ಎ.ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ವಧು ವರರನ್ನು ಆಶಿರ್ವದಿಸಿದರು.

ಮುನ್ನೂರು ಕಾಪು ಸಮಾಜದಿಂದ ನವ ದಂಪತಿಗೆ ಕಾಲುಂಗುರ, ಬಟ್ಟೆ ಹಾಗೂ ತಾಳಿ ನೀಡಲಾಯಿತು. ಜೂ.14ರಂದು ಲಕ್ಷ್ಮಮ್ಮ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಹೋಮ ಹವನ ಏರ್ಪಡಿಸಿದ್ದು, ಜೂ.16ರಿಂದ ಮೂರು ದಿನಗಳ ಕಾಲ ಮುಂಗಾರು ಸಾಂಸ್ಕೃತಿಕ ರಾಯಚುರು ಹಬ್ಬಕ್ಕೆ ಚಾಲನೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.

ಮುಖಂಡರಾದ ಜಿ.ಬಸವರಾಜ ರೆಡ್ಡಿ, ರಾಳ್ಳ ತಿಮ್ಮಾರೆಡ್ಡಿ, ದೊಡ್ಡ ಮಲ್ಲೇಶಪ್ಪ, ಎಂ.ನಾಗೀರೆಡ್ಡಿ, ಜಿ.ತಿಮ್ಮಾರೆಡ್ಡಿ, ಗುಡ್ಸಿ ನರಸರೆಡ್ಡಿ, ಎನ್‌.ಶ್ರೀನಿವಾಸರೆಡ್ಡಿ, ಪೋಗಲ ಶೇಖರರೆಡ್ಡಿ, ಬಂಗಿ ನರಸರೆಡ್ಡಿ, ವೆಂಕಟರೆಡ್ಡಿ ಸೇರಿ ಸಮಾಜದ ಮಹಿಳೆಯರು, ಯುವಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next