Advertisement

ಶಾಂತಿಧೂತನಿಗೆ ಭಾವಪೂರ್ಣ ನಮನ

12:10 PM Oct 03, 2019 | Naveen |

ರಾಯಚೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ 150ನೇ ಜನ್ಮ ದಿನವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಎಲ್ಲ ಶಾಲಾ ಕಾಲೇಜು, ಕಚೇರಿಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ಜಯಂತ್ಯುತ್ಸವ ಆಚರಿಸಲಾಯಿತು.

ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ ಆಯೋಜಿಸಲಾಗಿತ್ತು. ಹಿಂದೂ ಧರ್ಮದ ಕುರಿತು ಲಕ್ಷ್ಮೀ ದೇವಿ, ಇಸ್ಲಾಂ ಧರ್ಮದ ಕುರಿತು ಸಲೀಂ ಪಾಷಾ, ಕ್ರೈಸ್ತ ಧರ್ಮದ ಬಗ್ಗೆ ರೆವರೆಂಡ್‌ ವಿಜಯಕುಮಾರ, ಬೌದ್ಧ ಧರ್ಮದ ವಿದ್ಯಾಸಾಗರ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ನಗರ ಶಾಸಕ ಡಾ|ಎಸ್‌. ಶಿವರಾಜ ಪಾಟೀಲ, ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ, ಜಿಪಂ ಸಿಇಒ ಜಿ.ಲಕ್ಷ್ಮೀ ಕಾಂತ ರೆಡ್ಡಿ, ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಎಸಿ ಸಂತೋಷ, ತಹಶೀಲ್ದಾರ್‌ ಹಂಪಣ್ಣ ಸೇರಿ ಜನಪ್ರತಿನಿ ಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಮಹಾತ್ಮ ಗಾಂಧಿಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಗಾಂಧಿ ಚಿಂತನೆಗಳ ಕುರಿತು ಡಯಟ್‌ ಪ್ರಾಚಾರ್ಯ ಮಲ್ಲಿಕಾರ್ಜುನ ಸ್ವಾಮಿ ಉಪನ್ಯಾಸ ನೀಡಿ, ಗಾಂಧೀಜಿಯವರು ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ. ಅವರು ವಿಶ್ವಕ್ಕೆ ಸ್ಪೂರ್ತಿದಾಯಕ ವ್ಯಕ್ತಿ. ಅಹಿಂಸೆ ಹಾಗೂ ಸತ್ಯಾಗ್ರಹದ ಮೂಲಕ ಬ್ರಿಟೀಷರ ಆಳ್ವಿಕೆಯಿಂದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ  ಧೀಮಂತ ನಾಯಕ. ನೆಲ್ಸನ್‌ ಮಂಡೇಲಾ ಸೇರಿದಂತೆ ಅಂತಾರಾಷ್ಟ್ರೀಯ ಖ್ಯಾತಿಯುಳ್ಳ ವಿದೇಶಿಯರಿಗೆ ಅವರು ಹಾಗೂ ಅವರ ಹೋರಾಟ ಪ್ರೇರಣೆ ಆಗಿತ್ತು ಎಂದರೆ ಅವರೆಂಥ ವ್ಯಕ್ತಿ ಎಂಬುದು ತಿಳಿಯುತ್ತದೆ.

Advertisement

ದೇಶ ಸ್ವಾತಂತ್ರ್ಯಗೊಂಡ ನಂತರ ಯಾವುದೇ ಅಧಿಕಾರಕ್ಕೆ ಆಸೆ ಪಡದ ನಿಸ್ವಾರ್ಥ ಜೀವಿ ಮಹಾತ್ಮ
ಗಾಂಧಿಯಾಗಿದ್ದರು ಎಂದು ವಿವರಿಸಿದರು. ಇದೇ ವೇಳೆ ಗಣ್ಯರು ಪ್ಲಾಸ್ಟಿಕ್‌ ತ್ಯಜಿಸುವ ಕುರಿತ ಬಿತ್ತಿ ಪತ್ರ ಬಿಡುಗಡೆ ಮಾಡಿದರು. ನಗರಸಭೆಯಿಂದ ಸಸಿಗಳನ್ನು ವಿತರಿಸಲಾಯಿತು. ಪ್ಲಾಸ್ಟಿಕ್‌ ಮುಕ್ತ ಪರಿಸರ ಪ್ರತಿಜ್ಞಾ ವಿಧಿ ಬೋಧಿ ಸಲಾಯಿತು.

ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ: ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿಯವರ ಜೀವನ ಚರಿತ್ರೆ ಸಾರುವ ಛಾಯಾಚಿತ್ರ ಪ್ರದರ್ಶನಕ್ಕೆ ಗಣ್ಯರು ಚಾಲನೆ ನೀಡಿದರು.

ಬೊಳುವಾರು ಮಹಮದ್‌ ಕುಂಞ ಅವರು ರಚಿಸಿರುವ ಪಾಪು ಬಾಪು ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ ಎಚ್‌.ಜಿ., ನಗರಸಭೆ ಸದಸ್ಯರು, ಸ್ಕೌಟ್ಸ್‌ ಗೈಡ್ಸ್‌ ಮತ್ತು ಸೇವಾದಳದ ವಿದ್ಯಾರ್ಥಿಗಳು ಸೇರಿ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.

ಪಿಡಿಒ ಮಹಮ್ಮದ್‌ ಅಲಂ ಪಾಷಾ ನಿರೂಪಿಸಿದರು. ಭಾರತ ಸೇವಾದಳದ ವಿದ್ಯಾಸಾಗರ ವಂದಿಸಿದರು. ಬಳಿಕ ರಾಯಚೂರು ನಗರ ಸಭೆ, ಗ್ರೀನ್‌ ರಾಯಚೂರು, ರೆಡ್‌ ಕ್ರಾಸ್‌ ಹಾಗೂ ವಿವಿಧ ಸಂಘಟನೆ ನೇತೃತ್ವದಲ್ಲಿ ಐತಿಹಾಸಿಕ ಕೋಟೆ ಸ್ವಚ್ಛತೆ
ಕಾರ್ಯಕ್ರಮ ಜರುಗಿತು. ನಗರಸಭೆ, ರೈಲು ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಸೇರಿ ವಿವಿಧ ಕಚೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಜಯಂತ್ಯುತ್ಸವ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next