Advertisement

ನಿರೀಕ್ಷೆ ಮೀರಿ ಬಿಜೆಪಿಗೆ ಸಾಧನೆ

04:19 PM May 24, 2019 | Naveen |

ರಾಯಚೂರು: ಚುನಾವಣೆ ಪೂರ್ವದಲ್ಲಿ ಗೆಲ್ಲುವುದೇ ಕಷ್ಟ ಎನ್ನುವ ಸ್ಥಿತಿಯಲ್ಲಿದ್ದ ಬಿಜೆಪಿಗೆ ಮೇ 23ರ ಫಲಿತಾಂಶ ಅನಿರೀಕ್ಷಿತ ಫಲಿತಾಂಶವನ್ನೇ ನೀಡಿದೆ. ಕ್ಷೇತ್ರದ ಮತದಾರರು ಬರೋಬ್ಬರಿ 1,17,716 ಮತಗಳ ಭಾರೀ ಅಂತರದಿಂದ ಬಿಜೆಪಿಯನ್ನು ಗೆಲ್ಲಿಸಿದ್ದಾರೆ.

Advertisement

ಕಣದಲ್ಲಿ ಕಾಂಗ್ರೆಸ್‌, ಬಿಜೆಪಿ ಸೇರಿ ಐವರು ಅಭ್ಯರ್ಥಿಗಳು ಮಾತ್ರ ಇದ್ದರು. ಹಾಲಿ ಸಂಸದರಾಗಿದ್ದ ಬಿ.ವಿ.ನಾಯಕ ಮತ್ತು ಬಿಜೆಪಿಯ ರಾಜಾ ಅಮರೇಶ್ವರ ನಾಯಕರ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿತ್ತು. ಫಲಿತಾಂಶಕ್ಕಾಗಿ ಕಾದು ಕುಳಿತವರಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಕಾಂಗ್ರೆಸ್‌ನ ಬಿ.ವಿ. ನಾಯಕ 4,80,621 ಮತಗಳನ್ನು ಪಡೆದರೆ, ಬಿಜೆಪಿಯ ರಾಜಾ ಅಮರೇಶ್ವರ ನಾಯಕ 5,98,337 ಮತಗಳನ್ನು ಪಡೆಯುವ ಮೂಲಕ 1,17,716 ಮತಗಳ ಭಾರೀ ಅಂತರದಿಂದ ಗೆಲುವು ದಾಖಲಿಸಿಕೊಂಡರು. ಬಹುಜನ ಸಮಾಜ ಪಕ್ಷದ ವೆಂಕನಗೌಡ ನಾಯಕ 13,830, ಪ್ರಜಾಕೀಯ ಪಕ್ಷದ ನಿರಂಜನ್‌ ನಾಯಕ 7,833 ಹಾಗೂ ಎಸ್‌ಯುಸಿಐ ಪಕ್ಷದ ಸೋಮಶೇಖರ 8843 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಅಚ್ಚರಿ ಎಂದರೆ ಈ ಮೂವರು ಅಭ್ಯರ್ಥಿಗಳಿಗಿಂತ ನೋಟಾಕ್ಕೆ ಚಲಾವಣೆಯಾದ ಮತಗಳೇ ಹೆಚ್ಚಾಗಿದ್ದವು. ಈ ಬಾರಿ ನೋಟಾಕ್ಕೆ 14,921 ಮತಗಳು ಚಲಾವಣೆಯಾಗಿವೆ.

ಅಂಚೆ ಮತಗಳಲ್ಲೂ ಬಿಜೆಪಿ ಮುಂದೆ: ಈ ಬಾರಿ 2,810 ಅಂಚೆ ಮತಗಳು ಚಲಾವಣೆಯಾಗಿದ್ದು, ಅದರಲ್ಲಿ 577 ಮತಗಳು ತಿರಸ್ಕೃತಗೊಂಡಿವೆ. ಅಂಚೆ ಮತಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದ್ದು, 1,533 ಮತ ಪಡೆದಿದೆ. ಕಾಂಗ್ರೆಸ್‌ಗೆ 663, ಬಿಎಸ್‌ಪಿಗೆ 18, ಪ್ರಜಾಕೀಯ ಪಕ್ಷಕ್ಕೆ 5, ಎಸ್‌ಯುಸಿಐ ಪಕ್ಷಕ್ಕೆ 8 ಮತಗಳು ಲಭಿಸಿವೆ. ಇಲ್ಲೂ 7 ಮತಗಳು ನೋಟಾಕ್ಕೆ ಚಲಾವಣೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next